ಸಂಗೀತ ಸಮಯಸ್ವರಮೇಧಾ ಸಂಗೀತ ವಿದ್ಯಾಲಯ

ವಿಶ್ವಶಾಂತಿಗಾಗಿ ಸಂಗೀತ…! ಸಂಗೀತ ಶಿಕ್ಷಣಕ್ಕೊಂದು ಹೊಸಭಾಷ್ಯ…

ಸ್ವರಮೇಧಾ ಇಂಟರ್ ನ್ಯಾಶನಲ್ ಮ್ಯೂಸಿಕ್ ಅಕಾಡೆಮಿ ಹುಟ್ಟಿದ ಪರಿ.... ನಡೆದು ಬಂದ ಹಾದಿ...ಮುಂದಿನ ಗುರಿ..

02 Chinmaya Rao Facebookಸ್ವರಮೇಧಾ ಇಂಟರ್ ನ್ಯಾಶನಲ್ ಮ್ಯೂಸಿಕ್ ಅಕಾಡೆಮಿ ಹುಟ್ಟಿದ ಪರಿ….

ನಡೆದು ಬಂದ ಹಾದಿ…ಮುಂದಿನ ಗುರಿ…

ಸುಮಾರು ಇಪ್ಪತ್ತು ವರ್ಷಗಳಿಂದ ಹಲವು ಗುರುಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸಾಧನೆ ಮಾಡಿಕೊಂಡು ಬಂದಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊನಗೋಡಿನ ಚಿನ್ಮಯ ಎಂ.ರಾವ್ ಪರಂಪರಾಗತವಾಗಿ ಬಂದಿರುವ ಈ ಸಂಗೀತ ಶೈಲಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ತಾವೂ ಒಂದು ಕೊಂಡಿಯಾಗಬೇಕೆಂದು ಬಯಸಿದ್ದರು.

ಆದರೆ ತಾವು ಸ್ವತಹ ಸಂಗೀತದಲ್ಲಿ ಒಂದು ಹಂತದ ಸಾಧನೆಯನ್ನು ಮಾಡಿಕೊಳ್ಳದೆ ಬೇರೆ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ ಸಂಗೀತದ ಘನತೆ, ಗಾಂಭೀರ್ಯ, ಗುಣಮಟ್ಟಕ್ಕೆ ಎಲ್ಲಿ ಧಕ್ಕೆಯಾಗುತ್ತದೆಯೋ ಎಂದು ಆಲೋಚಿಸಿ ತಾವು ಸ್ವತಹ ಗುರುವಾಗಿ ಸಂಗೀತ ವಿದ್ಯಾಲಯವನ್ನು ಆರಂಭಿಸುವ ಕಾಯಕಕ್ಕೆ ಎಂದೂ ಕೈ ಹಾಕಿರಲಿಲ್ಲ. ಆದರೆ ಕಾಲ ಕಳೆದಂತೆ ಸಂಗೀತದ ಎಲ್ಲಾ ಪದವಿಗಳನ್ನು ಪಡೆದ ನಂತರ ತಮ್ಮ ಸಂಗೀತ ವಿದ್ಯಾಲಯಕ್ಕೆ ಮೂರ್ತರೂಪವನ್ನು ಗುರುಹಿರಿಯರ ಆಶಯದಂತೆ ನೀಡಬಯಸಿದರು.

09 Chinmaya Rao Kannada Wikipediaಮೂಲತಹ ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದ ಚಿನ್ಮಯ ಎಂ.ರಾವ್ ತಮ್ಮ ಉನ್ನತ ವ್ಯಾಸಂಗಕ್ಕಾಗಿ ಮಹಾನಗರಗಳಲ್ಲಿ ಒಂದಷ್ಟು ವರ್ಷ ನೆಲೆಸಿದ್ದರೂ ಕೂಡ ಅವರ ಮನಸ್ಸೆಲ್ಲಾ ತನ್ನ ಹುಟ್ಟೂರಲ್ಲೇ ಇತ್ತು. ಓದೆಲ್ಲಾ ಪೂರೈಸಿದ ನಂತರ ಸ್ವಲ್ಪಕಾಲ ಹುಟ್ಟೂರಲ್ಲೇ ಕೃಷಿಕರಾಗಿ ನೆಲೆಸಿದರು ಕೂಡ. ಆಗೆಲ್ಲಾ ಸಂಗೀತ ನಿರ್ದೇಶಕರಾಗಿ ಹಲವು ರಾಜ್ಯಗಳ ಹಲವು ಮಹಾನಗರಗಳನ್ನು ಆಗಾಗ ಸುತ್ತಿ ಅನುಭವಗಳ ಬುತ್ತಿಯನ್ನು ಹೊತ್ತು ತಂದು ತಮ್ಮ ಮುಂದಿನ ಸಂಗೀತದ ಭವಿಷ್ಯವನ್ನು ಉಜ್ಜ್ವಲವಾಗಿ ರೂಪಿಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದರು.

ಸಂಗೀತಮಯ ಬದುಕಿಗೆ ಹೊಸ ಮುನ್ನುಡಿ-ಸ್ವರಮೇಧಾ

ತಾನೊಬ್ಬನೇ ಸಂಗೀತ ಕ್ಷೇತ್ರದಲ್ಲಿ ಬೆಳೆಯಬೇಕೆಂಬುದು ಸ್ವಾರ್ಥವಾಗುತ್ತದೆ, ಬದಲಿಗೆ ತಾನೂ ಬೆಳೆಯಬೇಕು, ತನ್ನಂತೆ ಇತರರೂ ಬೆಳೆಯಬೇಕು, ಸಂಗೀತವೇ ಎಲ್ಲೆಲ್ಲೂ ಎಲ್ಲರಿಂದಲೂ ಬೆಳಗಬೇಕು, ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಬೇಕು, ಅದರಲ್ಲೇ ತನ್ನ ಜೀವನದ ಸಾರ್ಥಕ್ಯವನ್ನು ಪಡೆಯಬೇಕು ಎಂಬ ಚಿಂತನೆಯೊಂದಿಗೆ ತಮ್ಮ ಸಂಗೀತಮಯ ಬದುಕಿಗೆ ಹೊಸ ಮುನ್ನುಡಿಯೊಂದನ್ನು ಬರೆದರು. ಅದುವೇ ಸ್ವರಮೇಧಾ ಸಂಗೀತ ವಿದ್ಯಾಲಯ.

05 Chinmaya Rao Twitterಎರಡೇ ಎರಡು ಮನೆಗಳಿದ್ದ ತನ್ನ ಹುಟ್ಟೂರು ಹೊನಗೋಡು ಎಂಬ ಕುಗ್ರಾಮದಲ್ಲಿ ಸಂಗೀತ ಶಿಕ್ಷಣವನ್ನು ಯಾರಿಗೆ ನೀಡಲಿ ಎಂಬ ಪ್ರೆಶ್ನೆ ಚಿನ್ಮಯ ಅವರ ಮನಸ್ಸಿನಲ್ಲಿ ಮೂಡಿದಾಗ ಬೆಂಗಳೂರಿನ ಒಂದಷ್ಟು ಸಹೃದಯರು ಬೆಂಗಳೂರಿನಲ್ಲಿಯೇ ಸಂಗೀತ ವಿದ್ಯಾಲಯವನ್ನು ಆರಂಭಿಸಿ ಎಂದು ಒತ್ತಾಯಿಸಿದರು.

ಆದಗಲೇ ಸಾಕಷ್ಟು ಸಲ ಧ್ವನಿಮುದ್ರಣಕ್ಕೆಂದು ಹಿಂದೆ ಮುಂದೆ ಬೆಂಗಳೂರಿಗೆ ಪದೆ ಪದೆ ಬಂದು ಹೋಗುತ್ತಿದ್ದ ಚಿನ್ಮಯ ಹಿಂದೆ ಮುಂದೆ ನೋಡದೆ ಬೆಂಗಳೂರಿನಲ್ಲಿಯೇ ತಮ್ಮ ಸಂಗೀತ ವಿದ್ಯಾಲಯವನ್ನು ಆರಂಭಿಸಿದರು.

ಚಿತ್ರ : ನರಹರಿ ದೀಕ್ಷಿತ್ ತಮ್ಮ ಸಂಗೀತ ವಿದ್ಯಾರ್ಥಿಗಳ ಜೊತೆ ಪ್ರಾರ್ಥಾನಾ ಗೀತೆಯನ್ನು ಹಾಡುತ್ತಿರುವ ಚಿತ್ರ.

ಎರಡೂ ಕಡೆಗಳಲ್ಲಿ ಸಂಗೀತದ ತರಗತಿಗಳನ್ನು ನಡೆಸಲು ವಿದ್ಯಾರ್ಥಿಗಳ ಮನೆಗಳನ್ನೇ ಅವರವರ ಪಾಲಕರು ಬಿಟ್ಟುಕೊಟ್ಟರು. ಅಂತೆಯೇ ಸುಗಮ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್, ವಿದ್ಯಾರ್ಥಿಗಳ ಪಾಲಕರಾದ ವಿಜಯನಗರದ ಆನಂದ್ ದಂಪತಿ  ಈ ಸುಸಂದರ್ಭಕ್ಕೆ ಸಾಕ್ಷಿಗಳಾದರು. ಕೇವಲ ೫ ವಿದ್ಯಾರ್ಥಿಗಳಿಗೆಂದೇ ಸಾಗರದ ತಮ್ಮ ಹಳ್ಳಿಯಿಂದ ಚಿನ್ಮಯ ಪ್ರತೀ ವಾರಾಂತ್ಯಗಳಲ್ಲಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಇವರನ್ನು ನೋಡಿ ಕೆಲವರು ನಗಲಾರಂಭಿಸಿದರು.
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಗಲ್ಲಿಗಲ್ಲಿಗಳಲ್ಲಿ ಸಂಗೀತ ಹೇಳಿಕೊಡುವವರಿದ್ದಾರೆ. ಇವರದ್ದು ಹೆಚ್ಚು ದಿನ ನಡೆಯುವುದಿಲ್ಲ. ಮರಳಿ ಮನೆ ಸೇರುತ್ತಾರೆ ನೋಡುತ್ತಿರಿ…ಎಂದು ಹೀಯಾಳಿಸಿದವರೂ ಉಂಟು. ಆದರೆ ಇದ್ಯಾವುದಕ್ಕೂ ಕಿವಿಗೊಡದ ಚಿನ್ಮಯ ಅತ್ಯಂತ ನಿಷ್ಠೆಯಿಂದ, ಇರುವ ಐದೇ ವಿದ್ಯಾರ್ಥಿಗಳಿಗೆ ತಮ್ಮ ಸಂಗೀತ ವಿದ್ಯೆಯನ್ನು ಧಾರೆಯೆರೆದರು. ಇವರ ಪಾಠದ ಕ್ರಮ ಹಾಗು ವಿದ್ಯಾರ್ಥಿಗಳನ್ನು ಮನಃಪರಿವರ್ತಿಸಿ ವಿದ್ಯಾರ್ಥಿಗಳು ತಾವೇ ಸ್ವತಹ ಸಾಧನೆಗೆ ಇಳಿಯುವಂತೆ ಮಾಡಿದ ರೀತಿ ಪಾಲಕರ ಅಚ್ಚರಿಗೆ ಹಾಗು ಮೆಚ್ಚುಗೆಗೆ ಕಾರಣವಾಯಿತು.

ಈ ಮೊದಲೇ ಚಿನ್ಮಯ ಅವರ ಹಸ್ತವನ್ನು ನೋಡಿ ಭವಿಷ್ಯವನ್ನು ನುಡಿದಿದ್ದ ಜ್ಯೋತಿಷಿ, ಹಸ್ತ ಸಾಮುದ್ರಿಕೆಯಿಂದ ಭವಿಷ್ಯ ಹೇಳುವ ವಿಜಯನಗರದ ಶ್ರೀ. ಆನಂದ್ ಅವರು ( ೯೦೬೬೭೦೦೨೫೦ ) ಇನ್ನು ಮುಂದೆ ನೀವು ಸ್ವತಂತ್ರ ಅಸ್ತಿತ್ವವನ್ನು ಪಡೆದು ಗೆಲುವನ್ನು ಹೊಂದುವ ಕಾಲ ಕೂಡಿ ಬಂದಿದೆ, ಧೈರ್ಯವಾಗಿ ಮುನ್ನುಗ್ಗಿ ಎಂದು ಭವಿಷ್ಯವನ್ನು ನುಡಿದಿದ್ದರು. ಅದರಿಂದ ಚಿನ್ಮಯ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿದಂತಾಗಿ ಬೆಂಗಳೂರಿನಲ್ಲಿ ನೆಲೆಯೂರಲು ಮುಂದಾದರು.

 

ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಸ್ಥಾಪನೆ :

ವಿದ್ಯಾರ್ಥಿಗಳ ಸಂಖ್ಯೆ ಹತ್ತು, ಇಪ್ಪತ್ತು, ಮೂವತ್ತು ಕಡೆಗೊಂದು ದಿನ ಎಂಬತ್ತರ ಗಡಿ ದಾಟಿತು. ಬೆಂಗಳೂರಿಗೆ ವಾರಂತ್ಯಗಳಲ್ಲಿ ಮಾತ್ರ ಬಂದು ಹೋಗುತ್ತಿದ್ದ ಚಿನ್ಮಯ ಕಡೆಗೊಂದು ದಿನ ಸಂಸಾರಸಮೇತ ಬೆಂಗಳೂರಿನಲ್ಲೇ ನೆಲೆಯೂರುವಂತಾಯಿತು. ತಮ್ಮ ಬೆಳೆಯುತ್ತಿರುವ ಸಂಗೀತ ವಿದ್ಯಾಲಯಕ್ಕೆ ಕಾನೂನಾತ್ಮಕವಾಗಿ ಸ್ಪಷ್ಟರೂಪವೊಂದನ್ನು ನೀಡಬೇಕೆಂದು ನಿರ್ಧರಿಸಿದ ಚಿನ್ಮಯ ದಿನಾಂಕ ೨೧-೧೦-೨೦೧೫ ಬುಧವಾರ, ದುರ್ಗಾಷ್ಟಮಿಯಂದು ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯನ್ನು ಸಂಸ್ಥಾಪಿಸಿ ಅದರ ಪ್ರಾಂಶುಪಾಲಕರಾದರು.

ಪ್ರಪ್ರಥಮವಾಗಿ ಸಂಗೀತವೆಂದರೇನು? ಸಂಗೀತವನ್ನು ಏಕೆ ಕಲಿಯಬೇಕು? ಸಂಗೀತದ ಕಲಿಕೆ ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ? ಹೇಗೆ ವಿದ್ಯಾರ್ಥಿಗಳಿಗೆ ಮನಶ್ಶಾಂತಿಯನ್ನು ನೀಡುತ್ತದೆ? ಪ್ರತೀ ವ್ಯಕ್ತಿಯ ಮನಶ್ಶಾಂತಿ ಅಂತಿಮವಾಗಿ ಹೇಗೆ ವಿಶ್ವಶಾಂತಿಗೆ ಕಾರಣವಾಗುತ್ತದೆ ಎಂಬ ವಿಶಿಷ್ಠ ಚಿಂತನೆಗಳನ್ನೊಳಗೊಂಡ, ಅತ್ಯಂತ ಸರಳ ಸುಂದರವಾಗಿ ಮನಮುಟ್ಟುವಂತೆ ನಿರೂಪಿಸಲ್ಪಟ್ಟ ವೀಡಿಯೊ ಒಂದನ್ನು ವಿಜಯನಗರದ ಹೆಚ್.ಎನ್ ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಂತೆ ಚಿನ್ಮಯ ಯೂಟ್ಯೂಬ್‌ನಲ್ಲಿ ಪ್ರಕಟಿಸಿದರು. ಮ್ಯೂಸಿಕ್ ಫಾರ್ ಪೀಸ್ ಎಂಬ ಧ್ಯೇಯವಾಕ್ಯವನ್ನು ತಮ್ಮ ಸಂಸ್ಥೆಗೆ ನೀಡಿ ತಮ್ಮ ಮುಂದಿನ ಧ್ಯೇಯೋದ್ದೇಶಗಳನ್ನು ಕೇವಲ ಮೂರೇ ಪದಗಳಲ್ಲಿ ಹಿಡಿದಿಟ್ಟರು.

ವಿದ್ಯಾರ್ಥಿಗಳು ಆಕರ್ಷಿತರಾಗಲು ಪ್ರಮುಖ ಕಾರಣ ?!

ಸಂಗೀತವನ್ನು ಇಂದು ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿಯೂ ಪಾಠ ಮಾಡುವವರಿದ್ದಾರೆ, ಆದರೂ ಬೆಂಗಳೂರಿಗೆ ಈಗಷ್ಟೇ ಕಾಲಿಟ್ಟಿರುವ ಚಿನ್ಮಯ ಅವರ ವಿದ್ಯಾರ್ಥಿಗಳ ಸಂಖ್ಯೆ ಇಂದು ನೂರರ ಗಡಿಯನ್ನೂ ದಾಟುತ್ತಿದೆ. ಇವರಿಗೆ ಪಾಲಕರು ಹಾಗು ವಿದ್ಯಾರ್ಥಿಗಳು ಆಕರ್ಷಿತರಾಗಲು ಪ್ರಮುಖ ಕಾರಣ ಬರೀ ಸಂಗೀತ ಕಲಿಕೆ ಮಾತ್ರವಲ್ಲ, ಬದಲಿಗೆ ಇವರ ವಿಶಿಷ್ಠ ಚಿಂತನೆಗಳನ್ನೊಳಗೊಂಡ, ಪ್ರತೀ ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವದಲ್ಲಿ ಆಶಾದಾಯಕ ಬೆಳವಣಿಗೆ, ಸಂಗೀತದಿಂದ ಮನಶ್ಶಾಂತಿ ಹಾಗೂ ವಿಶ್ವಶಾಂತಿ !

ಚಿನ್ಮಯ ಅವರ ಪಾಠದ ಕ್ರಮ ಹೇಗೆಂದರೆ ಗುಂಪಿನಲ್ಲಿ ಗೋವಿಂದ ಆಗುವ ಬಗೆಯಲ್ಲ. ಬದಲಿಗೆ ಸ್ವತಹ ತಾವೇ ಪ್ರತೀ ವಿದ್ಯಾರ್ಥಿಗೂ ಪ್ರತ್ಯೇಕವಾಗಿಯೇ ಪಾಠ ಮಾಡಿ, ಪ್ರತೀ ತರಗತಿಗಳಲ್ಲಿಯೂ ಸ್ವತಹ ತಾವೇ ತಮ್ಮ ಧ್ವನಿಯಲ್ಲಿ ಅವುಗಳನ್ನು ಹಾಡಿ ಧ್ವನಿಮುದ್ರಣವನ್ನು ಮಾಡಿಕೊಡುತ್ತಾರೆ. ಆ ಧ್ವನಿಮುದ್ರಿಕೆಯನ್ನಿಟ್ಟುಕೊಂಡು ಮನೆಯಲ್ಲಿ ನಿತ್ಯ ಸಂಗೀತಾಭ್ಯಾಸವನ್ನು ಹೇಗೆ ಮಾಡಿಕೊಳ್ಳಬೇಕೆಂದೂ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತೋರಿಸಿಕೊಡುತ್ತಾರೆ. ಮುಂದಿನ ಅವಧಿಗಳಲ್ಲಿ ವಿದ್ಯಾರ್ಥಿಯ ಕಲಿಕೆಯ ಗುಣಮಟ್ಟದ ಮೇಲೆ ಸದಾ ಪ್ರತೀ ತರಗತಿಗಳಲ್ಲಿಯೂ ಗಮನವಿಟ್ಟಿರುತ್ತಾರೆ. ಹಾಗಾಗಿ ಇವರ ಪ್ರತೀ ವಿದ್ಯಾರ್ಥಿಯೂ ಸಂಗೀತದಲ್ಲಿ ಅಭಿವೃದ್ಧಿ ಕಾಣದೆ ಬೇರೆ ವಿಧಿಯೇ ಇಲ್ಲ.

ಈ ಪ್ಲಾನ್ ಪುಸ್ತಕದ ಪ್ರಕಾರ ವಿದ್ಯಾರ್ಥಿ ಯಾವ ಯಾವ ತರಗತಿಗಳಲ್ಲಿ/ಅವಧಿಗಳಲ್ಲಿ ಯಾವ ಪಾಠವನ್ನು ಕಲಿಯಬೇಕು, ಎಷ್ಟೆಷ್ಟು ಕಲಿಯಬೇಕು, ಒಟ್ಟು ಎಷ್ಟು ವರ್ಷಗಳಲ್ಲಿ ಎಷ್ಟು ಪಾಠಗಳು ಮುಗಿದು ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ಎಲ್ಲವನ್ನೂ ಸವಿವರವಾಗಿ ಪ್ರಕಟಿಸಿದ್ದಾರೆ. ಚಿನ್ಮಯ ಬೆಂಗಳೂರಿನ ತಮ್ಮ ಮನೆ ರಾಜರಾಜೇಶ್ವರಿನಗರದಲ್ಲಿ, ಬನಶಂಕರಿಯಲ್ಲಿ, ಇಸ್ರೋ ಬಡಾವಣೆಯಲ್ಲಿ ಹಾಗೂ ಕೆಂಗೇರಿ ಉಪನಗರದಲ್ಲಿ ಹಲವು ಬ್ಯಾಚ್‌ಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ ವಿಭಾಗದಲ್ಲಿ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ಹಂತದ ವಿದ್ಯಾರ್ಥಿಗಳು ಸಂಗೀತವನ್ನು ಕಲಿಯುತ್ತಿದ್ದಾರೆ. ವಿಶ್ವವಿದ್ಯಾಲಯಗಳು ನಡೆಸುವ ಬಿ.ಮ್ಯೂಸಿಕ್ ಹಾಗೂ ಎಂ.ಮ್ಯೂಸಿಕ್ ಪರೀಕ್ಷೆಗಳಿಗೂ ಚಿನ್ಮಯ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ.

ಸಂಪೂರ್ಣ ಪರಿಕಲ್ಪನೆ :
ಚಿನ್ಮಯ ತಮ್ಮ ಸಂಗೀತ ವಿದ್ಯಾಲಯದ ಗೊತ್ತು ಗುರಿ ಹಾಗೂ ಸಂಪೂರ್ಣ ಪರಿಕಲ್ಪನೆಯನ್ನು ಈ ಕೆಳಕಂಡ ಅಂಶಗಳ ಮೂಲಕ ದಾಖಲಿಸುತ್ತಾರೆ.

೧) ಈ ವಿಶ್ವವೇ ಸಂಗೀತಮಯವಾಗುತ್ತದೆ !

ಸಾಮಾನ್ಯವಾಗಿ ಆರಂಭಿಕವಾಗಿ ೧೦೦ ವಿದ್ಯಾರ್ಥಿಗಳು ಜ್ಯೂನಿಯರ್ ವಿಭಾಗದಲ್ಲಿ ಸಂಗೀತಾಭ್ಯಾಸವನ್ನು ಆರಂಭಿಸಿದರೆ ಅದರಲ್ಲಿ ೫೦ ವಿದ್ಯಾರ್ಥಿಗಳು ಮಾತ್ರ ಸೀನಿಯರ್ ಹಂತವನ್ನೂ ಕಲಿಯುತ್ತಾರೆ. ಆದರೆ ಅದರಲ್ಲಿ ೨೫ ವಿದ್ಯಾರ್ಥಿಗಳು ಮಾತ್ರ ವಿದ್ವತ್ ಹಂತದಲ್ಲಿ ಅಭ್ಯಾಸವನ್ನು ಆರಂಭಿಸುತ್ತಾರೆ. ನಂತರದಲ್ಲಿ ಸಂಗೀತವನ್ನೊಂದು ತಪಸ್ಸಾಗಿ ಮುಂದುವರಿಸಿ ಜೀವನಪರ್ಯಂತ ಸಂಗೀತದ ಸಾಧನೆಯಲ್ಲಿ ತೊಡಗುವವರು ಕೇವಲ ಮೂರರಿಂದ ಐದು ವಿದ್ಯಾರ್ಥಿಗಳು ಮಾತ್ರ ಇರಬಹುದು. ಈ ಸಂಖ್ಯೆ ನೂರರಿಂದ ಮೂರರವರೆಗೆ ಇಳಿಯಲು ಹಲವಾರು ಸಮಸ್ಯೆಗಳು, ಕಾರಣಗಳು ಇರಬಹುದು. ಮೂರರಿಂದ ನೂರಕ್ಕೆ ನೂರರವರೆಗೂ ಸಂಖ್ಯೆ ಏರಬೇಕೆಂದರೆ ಈ ಪ್ರಗತಿ ನಿಧಾನವಾಗಿ ಆಗುವಂಥದ್ದು. ಇದು ಸುಲಭಸಾಧ್ಯವಲ್ಲ…ಕಷ್ಟಸಾಧ್ಯ. ಇದಕ್ಕೆ ಗುರುಶಿಷ್ಯರಿಬ್ಬರಿರಲ್ಲೂ ಸಹನೆ ಇರಬೇಕು. ಇದು ವಿದ್ಯಾರ್ಥಿಗಳ ಮನಃಪರಿವರ್ತನೆಯಿಂದ ಮಾತ್ರ ಸಾಧ್ಯ. ನೂರಕ್ಕೆ ನೂರೂ ವಿದ್ಯಾರ್ಥಿಗಳೂ ಇದೇ ಕ್ಷೇತ್ರದಲ್ಲಿ ಮುಂದುವರಿಯುವಂತಾದರೆ ಈ ವಿಶ್ವವೇ ಸಂಗೀತಮಯವಾಗುತ್ತದೆ. ಅದು ವಿಶ್ವಶಾಂತಿಗೂ ಕಾರಣವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ನಮ್ಮ ಸಂಗೀತ ವಿದ್ಯಾಲಯ ಈಗಾಗಲೇ ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿದೆ. ಬೆಳವಣಿಗೆ ಆಶಾದಾಯಕವಾಗಿದೆ ಎಂಬುದೇ ಸಂತಸದ ಸಂಗತಿ.

೨) ನಿರಂತರ ಸಂಗೀತ ಸಾಧನೆ ಮಾತ್ರ ನಮ್ಮ ಪ್ರಾಶಸ್ತ್ಯ :

ಸಂಗೀತವೆಂಬುದು ಮೊದಲು ನಮ್ಮ ಅಂತರಂಗದ ಆನಂದಕ್ಕಾಗಿ, ಆತ್ಮಸಂತೋಷಕ್ಕಾಗಿ. ನಂತರ ಇನ್ನಷ್ಟು ಅಂತರಂಗಗಳಿಗೆ ಸಹಜವಾಗಿ ಆತ್ಮಸಂತೋಷ ನೀಡಲು ಹೊರತು ನಮ್ಮ ಅಂತರಂಗದಲ್ಲಿಯೇ ಅದು ಸಿದ್ಧಿಗೊಳ್ಳದೆ ಬಹಿರಂಗದ ಕ್ಷಣಿಕ ತಾತ್ಕಾಲಿಕ ಪ್ರಸಿದ್ಧಿಗಾಗಿ, ಜನಪ್ರಿಯತೆಗಾಗಿ ಹಾತೊರೆಯುವುದು ನಿಜವಾದ ಸಂಗೀತವನ್ನೇ ತೊರೆದು ಸಂಗೀತಗಾರರು ನಾವು ಎಂದು ಹೇಳಿಕೊಂಡು ತಿರುಗಾಡಿದಂತೆ. ಹೀಗಾಗದಂತೆ ನೋಡಿಕೊಂಡು ಸಂಗೀತದ ಮೂಲ ಆಶಯವನ್ನು ವಿದ್ಯಾರ್ಥಿಗಳ ಚಿತ್ತದಲ್ಲಿ ಅಚ್ಚೊತ್ತಿ, ಶ್ರೀಮಂತ ವಿಚಾರಧಾರೆಯನ್ನು ಬಿತ್ತುವಂತೆ ಮಾಡುವುದು ನಮ್ಮ ಸಂಗೀತ ವಿದ್ಯಾಲಯದ ಉದ್ದೇಶ, ಹೊರತು ವಾಹಿನಿಗಳ ರಿಯಾಲಿಟಿ ಶೋಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವ ಕಾರ್ಖಾನೆ ನಮ್ಮ ವಿದ್ಯಾಲಯವಲ್ಲ. ಹಾಗೆಂದ ಮಾತ್ರಕ್ಕೆ ಅಂತಹ ಕಾರ್ಯಕ್ರಮಗಳಿಗೆ ಹೋಗಲಿಚ್ಛಿಸುವ ನಮ್ಮ ವಿದ್ಯಾರ್ಥಿಗಳನ್ನೇನು ನಾವು ಎಂದೂ ತಡೆಯುವುದಿಲ್ಲ. ನಮ್ಮ ವಿದ್ಯಾರ್ಥಿಗಳೆಂಬ ಕಾರಣಕ್ಕೆ ಸಹಜವಾಗಿ ಪ್ರೀತಿ ಪ್ರೋತ್ಸಾಹದಿಂದ ಕಳುಹಿಸಿಕೊಡುತ್ತೇವೆ. ಆದರೆ ಅದೇನು ನಮ್ಮ ಪ್ರಾಶಸ್ತ್ಯವಲ್ಲ ಎಂಬ ಅಭಿಪ್ರಾಯ ನಮ್ಮದು.
ಪ್ರತಿ ವಿದ್ಯಾರ್ಥಿಯ ನಿರಂತರ ಸಂಗೀತ ಸಾಧನೆ ಮಾತ್ರ ನಮ್ಮ ಪ್ರಾಶಸ್ತ್ಯ.

ನಮ್ಮ ವಿದ್ಯಾರ್ಥಿಗಳು ನಮ್ಮ ಯಾವ ಪೂರ್ವಾನುಮತಿಯನ್ನೂ ಪಡೆಯದೆ ಯಾವ ವೇದಿಕೆಯಲ್ಲೂ ಅವರ ಬಯಕೆಯಂತೆ ಪ್ರತಿಭಾ ಪ್ರದರ್ಶನವನ್ನು ಮಾಡಬಹುದು. ಅದು ಅವರವರ ವಯ್ಯುಕ್ತಿಕ ಸ್ವಾತಂತ್ರ್ಯ. ಅದನ್ನು ನಾವೆಂದೂ ಹರಣ ಮಾಡುವುದಿಲ್ಲ, ಬದಲಿಗೆ ಅದೇ ಉತ್ಸಾಹದಲ್ಲಿ ಅವರನ್ನು ಇನ್ನಷ್ಟು ಮತ್ತಷ್ಟು ಹುರಿದುಂಬಿಸಿ ಸಂಗೀತದ ಆಳ ಅಧ್ಯಯನಕ್ಕೆ ಇಳಿಯುವಂತೆ ಪ್ರೇರೇಪಿಸುತ್ತೇವೆ.

೩) ಎಲ್ಲಾ ವಿದ್ಯಾರ್ಥಿಗಳೂ ನಮಗೆ ಒಂದೇ :

ಸಂಗೀತಗುರುವಿಗೆ ಗುರುದಕ್ಷಿಣೆಯ ರೂಪದಲ್ಲಿ ಶಿಷ್ಯರು ನೀಡುವ ಹಣವೂ ಮುಖ್ಯ ಹೊರತು ಹಣವೇ ಮುಖ್ಯವಲ್ಲ. ಮಾಸಾಂತ್ಯದ ಫೀಸ್, ವಿದ್ಯಾರ್ಥಿಗಳಿಗೆ ವರ್ಷಕ್ಕೆರಡು ಸಲ ನಡೆಸುವ ಆಂತರಿಕ ಪರಿಕ್ಷಾ ಶುಲ್ಕದ ಕನಿಷ್ಟ ಹಣ ಮತ್ತು ವಿದ್ಯಾಲಯದ ವಾರ್ಷಿಕೋತ್ಸವಕ್ಕೆ ಯಥಾನುಶಕ್ತಿ ಧನಸಹಾಯ ಇವಿಷ್ಟನ್ನು ಹೊರತು ಪಡಿಸಿ ಬೇರೆ ಬೇರೆ ಹೊಸ ನೆಪಗಳನ್ನು ಮಾಡಿಕೊಂಡು ಪದೆ ಪದೆ ಶಿಷ್ಯರಿಂದ ಅಥವಾ ಅವರ ಪಾಲಕರಿಂದ ಹಣ ವಸೂಲಿ ಮಾಡುವುದು ಅಥವ ಹಣ/ಉನ್ನತ ಹುದ್ದೆಯಲ್ಲಿರುವ ಪಾಲಕರು ಹಾಗು ಅವರ ಮಕ್ಕಳನ್ನು ಅತಿಯಾಗಿ ಓಲೈಸುವುದು ಇವೆಲ್ಲವನ್ನು ನಮ್ಮ ಸಂಗೀತ ವಿದ್ಯಾಲಯ ಖಡಾಖಂಡಿತವಾಗಿ ವಿರೋಧಿಸುತ್ತದೆ. ಪಂಡಿತಾಃ ಸಮದರ್ಶಿನಃ ಎಂಬಂತೆ ಎಲ್ಲಾ ವಿದ್ಯಾರ್ಥಿಗಳೂ ನಮಗೆ ಒಂದೇ, ಯಾರೂ ಹೆಚ್ಚಲ್ಲ…ಯಾರೂ ಕಡಿಮೆಯಲ್ಲ…ಎಲ್ಲರೂ ಸಮಾನರು. ಸರ್ವರನ್ನೂ ಸಮಭಾವದಲ್ಲಿ ಕಂಡು ಪ್ರೀತಿಸುತ್ತೇವೆ. ನಮಗೆ ಸದಾ ಎಲ್ಲರೂ ಆತ್ಮೀಯರೇ. ಎಲ್ಲಾ ವಿದ್ಯಾರ್ಥಿಗಳೂ ಸಂಗೀತ ವಿದ್ಯೆಯನ್ನು ಸಮಾನವಾಗಿ ಧಾರೆಯೆರೆಯಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳೂ ನಮಗೆ ಮುಖ್ಯ. ಏಕೆಂದರೆ ಈ ಮೊದಲೇ ಹೇಳಿದಂತೆ ನಮ್ಮ ಗುರಿ ಒಂದೆರಡಲ್ಲ…ನೂರಕ್ಕೆ ನೂರು.

೪) ಏಕಮೇವ ಧ್ಯೇಯೋದ್ದೇಶ…ಅದುವೇ ಸಂಗೀತದಿಂದ ವಿಶ್ವಶಾಂತಿ !

ಶಾಸ್ತ್ರೀಯ ಸಂಗೀತದ ವಿಪರ್ಯಾಸವೋ ಏನೋ ಬಹಳಷ್ಟು ಸಂಗೀತ ಗುರುಗಳಿಗೆ ತನ್ನ ವಿದ್ಯಾರ್ಥಿಯು ಹುಟ್ಟಿನಿಂದ ಸಾಯುವವರೆಗೂ ತನ್ನಲ್ಲೇ ಸಂಗೀತ ಕಲಿಯಬೇಕು, ಬೇರೆ ಯಾವ ಗುರುವಿನ ಬಳಿಯೂ ಹೋಗಿ ಕಲಿಯಬಾರದು ಎಂಬ ವಿಚಿತ್ರ ಮನೋಸ್ಥಿತಿಯಿರುತ್ತದೆ. ನನ್ನ ಪ್ರಕಾರ ಇದು ತಪ್ಪು. ಸಂಗೀತದ ವಿದ್ಯಾರ್ಥಿಯು ಹಲವು ಗುರುಗಳಲ್ಲಿ ಅಭ್ಯಾಸ ಮಾಡಿದರೆ ಮಾತ್ರ ಪರಿಪಕ್ವತೆಯನ್ನು ಪಡೆದು ಪೂರ್ಣತೆಯೆಡೆಗೆ ಸಾಗಲು ಅನುಕೂಲವಾಗುತ್ತದೆ. ಕೇವಲ ಒಂದೇ ಗುರುವಿನಲ್ಲಿ ಅಭ್ಯಾಸ ಮಾಡಿದರೆ ಖಂಡಿತಾ ಪೂರ್ಣತೆಯನ್ನು ಪಡೆಯಲು ಆಗುವುದಿಲ.

ಸಂಗೀತವಿದ್ಯೆಯೆಂಬುದು ಮಹಾಸಾಗರದಂತೆ. ಇದರ ಆಳ,ಅಳತೆ ಮೊಗೆದಷ್ಟೂ ಮುಗಿಯದಷ್ಟು ! ಒಬ್ಬ ಗುರುವು ನೀಡುವುದು ಒಂದು ಬೊಗಸೆಯಷ್ಟು ವಿದ್ಯೆಯಾಗಿರಬಹುದು ಅಷ್ಟೇ. ಒಂದು ಮರವೇ ದೊಡ್ಡದು ಎಂದುಕೊಳ್ಳುವಷ್ಟರಲ್ಲಿ ಇನ್ನೊಂದು ಅದಕ್ಕಿಂತ ದೊಡ್ಡ ಮರ ಕಾಣಬಹುದು. ವಿದ್ಯಾರ್ಥಿ ಹೆಚ್ಚಿನ ಸಾಧನೆಗೆ ಯಾವ ಮಹಾಗುರುವನ್ನೂ ಅಶ್ರಯಿಸುತ್ತಾ ಹೋಗಬಹುದು. ಅದು ತಪ್ಪೇನಲ್ಲ. ಒಬ್ಬ ನಿಜವಾದ ಗುರುವೂ ನಿರಂತರ ವಿದ್ಯಾರ್ಥಿಯೇ ! ಆದರೆ ವಿದ್ಯಾರ್ಥಿ ಸಕಾಲಕ್ಕೆ ಸಕಾರಣವನ್ನಿಟ್ಟುಕೊಂಡು ಗುರುವಿನ ಅನುಮತಿ ಪಡೆದು ಇನ್ನೊಂದು ಗುರುವನ್ನು ಆಶ್ರಯಿಸಿದರೆ ಅದಕ್ಕೊಂದು ಆರ್ಥವಿರುತ್ತದೆ. ಅದಿಲ್ಲದಿದ್ದರೆ ಅರ್ಥಹೀನವಾಗುತ್ತದೆ. ವಿದ್ಯಾರ್ಥಿ ಸಂಗೀತವಿದ್ಯೆಯನ್ನು ಯಾವ ಸೂಕ್ತಗುರುವಿಂದಾದರೂ ಅಭ್ಯಾಸ ಮಾಡಲಿ…ಅದು ನನಗೆ ಸಂತೋಷವೇ…ಒಟ್ಟಿನಲ್ಲಿ ಅಂತಿಮವಾಗಿ ವಿದ್ಯಾರ್ಥಿಗಳು ಈ ವಿಶ್ವಕ್ಕೆ ತಮ್ಮ ಸಂಗೀತಮುಖೇನ ಶಾಂತಿಧೂತರಾಗಬೇಕೆಂಬ ಏಕಮೇವ ಧ್ಯೇಯೋದ್ದೇಶ ನನ್ನದು ಅಷ್ಟೆ.

ಚಿನ್ಮಯ ಎಂ.ರಾವ್ ಸಂಪರ್ಕ ವಿವರಗಳು :
ಜಂಗಮ ದೂರವಾಣಿ ಸಂಖ್ಯೆಗಳು-

9449911590 (WhatsApp)
9535585270

CHINMAYA M.RAO-WEB LINKS

1) Facebook Link : https://www.facebook.com/chinmaya.m.rao

2) e-mail : [email protected]

3) Swaramedha YouTube Link :

https://www.youtube.com/@swaramedha

4) YouTube Link :

https://www.youtube.com/user/chinmayarao
https : //www.youtube.com/user/shamalirao/videos

Related Articles

One Comment

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.