ಸ್ಯಾಂಡಲ್ ವುಡ್

ಓ ಮೈ ಲವ್ ಗೆ ಸುವರ್ಣ ಸಂಭ್ರಮ,ಗೆಲುವಿನ ಖುಷಿಯಲ್ಲಿ ಸ್ಮೈಲ್ ಶ್ರೀನು

ಸ್ಮೈಲ್ ಶ್ರೀನು ಅವರ ನಿರ್ದೇಶನದ ಓ ಮೈ ಲವ್ ಚಿತ್ರವು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನಡೆದಿದೆ. ನನ್ನ ಹತ್ತು ವರ್ಷಗಳ ಸಿನಿ ಬದುಕಿನಲ್ಲಿ ಆತಿಹೆಚ್ಚು ತೃಪ್ತಿ ತಂದುಕೊಟ್ಟ ಚಿತ್ರವಿದು ಎಂದು ಖುಷಿ ವ್ಯಕ್ತಪಡಿಸುವ‌ ನಿರ್ದೇಶಕರು, ಈ ಒಂದು ಯಶಸ್ಸಿಗೆ ನನ್ನಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರುಗಳು ಕಾರಣರು. ಒಂದು ಚಿತ್ರಕ್ಕೆ ಕಲಾವಿದರಷ್ಟೇ ತಾಂತ್ರಿಕ ಬಳಗವೂ ಅಷ್ಟೇ ಮುಖ್ಯ. ಅದರಂತೆ ಓ ಮೈ ಲವ್ ಚಿತ್ರದ ಯಶಸ್ಸಿನಲ್ಲಿ ತಾಂತ್ರಿಕ ವರ್ಗದ ಪಾಲು ದೊಡ್ಡದಿದೆ. ಅವರ ಸಹಕಾರವಿಲ್ಲದೇ ಹೋಗಿದ್ದರೆ ಸಿನಿಮಾ ಇಷ್ಟೊಂದು ಅದ್ಭುತವಾಗಿ ಮೂಡಿಬರುತ್ತಿರಲಿಲ್ಲ. ಜೊತೆಗೆ ಒಂದು ಉತ್ತಮ ಚಿತ್ರವನ್ನು
ನೋಡಿ ಪ್ರಶಂಸೆ ವ್ಯಕ್ತಪಡಿಸಿ, ಗೆಲುವಿಗೆ ಕಾರಣರಾದ ನಾಡಿನ ಎಲ್ಲಾ ಸಿನಿರಸಿಕರಿಗೆ ತಮ್ಮ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ನನ್ನ ಪ್ರಯತ್ನಕ್ಕೆ ಸಾಥ್‌ ನೀಡಿದ ಜಿಸಿಬಿ ಪ್ರೊಡಕ್ಷನ್ಸ್ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಉತ್ತಮ ಚಿತ್ರಗಳನ್ನು ನಿರ್ಮಿಸಲಿದೆ ಎಂದು ಹೇಳಿದ್ದಾರೆ.

ನಿರ್ಮಾಪಕ ಜಿ.ರಾಮಾಂಜಿನಿ ಅವರು ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ನಿಂದ ಒಂದಷ್ಟು ಹೊಸ ಬಗೆಯ ಸಿನಿಮಾಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಈಗಿನ ಸಂದರ್ಭದಲ್ಲಿ ಒಂದು ಚಿತ್ರ ೨ ವಾರ ಪ್ರದರ್ಶನಗೊಳ್ಳುವುದೇ ಕಷ್ಟಕರವಾಗಿರುವಾಗ ೫೦ ದಿನ ಪೂರೈಸುವುದು ಎಂದರೆ ದೊಡ್ಡ ಸಾಹಸವೇ ಸರಿ.‌ ಪ್ರೇಕ್ಷಕರು ಒಂದೊಳ್ಳೇ ಚಿತ್ರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಒಳ್ಳೇ ಪ್ರಯತ್ನಕ್ಕೆ ಯಾವಾಗಲೂ ಪ್ರೋತ್ಸಾಹ ಇರುತ್ತೆ ಎನ್ನುವುದಕ್ಕೆ ಇದೇ ಸಾಕ್ಷಿ. ಜೊತೆಗೆ ಮಾದ್ಯಮ ಸ್ನೇಹಿತರು ನೀಡಿದ ಸಹಕಾರವನ್ನು ಎಂದೂ ಮರೆಯಲಾರೆ ಎಂದವರು ಹೇಳಿದ್ದಾರೆ.

ಸ್ಮೈಲ್ ಶ್ರೀನು ಅವರಿಗೆ ಅನ್ಯ ಭಾಷೆಯಿಂದಲೂ ಬೇಡಿಕೆಯಿದ್ದು, ಸದ್ಯದಲ್ಲೇ ಅವರು ಬಿಗ್ ಸ್ಟಾರ್ ಜೊತೆ ಕೈಜೋಡಿಸಿ ಹೊಸ ಚಿತ್ರವನ್ನು ಘೋಷಿಸಲಿದ್ದಾರೆ.

Related Articles

Back to top button

Adblock Detected

Kindly unblock this website.