ಕಲಾಪ್ರಪಂಚರಂಗಭೂಮಿ

ಕನ್ನಡ ರಂಗ ಭೂಮಿ ಮತ್ತು ವ್ರತ್ತಿ ನಾಟಕ ಕಂಪನಿಗಳು

ಕನ್ನಡದಲ್ಲಿ ಜನಪದ ರಂಗಭೂಮಿ, ವ್ರತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು.ಕನ್ನಡ ಜನಪದ ರಂಗ ಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ “ಸೀತಾ ಸ್ವಯಂವರ” ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬಯಿ ಪ್ರಾಂತ್ಯ ಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸೀ ಕಂಪನಿಗಳದ್ದೆ ನಾಟಕದಾಟ,ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು.ಈ ವೇಳೆಗೆ “ಶಾಂತ ಕವಿ’ಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು.ಸಮಗ್ರ ಕರ್ನಾಟಕ ವರ್ತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.

೧೮೫೬ನೆ ಜನವರಿ ೧೫ ರಂದು ಹುಟ್ಟಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬವರ ಪ್ರೋತ್ಸಾಹದಿಂದ ಹಲವಾರು ರುವಕರ ನೆರವಿನಿಂದ ೧೮೭೨ ರಲ್ಲಿ ‘ವೀರ ನಾರಾಯಣ ಪ್ರಸಾದಿತ ನಾಟಕ ಮಂಡಳಿ’ ಸ್ತಾಪಿಸಿದರು.ಈ ಮಂಡಳಿ ಉತ್ತರ ಕರ್ನಾಟಕದ ಪ್ರಥಮ ವ್ರತ್ತಿ ನಾಟಕ ಸಂಸ್ಥೆ. ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು ೧೮೭೯-೮೦ ರಲ್ಲಿ ಸಿ.ಆರ್.ರಘುನಾಥ ರಾಯರ ನೇತ್ರತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ “ಶ್ರೀ ಶಾಕುಂತಲ ಕರ್ನಾಟಕ ನಾಟಕ ಸಬಾ”ಎಂದು ಹೆಸರಿಟ್ಟುಕಾರ್ಯ ನಿರತರಾದರು.ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರ ರ ನೆರವಿನೊಂದಿಗೆ ೧೮೮೦ರಲ್ಲಿ ” ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ” ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗ ಭೂಮಿಗೆ ಭದ್ರ ಬುನಾದಿ ಹಾಕಿ ಸತ್ ಸಂಪ್ರ್ತದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು.”ನಮನ”

೧೮೮೨ರಲ್ಲಿ ಅರಮನೆಗೆ ಸೇರಿದ ವಿಧ್ಯಾರ್ಥಿಗಳು ಸೇರಿ “ಮೈಸೂರ್ ರಾಯಲ್ ಸ್ಕೂಲ್ ಡ್ರಾಮ್ಯಟಿಕ್ ಕಂಪನಿ”ಸ್ಥಾಪನೆಯಾಯಿತು,ಮುಂದೆ ಪೆರಿಸ್ವಾಮಿ ಅಯ್ಯಂಗಾರ್ -ಚಿನ್ನ ಸ್ವಾಮೀ ಅಯ್ಯಂಗಾರ್ ಸಹೋದರರ “ರಸಿಕ ಮನೋಲ್ಲಾಸಿನಿ ನಾಟಕ ಕಂಪನಿ”ಜನ್ಮ ತಾಳಿತು. ಮುಂದೆ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ನಿಂತ ಮೇಲೆ ಅದರಲ್ಲಿನ ಕೆಲವರು ಸೇರಿ ೧೯೧೯ ರಲ್ಲಿ “ಶ್ರೀ ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ”ಎಂದು ಏನ್,ಸುಬ್ಬಣ್ಣನವರ ನೇತ್ರತ್ವದಲ್ಲಿ ಮುನ್ನಡೆಯಿತು.ಇದರಲ್ಲಿ ಮುಂದೆ ಆರ್,ನಾಗೇಂದ್ರ ರಾವ್ ,ಮಳವಳ್ಳಿ ಸುಂದರಮ್ಮನವರು ಬೇರೆ ಬೇರೆ ಕಾಲದಲ್ಲಿ ಆಡಳಿತ ಹೊಣೆ ಹೊತ್ತರು.

ನಾಟ್ಯ ಶಿರೋಮಣಿ ವರದಾಚಾರ್ಯರು “ರತ್ನಾವಳಿ ನಾಟಕ ಸಭಾ” ೧೯೦೨ ರಲ್ಲಿ ಸ್ಥಾಪಿಸಿದರು,ಮೈಸೂರು ರಂಗ ಭೂಮಿಯಲ್ಲಿ ಮೊತ್ತ ಮೊದಲು ವಿದ್ಯುತ್ ಶಕ್ತಿಯ ಸಹಾಯದಿಂದ ದೀಪಾಲಂಕಾರ,ಬಣ್ಣಗಳ ವಿಧವನ್ನು ಅಳವಡಿಸಿದರು.

ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ ಗುಬ್ಬಿ. “ಶ್ರೀ ಗುಬ್ಬಿ ಚೆನ್ನ ಬಸವೇಶ್ವರ ಕ್ರಪಾ ಪೋಷಿತ ನಾಟಕ ಮಂಡಳಿ”೧೮೮೪ರಲ್ಲಿ ಗುಬ್ಬಿ ಚಂದಣ್ಣನವರ ನೇತ್ರತ್ವದಲ್ಲಿ ಹುಟ್ಟಿತು.

-ಕೃಪೆ : http://www.wikiwand.com/kn/ರಂಗಭೂಮಿ#/overview

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.