ನಾಯಕ-ನಾಯಕಿ

ಹಳ್ಳಿಯಿಂದ ಬಂದ ಕೃಷ್ಣಸುಂದರಿ ಶುಭಾ ರಕ್ಷಾ

ACTRESS SHUBBHA RAKSHA (3)ಸಕತ್ ಹೈಟ್…ಸಕತ್ ಹಾಟ್..ಮೈಬಣ್ಣ ಸ್ವಲ್ಪ ಕಪ್ಪೆನಿಸಿದರೂ ಮೈ ಜುಮ್ಮೆನಿಸುವಂತಹ ಅಂದ..ಆಕಾರ…ತೂಕದಲ್ಲಂತೂ ತುಂಬಾ ಹಗುರ…ತೆಳ್ಳಗಿನ ಮೈಮಾಟ…ತಂಗಾಳಿಯಲ್ಲಿ ತೇಲುವ ಈ ಬೆಡಗಿಯ ಮುಂಗುರುಳುಗಳು ಮಾಡುತ್ತವೆ ಎಂತಹಾ ಅರಸಿಕರನ್ನೂ ರಸಿಕತೆಯ ತೆಕ್ಕೆಗೆ ತಂದುಕೊಳ್ಳುವ ಹುನ್ನಾರ…ಹೀಗೆ ಬಣ್ಣಿಸಲಸದಳ ಈ ಕೃಷ್ಣಸುಂದರಿಯ ಮನಮೋಹಕ ಸೌಂದರ್ಯ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿಡುಗ ಎಂಬ ಹಳ್ಳಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ತನ್ನ ತನವನ್ನು ಮೂಡಿಸಲು ಹವಣಿಸುತ್ತಿರುವ ಈ ಹೊಸ ಹುಡುಗಿ ಹುಟ್ಟಿದ ಮನೆಯಲ್ಲಿ ಪಡೆದು ಬಂದ ಹೆಸರು ಶುಭಾ…ಚಿತ್ರರಂಗಕ್ಕಾಗಿ ಸೇರಿಸಿಕೊಂಡ ಹೊಸ ಹೆಸರು ರಕ್ಷಾ…ಒಟ್ಟಿನಲ್ಲಿ ಎರಡೂ ಸೇರಿ ಶುಭಾ ರಕ್ಷಾ !

“ಶುಭಾ ರಕ್ಷಾ” ಈ ಹೆಸರು ಕೇಳಲು ಎಷ್ಟು ಚೆಂದ ಅಲ್ಲವೇ? ಅಷ್ಟೇ ಚೆಂದ ಶುಭಾಳ ಅಂದ !

ACTRESS SHUBBHA RAKSHA (2)ನರ್ಸ್ ಆಗಿ ಸೇವೆ-ಈಗ ಚಿತ್ರರಂಗಕ್ಕೆ ಸೇವೆ ?

ಚನ್ನರಾಯಪಟ್ಟಣದಲ್ಲಿ ನರ್ಸಿಂಗ್ ಓದಿದ ಶುಭಾ ಬೆಂಗಳೂರಿನ ಸ್ಪಂದನ ಆಸ್ಪತ್ರೆಯಲ್ಲಿ ಸುಮಾರು ಒಂದು ವರ್ಷ ನರ್ಸ್ ಆಗಿ ಸೇವೆ ಸಲ್ಲಿಸಿದಳು. ಆದರೆ ಚಿತ್ರರಂಗಕ್ಕೆ ಸೇರಬೇಕೆಂದು ಮೊದಲಿನಿಂದಲೂ ಕನಸು ಕಂಡಿದ್ದ ಶುಭಾ ನರ್ಸ್ ವೃತ್ತಿಯನ್ನು ಬಿಟ್ಟು ಕಳೆದ ಎರಡು ವರ್ಷಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಲು ಆರಂಭಿಸಿದ್ದಾಳೆ ಎಂಬುದೇ ರೋಚಕ ಸಂಗತಿ !

ACTRESS SHUBBHA RAKSHA (9)ಕಿರುತೆರೆಯ ರಾಣಿ ಮಹಾರಾಣಿ, ನಾನೇ ರಾಜಕುಮಾರಿ, ಪಡುವಾರಹಳ್ಳಿ ಪಡ್ಡೆಗಳು ಹಾಗು ಪಂಚರಂಗಿ ಪೋಮ್ ಪೋಮ್ ಹೀಗೆ ಇನ್ನಿತರ ಕಾರ್ಯಕ್ರಮಗಳಲ್ಲಿ ಹಾಗು ಧಾರಾವಾಹಿಗಳಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಂಡ ಶುಭಾ ರಕ್ಷಾ ಈಗ ನೇರವಾಗಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಹೋಗ್ಲಿ ಬಿಡಿ ಸಾರ್, ಪ್ಯಾರ್ ಗೆ ಆಗ್ ಬುಟ್ಟೈತೆ ಹಾಗು ಜ್ಯೋತಿರ್ಗಮಯ ಚಿತ್ರಗಳಲ್ಲಿ ನಾಯಕಿಯ ಸ್ಥಾನವನ್ನು ಅಲಂಕರಿಸಿರುವ ಇವಳು ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಾನೂ ಹೆಸರು ಮಾಡಬೇಕೆಂಬ ಪಣತೊಟ್ಟಿದ್ದಾಳೆ.

ಕೂಡಿಟ್ಟ ಒಂದೊಂದೇ ಕನಸುಗಳನ್ನು ಈಗಷ್ಟೇ ನನಸು ಮಾಡುತ್ತಿದ್ದಾಳೆ. ಕೀರ್ತಿಯ ಶಿಖರವನ್ನೇರಲೇ ಬೇಕೆಂದು ನಿಶ್ಚಲವಾಗಿ ಮನಸ್ಸು ಮಾಡಿದ್ದಾಳೆ. ಆದಷ್ಟು ಬೇಗ ಶುಭಾ ರಕ್ಷಾಳ ಎಲ್ಲಾ ಆಸೆಗಳೂ ಈಡೇರಲಿ…ಆಕೆ ಚಿತ್ರರಂಗದ ಆಸ್ತಿಯಾಗಲಿ ಎಂದು ನಾವು ನೀವೆಲ್ಲಾ ಆಶಿಸೋಣ ಅಲ್ಲವೇ?

ಕನ್ನಡ ಟೈಮ್ಸ್-೧೫-೩-೨೦೧೩

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.