ಕವಿಸಮಯ

ಕಾಲಚಕ್ರದ ದೊಡ್ಡತನ ಸಣ್ಣತನದಲ್ಲಿ

-ಡಾ.ಚಿನ್ಮಯ ಎಂ.ರಾವ್, ಹೊನಗೋಡು

ಸಣ್ಣಗಾಗುತ್ತಲೇ ಇರುವೆ
ದೊಡ್ಡವನಾಗುವ ಭರದಲ್ಲಿ
ಸಣ್ಣತನವನ್ನು ದಾಟುತ್ತಲಿರುವೆ
ದೊಡ್ಡವನಾಗುವ ದಿಸೆಯಲ್ಲಿ

ಸಣ್ಣವರ ದೊಡ್ಡತನವನ್ನೂ
ದೊಡ್ಡವರ ಸಣ್ಣತನವನ್ನೂ
ಜಗವೆಲ್ಲ ಮರೆಮಾಚುವಾಗ
ದೊಡ್ಡವರ ದೊಡ್ಡತನವನ್ನೂ
ಸಣ್ಣವರ ಸಣ್ಣತನವನ್ನೂ
ಜನರೆಲ್ಲ ಬಗೆಬಗೆಯಲ್ಲಿ
ಬಣ್ಣಿಸುವಾಗ
ಸಣ್ಣಗಾಗುತ್ತಲೇ ಇರುವೆ
ನಾ ದೊಡ್ಡವನಾಗುವ ದಾರಿಯಲ್ಲೇ
ತೆವಳುತ್ತ ವರ್ತಮಾನದ
ವಾಸ್ತವಕ್ಕೆ ಚೂರುಚೂರಾದ
ಕನ್ನಡಿಗಳನ್ನು ಹಿಡಿದು
ಸಣ್ಣತನವನ್ನೂ ದೊಡ್ಡತನವನ್ನೂ
ಹಲವಾರು ಪ್ರತಿಬಿಂಬಗಳಿಂದ
ಅಳೆದು ಸುರಿಯುತ್ತಲೇ ಇರುವೆ

ದೊಡ್ಡ ಕಾರಣವೇ ಸಾಕು ದೊಡ್ಡವರಾಗಲು
ಸಣ್ಣ ಕಾರಣವೇ ಸಾಕು ಸಣ್ಣವರಾಗಲು
ದೊಡ್ಡವರ ಸಣ್ಣತಪ್ಪಿನಿಂದ
ಸಣ್ಣವರೂ ದೊಡ್ಡವರಾಗಿ ಬಿಡುವ
ವಿಧದಲ್ಲಿ ದೊಡ್ಡವರಾಗುವುದು
ಅಪಾಯಕಾರಿಯೇ…ಮುಂದೊಮ್ಮೆ
ದೊಡ್ಡವರ ಸಣ್ಣ ತಪ್ಪಿನಿಂದ
ಸಣ್ಣವರೇ ಆಗಿಬಿಡುವ
ಸಾಲಿನಲ್ಲಿ ಸೇರಿಬಿಡಬಹುದು

ದೊಡ್ಡವರ ಸಣ್ಣ ದನಿಗೂ
ಬೆಲೆ ಇರುವಲ್ಲಿ
ಸಣ್ಣವರ ದೊಡ್ಡ ದನಿಗೂ
ಬೆಲೆ ಇರದಲ್ಲಿ
ಸಣ್ಣ ದನಿಯಿಂದಲೇ
ದೊಡ್ಡವರಾಗುವ ದೊಡ್ಡತನ
ದೊಡ್ಡದನಿಯಿಂದಲೇ ಸಣ್ಣವನೂ
ಆಗಿಬಿಡುವ ದಡ್ಡತನ
ಏನೇನು ಬರೆದಿದೆಯೋ
ಈ ಕಾಲಚಕ್ರದ ದೊಡ್ಡತನ ಸಣ್ಣತನದ
ಹಣೆಬರಹದಲ್ಲಿ..!

-ಡಾ.ಚಿನ್ಮಯ ಎಂ.ರಾವ್, ಹೊನಗೋಡು

Mar 14, 2019

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.