ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ೨೦೧೭-೧೮ನೆಯ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಇದೇ ಭಾನುವಾರ ಜನವರಿ ಇಪ್ಪತ್ತೊಂದರಂದು ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಟೌನ್ ಶಿಪ್ ನ ಗುಡ್ಡದ ಮೇಲಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಒಳಾಂಗಣ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ ಎರಡು ಗಂಟೆಯಿಂದ ವಿದ್ಯಾರ್ಥಿಗಳ ಒಂದನೆಯ ಅವಧಿಯ ಸಂಗೀತ ಕಛೇರಿಗಳು ಆರಂಭವಾಗುತ್ತದೆ. ಮೂರು ಗಂಟೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಂಠದಲ್ಲಿ ಪಿಳ್ಳಾರಿ ಗೀತೆಗಳು ಹಾಗೂ ಸಂಚಾರಿ ಗೀತೆಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಉಧ್ಘಾಟನೆಗೊಳ್ಳಲಿದೆ. ಸಂಗೀತಾಭಿಮಾನಿ ಹಾಗೂ ಉದ್ಯಮಿ ಲಹರಿ ವೇಲು ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ನ್ಯಾಯಾದೀಶರಾದ ಗಂಗಾಧರ್, ಹೆಚ್.ಎನ್ ರಾಘವೇಂದ್ರ ಗುರೂಜಿ, ಖ್ಯಾತ ಹಿನ್ನೆಲೆ ಗಾಯಕಿ ಸುಮಾ ಎಲ್.ಎನ್ ಶಾಸ್ತ್ರಿ, ಆಲ್ ಇಂಡಿಯಾ ಕಾನ್ಫರೆನ್ಸ್ ಆಫ್ ಇಂಟಲೆಕ್ಚುಯಲ್ಸ್ ಕಾರ್ಯದರ್ಶಿಯಾದ ಶಿವಶಂಕರಾಚಾರ್, ಲತಾ ಶ್ರೀಧರ್, ಮಹೇಂದ್ರ ಮುನ್ನತ್ ಹಾಗೂ ಲಕ್ಷ್ಮೀನಾರಾಯಣ ಶರ್ಮಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕ ಹಾಗೂ ಪ್ರಾಂಶುಪಾಲಕ ಚಿನ್ಮಯ ಎಂ.ರಾವ್, ಅಕಾಡೆಮಿಯ ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್, ಅಕಾಡೆಮಿಯ ಗೌರವ ಸಲಹೆಗಾರರಾದ ಉದ್ಯಮಿ ರಾಜೇಶ್ ಬಾಬು ಈ ಸಂದರ್ಭದಲ್ಲಿ ವೇದಿಕೆಯಲ್ಲಿರಲಿದ್ದಾರೆ. ಎರಡನೆಯ ಹಾಗೂ ಮೂರನೆಯ ಅವಧಿಯ ಸಂಗೀತ ಕಛೇರಿಗಳು ಮಧ್ಯಾಹ್ನ ೪ ರಿಂದ ೬-೩೦ರವರೆಗೆ ನಡೆಯುತ್ತವೆ. ಅಕಾಡೆಮಿಯ ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದ ವಿದ್ಯಾರ್ಥಿಸಂಗೀತ ಕಛೇರಿಗಳು ನಡೆಯುತ್ತವೆ. ಪಿಟೀಲು ವಿದ್ವಾನ್ ಬಳ್ಳಾರಿ ಸುರೇಶ್ ಹಾಗೂ ಮೃದಂಗ ವಿದ್ವಾನ್ ರಮೇಶ್ ಅವರು ಪಕ್ಕವಾದ್ಯದಲ್ಲಿ ಸಹಕರಿಸಲಿದ್ದಾರೆ.
ಸಂಜೆ ೬-೩೦ಕ್ಕೆ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀ. ಡಿ.ಕೆ ಸುರೇಶ್, ಎಸ್.ಜೆ ಜಯರಾಮೇ ಗೌಡ, ಖ್ಯಾತ ನಟ ದಿಗಂತ್, ಬಿ.ಬಿ.ಎಂಪಿ ಆಯುಕ್ತಾರಾದ ಡಾ.ಎಂ.ಹೆಚ್ ತಿಪ್ಪೇಸ್ವಾಮಿ, ಸಿ.ಸಿ ಬಿಯ ಆಯುಕ್ತರಾದ ಸತೀಶ್ ಕುಮಾರ್,ಕ.ರ.ವೇ. ಮುಖಂಡರಾದ ಧರ್ಮರಾಜಗೌಡ, ಸಮಾಜ ಸೇವಕರಾದ ಎಂ.ರಾಜ್ ಕುಮಾರ್ ಹಾಗೂ ಉದ್ಯಮಿ ಜಗನ್ನಾಥ ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಸಮಾರೋಪದ ನಂತರದ ವಿದ್ಯಾರ್ಥಿಗಳಿಂದ ನಾಲ್ಕನೆಯ ಅವಧಿಯ ಸಂಗೀತ ಕಛೇರಿಗಳು ನಡೆಯುತ್ತವೆ. ಕಡೆಯದಾಗಿ ಮತ್ತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಏಕಕಂಠದಲ್ಲಿ ಪಿಳ್ಳಾರಿ ಗೀತೆಗಳು ಹಾಗೂ ಸಂಚಾರಿ ಗೀತೆಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಕಿರುಪರಿಚಯ :
ಯುವ ಸಂಗೀತ ನಿರ್ದೇಶಕ ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಕಲಾವಿದ ಚಿನ್ಮಯ ಎಂ.ರಾವ್ ಅವರ ಪರಿಕಲ್ಪನೆಯಲ್ಲಿ ೨೦೧೫ರಲ್ಲಿ ಸಂಸ್ಥಾಪಿಸಲ್ಪಟ್ಟ ಸಂಸ್ಥೆಯೇ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಿವಿಧ ಶಾಖೆಗಳನ್ನು ಹೊಂದಿದ್ದು ಅಲ್ಲೆಲ್ಲಾ ಸ್ವತಹ ಚಿನ್ಮಯ ಎಂ.ರಾವ್ ಅವರೇ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಪ್ರಾಂಶುಪಾಲಕರಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ವಿಶೇಷವಾಗಿ ಯುವಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಯುವಪೀಳಿಗೆಯನ್ನು ಶಾಸ್ತ್ರೀಯ ಸಂಗೀತದ ಸಾಧನೆಯತ್ತ ಕೊಂಡೊಯ್ಯಲು ಸಂಸ್ಥೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
೧೯-೧-೨೦೧೮
https://www.youtube.com/watch?v=rUG8JbJ8eE8&t=6s