ಸ್ಯಾಂಡಲ್ ವುಡ್

ಬೆಂಗಳೂರಿನಲ್ಲಿ ‘ಕೋಬ್ರಾ’ ಕ್ರೇಜ್…ಚಿಯಾನ್ ವಿಕ್ರಮ್ ನೋಡಲು ಮುಗಿಬಿದ್ದ ಫ್ಯಾನ್ಸ್

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೋಬ್ರಾ ರಿಲೀಸ್ ಗೆ ಸಜ್ಜಾಗಿದೆ. ಇದೇ 31ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಮೋಷನ್ ನಡೆಸ್ತಿದೆ. ನಿನ್ನೆ ಕೇರಳದಲ್ಲಿ ಪ್ರಚಾರದ ಭರಾಟೆ ಮುಗಿಸಿದ ಕೋಬ್ರಾ ಬಳಗ ಇವತ್ತು ಬೆಂಗಳೂರಿಗೆ ಆಗಮಿಸಿತ್ತು. ಚಿತ್ರದ ನಾಯಕ ಚಿಯಾಮ್ ವಿಕ್ರಮ್ ಸೇರಿದಂತೆ ಮೂವರು ನಾಯಕರು ಮಾಧ್ಯಮದ ಮುಂದೆ ಹಾಜರಾಗಿ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ವಿಕ್ರಮ್ ನೋಡಲು ಅಭಿಮಾನಿಗಳ ದಂಡೇ ಸೇರಿತ್ತು.

ಚಿಯಾನ್ ವಿಕ್ರಮ್ ಮಾತನಾಡಿ, ಪುನೀತ್ ನೆನಪು ಮಾಡಿಕೊಂಡ ವಿಕ್ರಮ್, ಅಪ್ಪು ಕಳೆದುಕೊಂಡಿರೋದು ಸಿನಿಮಾ ಇಂಡಸ್ಟ್ರೀಗೆ ಬಹಳ ನಷ್ಟವಾಗಿದೆ. ಕೋಬ್ರಾ ಆಕ್ಷನ್ ಥ್ರಿಲ್ಲರ್, ಸೈನ್ಸ್ ಫಿಕ್ಷನ್ಸ್ ಸಿನಿಮಾವಾಗಿದ್ದು, ನಾನು 8 ರಿಂದ 9 ಗೆಟಪ್ ಸಿನಿಮಾದಲ್ಲಿದೆ ಕಾಣಿಸಿಕೊಂಡಿದ್ದೇನೆ. ನನ್ನ ಹಳೆ ಸಿನಿಮಾಗಳಿಗೆ ಹೋಲಿಕೆ ಮಾಡಿದ್ರೆ ಈ ಚಿತ್ರವೇ ಬೇರೆ.. ಕನ್ನಡದಲ್ಲಿ ಈ ಸಿನಿಮಾಗೆ ನಾನೇ ಡಬ್ಬ್ ಮಾಡಿದ್ದೇನೆ. ಆದ್ರೆ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವಂ ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಲು ಆಗಲಿಲ್ಲ. ಕೆಜಿಎಫ್ ಸೂಪರ್ ಹಿಟ್ ಆಗಿದೆ. ನಾನು ಯಶ್ ಒಳ್ಳೆ ಫ್ರೆಂಡ್ಸ್ ಎಂದ ವಿಕ್ರಮ್ ಕನ್ನಡದಲ್ಲಿ ಲೂಸಿಯಾ ಪವನ್ ಹೇಳಿದ ಕಥೆ ಇಷ್ಟವಾಗಿದ್ದು ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ತಿಳಿಸಿದರು.

ಶ್ರೀನಿಧಿ ಶೆಟ್ಟಿ, ನಾನು ಈ ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಿದ್ದೇನೆ. ಅದು ಒಂದೇ ದಿನದಲ್ಲಿಯೇ. ಇದು ನಮ್ಮ ಮನೆ. ಇಲ್ಲಿಗೆ ಬಂದಾಗ ಖುಷಿಯಾಗುತ್ತದೆ. ಕನ್ನಡದ ಒಳ್ಳೆ ಕಥೆಗಳು ಬಂದ್ರೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುತ್ತೇನೆ ಎಂದರು.

ಕೋಬ್ರಾ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಕೆಜಿಎಫ್ ಬಳಿಕ ಶ್ರೀನಿಧಿ ನಟಿಸಿರುವ ಮೊದಲ ಸಿನಿಮಾ ಇದಾಗಿದ್ದು ಸಹಜವಾಗಿ ನಿರೀಕ್ಷೆಗಳು ದುಪ್ಪಟ್ಟಿವೆ. ಖ್ಯಾತ ಕ್ರಿಕೆಟರ್ ಇಫ್ರಾನ್ ಪಠಾಣ್ ಕೂಡ ಮುಖ್ಯಭೂಮಿಯೆಲ್ಲಿ ಕಾಣಸಿಕೊಂಡಿದ್ದಾರೆ. ಅಜಯ್ ಜ್ಞಾನಮುತ್ತು ನಿರ್ದೇಶನದ ಈ ಚಿತ್ರವನ್ನು ಲಲಿತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆಯ ಈ ಚಿತ್ರ ಇದೇ ಆಗಸ್ಟ್ 31ಕ್ಕೆವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಕರ್ನಾಟಕದಲ್ಲಿ ಹಾರಿಜೋನ್ ಸ್ಟುಡಿಯೊಸ್ ಬಿಡುಗಡೆ ಮಾಡಲಿದ್ದಾರೆ.

Related Articles

Back to top button

Adblock Detected

Kindly unblock this website.