ಕವಿಸಮಯ

ಎತ್ತರದ ಶಿಖರದಲ್ಲಿ

ಭಾರತ ರತ್ನ ಮಾನ್ಯಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಊಂಚೆ ಪಹಾಡ್ ಪರ್ ಎಂಬ ಕವನದ ಭಾವಾನುವಾದ

ಭಾವಾನುವಾದ – ನೃತ್ಯಗುರು ಸಹನಾ ಚೇತನ್

ಎತ್ತರದ ಶಿಖರದಲ್ಲಿ,
ಮರಗಳೆಂದೂ ಬೆಳೆಯುವುದಿಲ್ಲ,
ಬಳ್ಳಿಗಳೂ ಮೊಳೆಯುವುದಿಲ್ಲ,
ಹುಲ್ಲುಗಳಂತು ಒಸರುವುದೇ ಇಲ್ಲ,

ಎಂತಾದರೂ ಮಡುಗಟ್ಟಿದರೆ ಅದು ಮಂಜುಗಡ್ಡೆ ಮಾತ್ರ
ಅದು ಹೆಣದ ಬಿಳಿ ಹೊದಿಕೆಯಂತೆ ಹಾಗೂ
ಸಾವಿನ ತರಹ ತಣ್ಣಗೆ ಶಾಂತವಾಗಿರುತ್ತದೆ.
ಲವಲವಿಕೆಯಲಿ ನಸುನಗುವ ನದಿ
ಅದೇ ರೂಪವನ್ನು ಧರಿಸಿ
ಬಿಂದು ಬಿಂದುವೂ ತನ್ನ ಭಾಗ್ಯವ ನೆನೆದು ರೋಧಿಸುತ್ತದೆ.

ಇಂತಹ ಎತ್ತರ,
ಅದರ ಗುಣ,
ನಿರ್ಮಲ ನೀರನ್ನೇ ಕಲ್ಲಾಗಿಸುತ್ತದೆ.

ಅಭಿನಂದನೆಗೆ ಅರ್ಹವು ಆ ಶಿಖರ,
ಚಾರಣಿಗರಿಗೆ ಆಮಂತ್ರಣಗಯ್ಯುವ ಚಹರ,
ಅದರ ಮೇಲೆ ಬಾವುಟವ ನೆಡಲು ಬಹುದು,
ಆದರೆ ಯಾವ ಪಕ್ಷಿಯೂ,
ಅಲ್ಲಿ ತನ್ನ ಗೂಡನ್ನು ಕಟ್ಟಲಾಗದು,
ಯಾವುದೇ ದಣಿದ ನಿರಾಶ್ರಿತ ಜೀವ
ಅದರ ನೆರಳಿನಲ್ಲಿ ಕೆಲ ಕ್ಷಣ ತನ್ನ ರೆಪ್ಪೆ ಮಿಟುಕಿಸಲಾದೀತಷ್ಟೇ.

ಸತ್ಯ ಅದೇನೆಂದರೆ
ಕೇವಲ ಎತ್ತರವೇ ಸಾರ್ವಭೌಮತ್ವವಲ್ಲ್ಲ,
ಎಲ್ಲಕ್ಕಿಂತ ಭಿನ್ನ – ಅವಿಚ್ಛಿನ್ನ,
ಪರಿಸರದಿಂದ ಸ್ವತಂತ್ರಗೊಂಡು ನಿಂತಿರುವ,
ತನ್ನವರಿಂದ ನಿಸ್ಸೂರೆಗೊಂಡ,
ಶೂನ್ಯದಿ ಏಕಾಂಗಿಯಾಗಿ ನಿಲ್ಲುವುದು,
ಶಿಖರದ ಪ್ರಯತ್ನಶೀಲತೆಯಲ್ಲ್ಲ
ಅಸಹಾಯಕತೆ|
ಎತ್ತರಕ್ಕೂ – ಆಳಕ್ಕೂ
ಆಕಾಶ ಪತಾಳದಷ್ಟು ಅಂತರವಿದೆ.
ಯಾರು ಎಷ್ಟೆತ್ತರಕ್ಕೇರುವರೋ
ಅಷ್ಟೇ ಏಕಾಂಗಿಯಾಗುತ್ತಾರೆ.
ಪ್ರತೀ ಬಾರೀಯೂ ತಂತಾನೆ ಶಪಿಸಿಕೊಳ್ಳುತ್ತಾ,
ಚಹರೆ ಮೇಲೆ ನಗುವನಂಟಿಸಿಕೊಂಡು,
ಮನದೊಳಗೇ ದುಃಖಿಸುತ್ತಾರೆ.

ಸತ್ಯಾಂಶವೆಂದರೆ
ಎತ್ತರದ ಜೊತೆಗೆ ವಿಸ್ತಾರದ ಅವಶ್ಯಕತೆ ಇದೆ
ಇದರಿಂದ ಮಾನವ
ಮೂರ್ಖನಾಗಿ ನಿಲ್ಲದೆ,
ಇತರರೊಡನೆ ಅರಿತು-ಬೆರೆತು,
ಯಾರನ್ನಾದರೂ ಜೊತೆಗೂಡಬೇಕು,
ಯಾರೊಟ್ಟಿಗಾದರೂ ಮುನ್ನಡಿ ಇಡಬೇಕು |

ಗುಂಪಿನಲ್ಲಿ ಕಳೆದು ಹೋಗುವುದು,
ನೆನಪಿನಲ್ಲಿ ಮುಳುಗಿ ಹೋಗುವುದು,
ನಮ್ಮನ್ನೇ ನಾವು ಮರೆಯುವುದು,
ನಮ್ಮ ಅಸ್ತಿತ್ವಕ್ಕೆ ಒಂದು ಅರ್ಥ,
ಹಾಗೂ ಜೀವನಕ್ಕೆ ನಿರ್ಮಲ ಸುಗಂಧವನ್ನೀಯುತ್ತದೆ |

ಈ ಭೂಮಿಗೆ ಕುಬ್ಜ ನಡೆಗಳದ್ದಲ್ಲ,
ಎತ್ತರದÀ ಹೆಜ್ಜೆಗಳನ್ನಿಡುವ ಆದರ್ಶ ವ್ಯಕ್ತಿಯ ಅವಶ್ಯಕತೆ ಇದೆ,
ಎಷ್ಟು ಎತ್ತರಕ್ಕೆಂದರೆ ಆಕಾಶವನ್ನೇ ಮುಟ್ಟಿ ಆನಂದಿಸುವಷ್ಟು,
ಹೊಸ ನಕ್ಷತ್ರಗಳಲ್ಲಿ ಹೊಸ ಪ್ರತಿಭೆಯ ಬೀಜ ಮೊಳೆಯುವಷ್ಟು,

ಆದರೆ ಅಷ್ಟೆತ್ತರಕ್ಕಲ್ಲ,
ಅಲ್ಲಿ ಕಾಲಿನಡಿಯಲ್ಲಿ ಧೂಳಿನ ಕಣಗಳೇ ಅಂಟಲಾರದಷ್ಟು,
ಮುಳ್ಳು ಚುಚ್ಚಲಾರದಷ್ಟು,
ಮೊಗ್ಗು ಅರಳಲಾರದಷ್ಟು |

ಅಲ್ಲಿ ವಸಂತನ ಚಿಗುರುವಿಕೆ ಇಲ್ಲದೆ, ಶರತ್ಕಾಲದ ತಂಪೆಲ್ಲ ದೂರ ಸರಿಯುವಷ್ಟು,
ಕೇವಲ ಉನ್ನತದ ಗೀಳು,
ಕೇವಲ ಕಾಡುವ ಏಕಾಂಗಿ ತನದ ಶಾಂತತೆ |

ಭಗವಂತಾ !
ಎನಗೆ ಅಷ್ಟೆತ್ತರದ ಪದವಿಯನ್ನು ಎಂದೂ ಅನುಗ್ರಹಿಸಬೇಡ,
ಅಲ್ಲಿ ಇತರರನ್ನು ಆಲಂಗಿಸಿ ಸಂತೈಸಲಾರದಷ್ಟು,
ಜಡಶುಷ್ಕತೆಯನ್ನು ಎಂದೆಂದಿಗೂ ಕರುಣಿಸಬೇಡಾ |

2) ऊँचे पहाड़ पर,

ऊँचे पहाड़ पर,
पेड़ नहीं लगते,
पौधे नहीं उगते,
न घास ही जमती है।
जमती है सिर्फ बर्फ,
जो, कफन की तरह सफेद और,
मौत की तरह ठंडी होती है।
खेलती, खिल-खिलाती नदी,
जिसका रूप धारण कर,
अपने भाग्य पर बूंद-बूंद रोती है।
ऐसी ऊँचाई,
जिसका परस
पानी को पत्थर कर दे,
ऐसी ऊँचाई
जिसका दरस हीन भाव भर दे,
अभिनन्दन की अधिकारी है,
आरोहियों के लिये आमंत्रण है,
उस पर झंडे गाड़े जा सकते हैं,
किन्तु कोई गौरैया,
वहाँ नीड़ नहीं बना सकती,
ना कोई थका-मांदा बटोही,
उसकी छांव में पलभर पलक ही झपका सकता है।

सच्चाई यह है कि
केवल ऊँचाई ही काफि नहीं होती,
सबसे अलग-थलग,
परिवेश से पृथक,
अपनों से कटा-बंटा,
शून्य में अकेला खड़ा होना,
पहाड़ की महानता नहीं,
मजबूरी है।
ऊँचाई और गहराई में
आकाश-पाताल की दूरी है।
जो जितना ऊँचा,
उतना एकाकी होता है,
हर भार को स्वयं ढोता है,
चेहरे पर मुस्कानें चिपका,
मन ही मन रोता है।

जरूरी यह है कि
ऊँचाई के साथ विस्तार भी हो,
जिससे मनुष्य,
ठूंट सा खड़ा न रहे,
औरों से घुले-मिले,
किसी को साथ ले,
किसी के संग चले।
भीड़ में खो जाना,
यादों में डूब जाना,
स्वयं को भूल जाना,
अस्तित्व को अर्थ,
जीवन को सुगंध देता है।
धरती को बौनों की नहीं,
ऊँचे कद के इन्सानों की जरूरत है।
इतने ऊँचे कि आसमान छू लें,
नये नक्षत्रों में प्रतिभा की बीज बो लें,
किन्तु इतने ऊँचे भी नहीं,
कि पाँव तले दूब ही न जमे,
कोई कांटा न चुभे,
कोई कलि न खिले।

न वसंत हो, न पतझड़,
हों सिर्फ ऊँचाई का अंधड़,
मात्र अकेलापन का सन्नाटा।

मेरे प्रभु!
मुझे इतनी ऊँचाई कभी मत देना,
गैरों को गले न लगा सकूँ,
इतनी रुखाई कभी मत देना।
– अटल बिहारी वाजपेयी

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.