ಕವಿಸಮಯಸಾಹಿತ್ಯ

ಇವಳೇ ಹೆಣ್ಣು…

DEEPAK KORADI– ದೀಪಕ್ ಕೋರಡಿ

ಕಣ್ ಬಿಡುವ ಮುನ್ನವೇ
ಎದೆಗಪ್ಪಿಕೊಂಡಳು,
ಮಮತೆಯ ಬೆರೆಸಿದ
ಅಮೃತವನೆರೆದಳು,
ಅಂದಿನಿಂದ ಇಂದಿಗೂ
ಪೊರೆಯುತಲೇ ಇಹಳು – ಅಮ್ಮ..

ಹಣ್ಣುಗೂದಲ ಹೊತ್ತು
ಸವಿಮಾತ ನುಡಿವಳು,
ಕಥೆಗಳ ಪಲ್ಲಂಗದಲಿ
ಸುಖನಿದ್ರೆ ತರಿಸುವಳು,
ಪೆಟ್ಟುತಿಂದು ಅತ್ತಾಗ
ಓಡೋಡಿಬರುವಳು – ಅಜ್ಜಿ..

ಸುರಿಮಳೆಯಲಿ ತಾ ನೆಂದು
ನನ್ನ ರಕ್ಷಿಸುತ್ತಿದ್ದಳು,
ಬುತ್ತಿಯನ್ನು ಶಾಲೆತನಕ
ಹೊತ್ತು ತರುತ್ತಿದ್ದಳು,
ಅಂಗಳದಲ್ಲಿ ಆಡುವಾಗ
ಅಕ್ಕರೆಯ ಹಂಚುತಿದ್ದಳು – ಅಕ್ಕ..

ನನ್ನೆಲ್ಲಾ ಭಾವನೆಗಳಿಗೆ
ಬುನಾದಿಯಾಗಿ ನಿಂತಿಹಳು,
ನಾ ಕಾಣುವ ಕನಸನೆಲ್ಲಾ
ಮಕ್ಕಳಂತೆ ಸಾಕುತಿಹಳು,
ಒಂಟಿತನವು ಕಾಡುವಾಗ
ಮರುಜೀವ ತುಂಬುವಳು – ಮಡದಿ..

ಕತ್ತಲ ಹಾದಿ ಹಿಡಿದಾಗ
ದಾರಿದೀಪ ತೋರುವಳು,
ದುಗುಡವನ್ನು ದೂಡುವಲ್ಲಿ
ಸಹಾಯಹಸ್ತ ನೀಡುವಳು,
ನೋವು-ನಲಿವಲಿ ಜೊತೆಯಾಗಿ
ನೆರಳಂತೆ ನಿಲ್ಲುವಳು – ಗೆಳತಿ..

(12-3-2012)

Dr.Chinmaya Rao

Dr.Chinmaya M.Rao who is the Founder, Editor and Publisher of KANNADA TIMES, who is from Honagodu, Sagar taluk, Shimoga district, is a significant figure in the world of music. Though born in a family of agriculturists, Rao showed love for music and literature throughout his childhood. For more details visit : https://www.facebook.com/chinmaya.m.rao
Back to top button

Adblock Detected

Please consider supporting us by disabling your ad blocker