ಸ್ಯಾಂಡಲ್ ವುಡ್

ವಿಭಿನ್ನ ಶೀರ್ಷಿಕೆ ‘ಮಂಕು ಭಾಯ್ ಫಾಕ್ಸಿ ರಾಣಿ’ ಬಿಡುಗಡೆಗೆ ರೆಡಿ…ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಚೊಚ್ಚಲ ಸಿನಿಮಾ ಕನಸು ಇದು

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಡಿಫರೆಂಟ್ ಟೈಟಲ್ ಸಿನಿಮಾಗಳು ಬರುತ್ತಿವೆ. ಈ ವಿಭಿನ್ನ ಶೀರ್ಷಿಕೆಗಳಿಂದಲೇ ಸಿನಿಪ್ರಿಯರನ್ನು ಚಿತ್ರದತ್ತ ಆಕರ್ಷಿಸಿಸುವ ಟ್ರೆಂಡ್ ಶುರುವಾಗಿದೆ. ಈಗ ಅಂಥದೇ ಮತ್ತೊಂದು ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಅದುವೇ ಮಂಕು ಭಾಯ್ ಫಾಕ್ಸಿ ರಾಣಿ. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮೋತ್ಸಾಹಿಗಳ ತಂಡವೇ ಸೇರಿಕೊಂಡು ತಯಾರಿಸಿರುವ ಈ ಚಿತ್ರ ಸೆನ್ಸಾರ್ ಪಾಸಾಗಿ ರಿಲೀಸ್ ಗೆ ಸಜ್ಜಾಗಿದೆ.

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಬ್ರಹ್ಮಗಂಟು ಸೀರಿಯಲ್ ಕಲಾವಿದೆ ಗೀತಾ ಭಾರತಿ ಭಟ್ ಅಭಿನಯಿಸಿದ್ದಾರೆ. ಖ್ಯಾತ ಕಲಾವಿದ ಪ್ರಕಾಶ್‌ ತೂಮಿನಾಡ್‌, ಪಂಚಮಿ ರಾವ್‌, ಅರ್ಜುನ್‌ ಕಜೆ ತಾರಾಬಳಗದಲ್ಲಿದ್ದಾರೆ. ತುಳು ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಗಗನ್ ಎಂ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಎಂ.ಕೆ .ಕೆ.ಷಹಜನ್‌ ಛಾಯಾಗ್ರಹಣ, ವಿನ್ಯಾಸ್‌ ಮದ್ಯ ಶಮೀರ್ ಮುಡಿಪು ಸಂಗೀತ ಹಾಗೂ ಸುಶಾಂತ್‌ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನವಿದೆ. ಜೋಶ್ವ ಜೈಶಾನ್ ಕ್ರಾಸ್ತ ನಿರ್ಮಾಣ ಮಾಡಿರುವ ಈ ಚಿತ್ರದ ಫಸ್ಟ್ ಟ್ರ್ಯಾಕ್ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋನು‌ ನಿಗಂ ಕಂಠದಲ್ಲಿ ಮೂಡಿಬಂದಿರುವ ಮಿಂಚಂತೆ ಮಿನುಗುತಿರೊ ಎಂಬ ಹಾಡು ಎ೨ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತಿದೆ.

Related Articles

Back to top button

Adblock Detected

Kindly unblock this website.