ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ವಿಕ್ರಾಂತ್ ರೋಣ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಸೇರಿದೆ. ಕಿಚ್ಚನ ಸಿನಿಕರಿಯರ್ ನ ವಿಭಿನ್ನ ಸಿನಿಮಾ ಎನಿಸಿಕೊಂಡ ಈ ಚಿತ್ರ ಜುಲೈ 28 ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಸಿನಿಮಾಗೆ ಚಿತ್ರರಸಿಕರು ಜೈಕಾರ ಹಾಕಿದ್ದರು. ಬಾಕ್ಸಾಫೀಸ್‌ನಲ್ಲಿಯೂ ಭರ್ಜರಿ ಕಮಾಯಿ ಮಾಡಿದ್ದ ರಣ ರಣ ವಿಕ್ರಾಂತ್ ರೋಣ ಈಗ ಜೀ5 ಒಟಿಟಿಗೆ ಲಗ್ಗೆ ಇಡ್ತಿದೆ.
ಕಿಚ್ಚನ ಬರ್ತ್ ಡೇ ಗುಮ್ಮನ ಆಗಮನ
ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನುಮದಿನ. ಈ ದಿನದಂದು ಪ್ರತಿಷ್ಠಿತ ಒಟಿಟಿ ಜೀ5ಕ್ಕೆ ಗುಮ್ಮ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ. ಅದಕ್ಕೂ ಮುನ್ನ ಜೀ5 ಸ್ಪೆಷಲ್ ಟ್ರೇಲರ್ ವೊಂದನ್ನು ಅನಾವರಣ ಮಾಡಲಿದೆ. ಕನ್ನಡದಲ್ಲಿ ಮಾತ್ರ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಶೀರ್ಘದಲ್ಲಿಯೂ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗಿದ್ದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜೊತೆಗೆ ಹೆಜ್ಜೆ ಹಾಕಿದ್ದ ರಾ ರಾ ರಕ್ಕಮ್ಮ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿತ್ತು. ಸ್ಪೆಷಲ್ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದ ಜಾಕಿಗೆ ಕನ್ನಡಿಗರು ಮನಸೋತಿದ್ದರು. ನಿರೂಪ್ ಭಂಡಾರಿ, ನೀತಾ ಅಶೋಕ್, ಮಿಲನ ನಾಗರಾಜ್, ಮಧುಸೂದನ್ ರಾವ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನ ಮೋಡಿ ಮಾಡಿತ್ತು. ತ್ರಿಡಿ ಅವತರಣಿಕೆಯಲ್ಲಿ ಪಂಚ ಭಾಷೆಯಲ್ಲಿ ರಿಲೀಸ್ ಆದ ವಿಕ್ರಾಂತ್ ರೋಣ ಈಗ ಜೀ5 ಒಟಿಟಿಗೆ ಎಂಟ್ರಿ ಕೊಡ್ತಿದ್ದು, ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಮನೆಯಲ್ಲಿ ಇಡೀ ಮನೆ ಮಂದಿ ಜೊತೆ ಕುಳಿತು ಸಿನಿಮಾ ಕಣ್ತುಂಬಿಕೊಳ್ಳಿ.