
ಕಳೆದ ಡಿಸೆಂಬರ್ ಹದಿನಾರರಂದು ಬೆಂಗಳೂರಿನ ಆಲ್ಪೈನ್ ಪಬ್ಲಿಕ್ ಸ್ಕೂಲಿನ ವಾರ್ಷಿಕೋತ್ಸವದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್ ನಿಸ್ಸಾರ್ ಅಹಮದ್ ಅವರ “ಜೋಗದ ಸಿರಿ ಬೆಳಕಿನಲ್ಲಿ” ಗೀತೆಯನ್ನು 205 ವಿದ್ಯಾರ್ಥಿಗಳು ವಾದ್ಯಸಂಗೀತಕ್ಕೆ ಏಕಕಂಠದಲ್ಲಿ ಹಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದರು. ಸಂಗೀತ ಶಿಕ್ಷಕ ಚಿನ್ಮಯ ಎಂ.ರಾವ್ ಅವರ ಮಾರ್ಗದರ್ಶನದಲ್ಲಿ ಈ ಹೊಸ ದಾಖಲೆ ನಿರ್ಮಾಣವಾಯಿತು.

ಶಾಲೆಯೊಂದರಲ್ಲಿ 4, 5 ಹಾಗು ಆರನೆಯ ತರಗತಿಯ ಮಕ್ಕಳು ಅದೂ ಇಷ್ಟೊಂದು ಪ್ರಮಾಣದಲ್ಲಿ ವಾದ್ಯ ಸಂಗೀತಕ್ಕೆ ತಪ್ಪಿಲ್ಲದಂತೆ ಸುಶ್ರಾವ್ಯವಾಗಿ ಹಾಡಿದ್ದು ದಾಖಲಾರ್ಹ ಸಂಗತಿಯಾಗಿದೆ.
ಸುಮಾರು ಹದಿನೈದು ವರ್ಷಗಳ ಹಿಂದೆ “ಅನಿಕೇತನ” ಎಂಬ ಧ್ವನಿಸುರುಳಿಯ ಹಾಡುಗಳನ್ನು ವಾದ್ಯಸಂಗೀತದ ಜೊತೆ ನೂರು ಗಾಯಕರಿಗೆ ತರಬೇತಿ ನೀಡಿ ಕರ್ನಾಟಕದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಹಾಡಿಸಿ ಯಶಸ್ವಿಯಾಗಿದ್ದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ದಿವಂಗತ ಸಿ.ಅಶ್ವಥ್ ಇಂಥದ್ದೊಂದು ಕಷ್ಟಸಾಧ್ಯ ಪ್ರಯೋಗಕ್ಕೆ ತಮಗೆ ಪ್ರೇರಣೆ ಎಂದು ಈ ಹೊಸ ದಾಖಲೆಯ ಬಗ್ಗೆ ಆಲ್ಪೈನ್ ಪಬ್ಲಿಕ್ ಸ್ಕೂಲಿನ ಸಂಗೀತ ಶಿಕ್ಷಕ ಹಾಗೂ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಶಾಲೆಯಲ್ಲೂ ಇಂತಹ ಕ್ಲಿಷ್ಟಕರ ಪ್ರಯೋಗವನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರಾಂಶುಪಾಲಕಿ ಜಯಲಕ್ಷ್ಮೀ ಶಾಸ್ತ್ರಿ, ಎಲ್ಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಇಡೀ ಸಿಬ್ಬಂದಿ ವರ್ಗವನ್ನು ಸಂಗೀತ ಶಿಕ್ಷಕ ಚಿನ್ಮಯ ಎಂ.ರಾವ್ ಈ ಸಂದರ್ಭದಲ್ಲಿ ಸ್ಮರಿಸಿದರು.
20-12-2016
http://kannadatimes.com/history-created-by-alpine-public-school-students-205-students-sang-jogada-siri-belakinalli/