ಕಾಲಿವುಡ್

‘ಪೊನ್ನಿಯಿನ್ ಸೆಲ್ವನ್-2’ ಟ್ರೇಲರ್ ರಿಲೀಸ್..ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ..

ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ ಪೊನ್ನಿಯೆನ್ ಸೆಲ್ವನ್-2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ನಿನ್ನೆ ಸಂಜೆ ಅದ್ಧೂರಿಯಾಗಿ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉಳಗನಾಯಗನ್ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ರು. ಟ್ರೇಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ತ್ರಿಯ, ಜಯಂರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧಾರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪೊನ್ನಿಯಿನ್ ಸೆಲ್ವನ್ 500 ಕೋಟಿ ಬಾಚಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಲೈಕಾ ಪ್ರೊಡಕ್ಷನ್ ಜೊತೆಗೂಡಿ ಮಣಿರತ್ನಂ ನಿರ್ಮಿಸಿ ನಿರ್ದೇಶಿಸಿರುವ ಪೊನ್ನಿಯಿನ್ ಸೆಲ್ವನ್-2 ಸೀಕ್ವೆಲ್ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆ ನೂರ್ಮಡಿಗೊಳಿಸಿದೆ.

ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ..ಅದ್ಧೂರಿ ಮೇಕಿಂಗ್, ಬೃಹತ್ ಸೆಟ್ ಗಳು ಟ್ರೇಲರ್ ನಲ್ಲಿ ಝಗಮಗಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯಿನ್ ಸೆಲ್ವನ್-2 ಮೊದಲ ನೋಟ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ ಸಿನಿಮಾಕ್ಕಿದೆ.

ಟ್ರೇಲರ್ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಮಣಿರತ್ನಂ ತಂಡ ಕಟ್ಟಿಕೊಂಡು ಹೊರರಾಜ್ಯಗಳಲ್ಲಿಯೂ ಪ್ರಮೋಷನ್ ಶುರು ಮಾಡಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯಿನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ಐಶ್ವರ್ಯ ರೈ, ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ದೊಡ್ಡ ಕ್ಯಾನ್ವಸ್ ಚಿತ್ರದಲ್ಲಿದೆ.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.