ಬೆಂಗಳೂರು : ಸುಗಮ ಸಂಗೀತ, ಭಕ್ತಿ ಸಂಗೀತ, ಜಾನಪದ ಸಂಗೀತ ಅಥವಾ ಚಲನಚಿತ್ರ ಸಂಗೀತ ಹೀಗೆ ಯಾವುದೇ ಬಗೆಯ ಸಂಗೀತಕ್ಕೂ ಶಾಸ್ತ್ರೀಯ ಸಂಗೀತವೇ ಭದ್ರಭುನಾದಿ. ಸಂಗೀತ ವಿದ್ಯಾರ್ಥಿಗಳು ಆರಂಭಿಕ ಅಭಿರುಚಿಗಾಗಿ ಸುಗಮ ಸಂಗಿತವನ್ನು ಆಯ್ಕೆ ಮಾಡಿಕೊಂಡರೂ ಕ್ರಮೇಣ ಸಂಗೀತದ ಆಳಕ್ಕೆ ಇಳಿದು ಸಾಧನೆ ಮಾಡುವಂತಾಗಲು ಶಾಸ್ತ್ರೀಯ ಸಂಗೀತವೇ ಸುಗಮ ಮಾರ್ಗ ಎಂದು ಸುಗಮ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಹೇಳಿದರು. ನಗರದ ವಿಜಯನಗರದಲ್ಲಿ ಕಳೆದ ಏಪ್ರಿಲ್ ಒಂಬತ್ತರಂದು ಬುಧವಾರ ಯುವ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಅವರ ಸ್ವರಮೇಧಾ ಸಂಗೀತ ವಿದ್ಯಾಲಯವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಶಾಸ್ತ್ರೀಯ ಸಂಗೀತದ ಕಲಿಕೆ ಗಾಯಕರನ್ನು ಹೇಗೆ ಪರಿಪೂರ್ಣರನ್ನಾಗಿಸುತ್ತದೆ ಎಂಬುದನ್ನು ಸಂಗೀತದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಈ ಮೂಲಕ “ಕನ್ನಡ ಟೈಮ್ಸ್” ಸಂಸ್ಥೆಯ ಶಾಸ್ತ್ರೀಯ ಸಂಗೀತ ಕಲಿಕೆ ಹಾಗು ಸಂಶೋಧನೆಯ ವಿಭಾಗಕ್ಕೆ ಚಾಲನೆಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಡಾ.ಆನಂದ್ ದೂರದ ಗ್ರಾಮೀಣ ಭಾಗದಿಂದ ಬಂದು ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಮಹಾನಗರಗಳಲ್ಲಿಯೂ ಬೆಳೆಸಬೇಕೆಂಬ ಚಿನ್ಮಯ ಎಂ.ರಾವ್ ಅವರ ಸದುದ್ದೇಶ ಈಡೇರುವಂತಾಗಲು ಸ್ಥಳೀಯ ಸಂಗೀತಾಸಕ್ತರುಸಹಕರಿಸಬೇಕೆಂದು ಹೇಳುತ್ತಾ ಸ್ವರಮೇಧಾ ಸಂಗೀತ ವಿದ್ಯಾಲಯ ಎಂಬ ಚಿಗುರು ಹೆಮ್ಮರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು. ಸಂಗೀತ ಶಿಕ್ಷಕ ಚಿನ್ಮಯ ಎಂ.ರಾವ್, ಸಂಗೀತಾಭಿಮಾನಿ ರಾಮನಾಥ್, ರಾಘವೇಂದ್ರ ಹಾಗು ವಿದ್ಯಾರ್ಥಿಗಳಾದ ಅನುರಾಗ್, ಚಿರಾಗ್, ಉಮಾ, ಚಂದನ, ಕಲಾ ಮತ್ತಿತರರು ಹಾಜರಿದ್ದರು.
*************
Wednesday, April 9, 2014, 9:44:16 AM
ಚಿತ್ರ : ನರಹರಿ ದೀಕ್ಷಿತ್ ತಮ್ಮ ಸಂಗೀತ ವಿದ್ಯಾರ್ಥಿಗಳ ಜೊತೆ ಪ್ರಾರ್ಥಾನಾ ಗೀತೆಯನ್ನು ಹಾಡುತ್ತಿರುವ ಚಿತ್ರ.