ನಾಯಕ-ನಾಯಕಿ

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟನಾಗಬೇಕೆಂಬ ಬಯಕೆಯ ಸೂರ್ಯತೇಜ ಎಂಬ ನವನಟ

ಭರವಸೆ ಕಲಾವಿದನ ಕಿರು ಪರಿಚಯ

ನಾನು ಕಲಾವಿದನಾಗಬೇಕೆಂಬ ಹೆಬ್ಬಯಕೆಯಿಂದಲೇ ಸಿನೆಮಾರಂಗಕ್ಕೆ ಬಂದವನು ಬಂದ ಹೊಸತರಲ್ಲಿ ಎಲ್ಲ ಹೊಸತು. ನಿರೀಕ್ಷೆಗಳು ಹಲವು, ಭಯ , “ಎಲ್ಲರೂ ಸಿನೆಮಾನ ಹೋಗೋ ಏನಾದ್ರು ಕೆಲಸ ನೋಡ್ಕೋ ಅದು ಬಿಟ್ಟು ಸಿನೆಮಾ ಬಂದಬುಡ್ತಾರೆ ಅನ್ನೋರು ನನ್ನ ತಂದೆ ನಿನ್ನಂತವರನ್ನ ಕಾನಿಷ್ಕ ಕಾಪೌಂಡು ಮೇಲೆ ಎಷ್ಟು ಜನಾನ ನೋಡಿಲ್ಲ ಅನ್ನೋರು” ಯಾಕಂದ್ರೆ ಅವ್ರು ನಿರ್ಮಾಪಕ ಆಗಿದ್ದವರೆ. ಈ ಮಾತುಗಳು ನನ್ನಾಸೆನ ಹಿಮ್ಮಡಿಗೊಳಿಸ್ತಿದ್ವು ಧೃತಿಗೆಡ್ತಿರ್ಲಿಲ್ಲ . ಹುಟ್ಟಿನಿಂದ ಬಂದ ಗುಣ ಅದು ಕಷ್ಟ ಬೇಡ ಅಂದಾಗ ನಾನು ಅದನ್ನೇ ಹೆಚ್ಚು ಪ್ರಯತ್ನ ಪಡ್ತಿದ್ದೆ. ಹಾಗಾಗಿ ಸಿನೆಮಾ ಇನ್ನಷ್ಟು ಹತ್ತಿರ ಆಗ್ತಾ ಬಂದು.

ಶಾಲಾ ದಿನಗಳಲ್ಲಿ ಹಲವಾರು ನಾಟಕಗಳಲ್ಲಿ ನಟಿಸಿ ಒಳ್ಳೆ ನಟ ಅನಿಸಿಕೊಂಡಿದ್ದೆ. ಆ ಆಸೆ ನನ್ನನ್ನು ಸಿನೆಮಾ ರಂಗದವರೆಗು ಕರೆದುಕೊಂಡು ಬಂತು ನಡುವೆ ಒಂದಷ್ಟು ರಂಗಸಂಸ್ಥೆಗಳಲ್ಲಿ ಒಂದಷ್ಟು ನಾಟಕಗಳಲ್ಲಿ ನಟನೆ ಮಾಡಿದೆ. ನಾನೇ ಕಾಲೇಜು ರಂಗದಲ್ಲಿ ಒಂದು ನಾಟಕ ಮಾಡಿದೆ…

ಆ ನಂತರದ ದಿನಗಳಲ್ಲಿ ಹಲವಾರು ಸಿನೆಮಾಗಳಿಗೆ ಅವಕಾಶಕ್ಕಾಗಿ ಅಲೆದಾಡುತ್ತಿದ್ದೆ ಪತ್ರಿಕೆಗಳಲ್ಲಿ ಬರುತ್ತಿದ್ದ ಜಾಹೀರಾತುಗಳಿಗೆ ಹೋಗುವುದು ಪ್ರತಿಭೆ ಪ್ರದರ್ಶಿಸಿವಿದು ಮಾಮೂಲು ಪರಿಪಾಟವಾಯ್ತು. ಎಲ್ಲಿಯೂ ಅವಕಾಶ ಮಾತ್ರ ಸಿಗಲಿಲ್ಲ ಹಲವಾರು ಜನ ಮ್ಯಾನೇಜರ್ಗಳ ಬಳಿ ಫೋಟೋ ಕೊಟ್ಟು ಅವಕಾಶ ಕೇಳುತ್ತಿದ್ದೆ ಯಾರು ಸರಿಯಾಗಿ ಮಾರ್ಗದರ್ಶನ ನೀಡಲಿಲ್ಲ.ಹೀಗೆ ಹಲವಾರು ಸ್ಥಳಗಳಲ್ಲಿ ಪ್ರಯತ್ನ ಪಟ್ಟೆ. ಕಡೆಗೆ ಕೆಲವು ಸಿನೆಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದೆ ಆ ಸಿನೆಮಾಗಳು ಯಾವುದು ಪೂರ್ಣಗೊಳ್ಳಲಿಲ್ಲ ,ಪೂರ್ಣಗೊಂಡರು ನನ್ನ ಹೆಸರೇ ಇರ್ತಿರ್ಲಿಲ್ಲ ಅದೆಲ್ಲ ಬಿಟ್ಟು ಮತ್ತೆ ನನ್ನ ಪಯಣ ನಟನೆ ಕೆಡೆಗೆ . ಒಂದಷ್ಟು ಸಿನೆಮಾಗಳಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಬೇರೇನು ಇರಲಿಲ್ಲ.

2005ರಲ್ಲಿ ನಮ್ಮದೇ ನಿರ್ಮಾಣದಲ್ಲಿ ಶುರುವಾದ 1992ರಲ್ಲಿ ನಿಂತುಹೋಗಿದ್ದ ಸಿನೆಮಾ ಒಂದರಲ್ಲಿ ಕೆಲಸ ನೋಡಿಕೊಳ್ಳುತ್ತಿದ್ದೆ ಇಲ್ಲಿಂದ ಮತ್ತೆ ಹೊಸ ಹುರುಪು ಶುರುವಾಯ್ತು. ಮತ್ತೆ 2006ರಲ್ಲಿ ಅಪ್ಪಚ್ಚಿ ಸಿನೆಮಾದ ಮುಖಾಂತರ ಕಾಶಿನಾಥ್ ಸರ್ ಅವರ ಪರಿಚಯ ಆಯ್ತು ಅವರ ಬಳಿ ಅವಕಾಶ ಕೊಡಿಸಲು ನನ್ನ ತಂದೆಗೆ ಕೇಳಿದಾಗ” ನೀನೇನೋ ದಬ್ಬಾಕ್ತಿನಿ ಅಂತಿದ್ದಲ್ಲ ಈಗ ಹೋಗು ಅವ್ರತ್ರ ನೀನೇ ಅವಕಾಶ ತಗೋ ನೋಡೋಣ” ಅಂದ್ರು ಆಗ ಮೊದಲನೇ ಬಾರಿಗೆ ಜಯನಗರ ಕಾಶಿ ಸರ್ ಮನೆಗೆ ಹೋಗಿ ಪರಿಚಯ ಮಾಡ್ಕೊಂಡೆ “ಸರ್ ಈ ಸಿನೆಮಾ ದಲ್ಲಿ ನನಗೊಂದು ಪಾತ್ರ ಕೊಡಿ ಅಂದೆ ಒಂದಷ್ಟು ಪಾತ್ರಗಳನ್ನ ಹೇಳಿದ್ರು, ನೀವು ಈ ಹಿಂದೆ ಎಲ್ಲಾದ್ರೂ ಮಾಡಿದ್ದೀರಾ ಅಂದ್ರು ಒಂದಷ್ಟು ನಾಟಕ ಅದು ಇದು ಮಾಡಿದ್ದಿನಿ” ಅಂದೆ ಸರ್ ಇದ್ಯಾವದು ಇಲ್ಲ ಅಂದ್ರೆ ಅಸ್ಸಿಸ್ಟಂಟ್ ಡೈರೆಕ್ಟರ್ ಆಗಿ ಆದ್ರೂ ಕೊಡಿ ಸರ್ ಅಂದೆ ಸ್ಕ್ರಿಪ್ಟ್ ಲೆವೆಲ್ಲಲ್ಲಿ ಒಂದಷ್ಟು ಸಿನೆಮಾ ಮಾಡಿದ್ಡೀನ್ ಅಂದೆ ಈಗಾಗಲೇ ಮೂರು ಜನ ಇದ್ದಾರೆ ನಿಮಗೇಗ್ ಅಂದ್ರು ಸರ್ ನಾಲ್ಕನೆಯನು ಅಬ್ಸರ್ವ್ವರ್ ಅಂತಿರ್ತಾನಲ್ಲ ಅದು ಕೊಡಿ ಸರ್ ಅಂದೆ ಅವ್ರು ನಕ್ಕರು…. ನಂತರ ಅಪ್ಪಚ್ಚಿ ಸಿನೆಮಾದಲ್ಲಿ ಒಳ್ಳೆ ಪಾತ್ರ ಕೊಟ್ಟರು ಹಾಗೆ ಅಸ್ಸಿಸ್ಟಂಟ್ ಆಗಿಯೂ ಒಪ್ಪಕೊಂಡ್ರು ಅಂತವರ ಜೊತೆ ಕೆಲಸ ಮಾಡೋದು ನನ್ನ ಪುಣ್ಯ ಅನ್ಕೊಂಡೆ.

ಅಪ್ಪಚ್ಚಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಶ್ರೀನಿವಾಸ್ ನಿರ್ದೇಶನದ ನಮ್ಮದೇ ನಿರ್ಮಾಣದ ವಸಂತಕಾಲ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದೆ. ನಿರೀಕ್ಷೆ ಮೂಡಿಸುವ ಪಾತ್ರವಾಗಿದ್ದರೂ ಚಿತ್ರದ ಸೋಲಿನಿಂದ ಬೆಳಕಿಗೆ ಬರಲಾಗಲಿಲ್ಲ ಆ ನಂತರ ಯಾವುದೇ ಉತ್ತಮ ಅವಕಾಶಗಳಿರಲಿಲ್ಲ, ಆ ನಂತರ ನಟಿಸಿದ ಇನ್ನು ಹಲವಾರು ಚಿತ್ರಗಳು ಕೈಲಿದ್ದರೂ ಯಾವುದು ಪೂರ್ಣಗೊಳ್ಳಲಿಲ್ಲ. “ಕಲ್ಯಾಣಿ ಸ್ಕೂಲ್ “ಎಂಬ ಚಿತ್ರ ಪೂರ್ಣಗೊಂಡರೂ ನಿರ್ದೇಶಕ- ನಿರ್ಮಾಪಕರ ಜಗಳದಿಂದ ಬಿಡುಗಡೆ ಭಾಗ್ಯವೇ ಕಂಡಿಲ್ಲ. ಇದರ ನಡುವೆಯೇ ಗೆಳೆಯ ಆನಂದ್ ವತರ್ ನಿರ್ದೇಶನದ ಹ್ಯಾಪಿ ಮ್ಯಾರೀಡ್ ಲೈಫ್ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ ಎಂದರು.

ಈ ಮಧ್ಯೆ ಕೆಲವೊಂದು ಕಿರುಚಿತ್ರಗಳಲ್ಲಿ ಅಭಿನಯಿಸಿದೆ ಅಲ್ಲೂ ನನ್ನ ನಟನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ತು…. ಈಗ ಸದ್ಯ ಒಂದಷ್ಟು ಸಿನೆಮಾಗಳು ಕೈಲಿದ್ದು ಗೆಳೆಯ ಶ್ರೀ ಆನಂದ್ ವತಾರ್ ನಿರ್ದೇಶನದ “ಶ್ರೀ ಗಣಪತಿ ಬಪ್ಪ ಮೋರಿಯ” ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸುತ್ತಿದ್ದು ಚಿತ್ರ ಹಿಂದಿ, ಕನ್ನಡ,ಹಾಗೂ ಮರಾಠಿ ಭಾಷೆಗಳಲ್ಲಿ ತೆರೆ ಕಾಣುತ್ತಿದೆ,. ಸದ್ಯ ಡಬ್ಬಿಂಗ್ ಮುಗಿದಿದೆ ಹಾಗೂ ರಾಜಶೇಖರ್ ನಿರ್ಮಾಣದ ಮಂಜು ಗಂಗಾವತಿ ನಿರ್ದೇಶನದ “ಹಳ್ಳಿ ಹೈಕ್ಳ ಪ್ಯಾಟೆ ಲೈಫು” ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ , ಎಂದು ಹೇಳಿದ್ದಾರೆ.

ಈಗ ಪ್ರಸ್ತುತ ಡಿ ಸರವಣ ಪ್ರಭು ನಿರ್ದೇಶನದ “ವಾಸುಕಿ”

ಸುರೇಶ್ ಕೆ ಆರ್ ಅವರ ನಿರ್ದೇಶನ ” ಚಿತ್ರ ಲಹರಿ” ಜೋಡಿಹುಲಿ, ಮಹದೇವ್ ಮಂಡ್ಯ ನಿರ್ದೇಶನದ “ನಂದಿನಿ ಮನೆ ಜಯನಗರ” ಜಯ ಶ್ರೀನಿವಾಸ್ ನಿರ್ದೇಶನದ “ನಿಮ್ ರುಕ್ಮಿಣಿ” ಚಿನ್ಮಯ್ ಎಂ ರಾವ್ ಅವರ ನಿರ್ಮಾಣದ “ನಾದಮಯ” ರಾಜೇಶ್ ನಿರ್ಮಾಣ ನಿರ್ದೇಶನದ ತಮಿಳಿನ ನಿರ್ದೇಶಕ ಬಾಲ ರವರ “ನಾಚಿಯಾರ್” ರಿಮೇಕ್ ನಲ್ಲೂ ನಾಯಕನಾಗಿ ನಟಿಸುತ್ತಿದ್ದೇನೆ, ನವ ನಿರ್ದೇಶಕ ಸಂತೋಷ್ ಜ್ಯೋತಿರ್ಲಿಂಗಮ್ ಅವರ ನಿರ್ದೇಶನದಲ್ಲಿ ನಟಿಸಲು ಸಹಿಯಾಗಿದೆ ಹಾಗೂ ರಮೇಶ್ ಕೋಟೆ ನಿರ್ದೇಶನದ ಅಸಾಧ್ಯ ಚಿತ್ರದಲ್ಲೂ ನಟಿಸುತ್ತಿದ್ದೇನೆ . ಪ್ರಸ್ತುತ ಕೈ ತುಂಬಾ ಕೆಲಸವಿದ್ದು ಚಿತ್ರರಂಗದಲ್ಲಿ ಗಟ್ಟಿಯಾಗಿ ತಲವೂರುವ ನಂಬಿಕೆ ಬಂದಿದೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿ ನಟನಾಗಿ ಕನ್ನಡಿಗರ ಮನಗಳಲ್ಲಿ ನಿಲ್ಲಬೇಕೆಂಬ ಆಸೆ ಇದೆ. ಇದಕ್ಕಾಗಿ ನಟನಾ ಪೂರ್ವ ತಯಾರಿಗಳನ್ನೂ ಮಾಡುತ್ತಿದ್ದೇನೆ…
ಮತ್ತೊಂದು ಹಿಂದಿ ಚಿತ್ರವೊಂದಕ್ಕೆ ಸಹಿಯಾಗಿದೆ ಚಿತ್ರವು ಬರುವ ವರ್ಷ ಏಪ್ರಿಲ್ನಲ್ಲಿ ಶುರುವಾಗಲಿದೆ.

ಈ ನಟನಿಗೆ ಯಶಸ್ಸು ದೊರೆಯಲಿ.

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker