ಕಾಲಿವುಡ್ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ವಿಶ್ವಾದ್ಯಂತ ರಿಲೀಸ್ ಮಾಡಲಿರುವ ಮಿಷನ್: ಚಾಪ್ಟರ್-1 ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಬಹುಭಾಷೆಯಲ್ಲಿ ಅದ್ಧೂರಿಯಾಗಿ ಎಂ ರಾಜಶೇಖರ್ ಹಾಗೂ ಎಸ್ ಸ್ವಾತಿ ನಿರ್ಮಿಸಿರುವ ಈ ಚಿತ್ರದಲ್ಲಿ ನಾಯಕ ಅರುಣ್ ವಿಜಯ್ ಡ್ಯಾಷಿಂಗ್ ಎಂಟ್ರಿ, ಭರ್ಜರಿ ಆಕ್ಷನ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಲಂಡನ್ ಜೈಲೊಂದರಲ್ಲಿ ತೆರೆದುಕೊಳ್ಳುವ ಟೀಸರ್ ತುಣುಕಿನಲ್ಲಿ ಜೈಲಿನ ನಡೆಯುವ ರೋಚಕ ತಿರುವುಗಳು, ಜೈಲು ಅಧಿಕಾರಿಯಾಗಿ ಆಮಿ ಜಾಕ್ಸನ್ ಅಬ್ಬರ, ಹೊಡೆದಾಟ ಬಡಿದಾಟದ ದೃಶ್ಯದ ಟೀಸರ್ ಗೆ ಮಾಸ್ ಪ್ರಿಯರು ಫಿದಾ ಆಗಿದ್ದಾರೆ. ಅಪ್ಪ ಮಗಳ ಬಾಂಧವ್ಯ ಟೀಸರ್ ನ ಮತ್ತೊಂದು ಹೈಲೆಟ್.
ಇಂಡಿಯನ್, 2.0 ಕೈದಿ-150 ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ಮಿಸಿ ಗೆದ್ದಿರುವ ಪೊನ್ನಿಯಿನ್ ಸೆಲ್ವನ್-2 , ಇಂಡಿಯನ್2 ಸೇರಿದಂತೆ ಮಗದೊಂದಿಷ್ಟು ಪ್ರಾಜೆಕ್ಟ್ ನಿರ್ಮಿಸುತ್ತಿರುವ ಸುಭಾಷ್ ಕರಣ್ ಮಿಷನ್: ಚಾಪ್ಟರ್-1 ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದ್ದಾರೆ. ವಿಭಿನ್ನ ಬಗೆಯ ಹಾಗೂ ಹೊಸಬಗೆಯ ಚಿತ್ರಗಳನ್ನು ನಿರ್ಮಿಸಿ,ವಿತರಿಸುತ್ತಿರುವ ಲೈಕಾ ಈ ಚಿತ್ರವನ್ನು ತಮಿಳು, ತೆಲುಗು , ಮಲಯಾಳಂ ಹಾಗೂ ಕನ್ನಡದಲ್ಲಿ ರಿಲೀಸ್ ಮಾಡಲಿದ್ದಾರೆ. ಅರುಣ್ ವಿಜಯ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಮಿಷನ್: ಚಾಪ್ಟರ್-1 ಗೆ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ.