ಕವಿಸಮಯ

ಗ್ರಹಣ

p-t-shankaranarayana-hegde-ಪಿ.ಟಿ ಶಂಕರನಾರಾಯಣ ಹೆಗಡೆ 

ಪುರಪ್ಪೆಮನೆ

ಜೀವಕೋಟಿ ಬ್ರಹ್ಮಾಂಡ ಬೆಳಗುವ
ಸೂರ್ಯದೇವನಿಗೆ ಬಿಟ್ಟಿಲ್ಲ ಗ್ರಹಣ
ಚಂದ್ರದೇವನಿಗೂ ಬಿಟ್ಟಿಲ್ಲ ಗ್ರಹಣ

ಪರಶಿವನಿಗೂ ಬಿಟ್ಟಿಲ್ಲ
ಭಿಕ್ಷಾ ಯಾಚನೆಯ ಕಾಟ
ಶ್ರೀರಾಮನಿಗೆ ವನವಾಸ
ಶ್ರೀಕೃಷ್ಣನಿಗೆ ಸೆರೆವಾಸ
ರಾಜ ಹರಿಶ್ಚಂದ್ರನಿಗೆ ಸ್ಮಶಾನವಾಸ
ಪಾಂಡವರಿಗೆ ವನವಾಸ

ಹರಿಹರರಿಗೆ ಬಿಟ್ಟಿಲ್ಲ
ಋಷಿ ಮುನಿಗಳಿಗೂ ಬಿಟ್ಟಿಲ್ಲ
ಯತಿವರೇಣ್ಯರಿಗೂ ಬಿಟ್ಟಿಲ್ಲ
ಗುರುವರ್ಯರಿಗೂ ಬಿಟ್ಟಿಲ್ಲ
ರಕ್ಕಸಿ ಮಾಯಾ ಪೂತನಿಯ ಕಾಟ
ಅದೇ ಅವಳ ಪರಿಪಾಠ

ಕಾರ್ಮೋಡ ಸರಿಯುತಿದೆ
ಭುವಿಗೆ ಬೆಳಕು ಬರುತಿದೆ
ಕೋಟಿಸೂರ್ಯನ ದಿವ್ಯಪ್ರಭೆಗೆ
ಕಾರ್ಮೋಡ ನುಚ್ಚು ನೂರಾಗಿದೆ
ಗುಡುಗು ಮಿಂಚಿನ ಆರ್ಭಟದ
ಸದ್ದಂತೂ ಅಡಗಿಹೋಗಿದೆ !

****

Related Articles

Check Also
Close
Back to top button