ಸಾಗರ : ಪ್ರಸ್ತುತ ತಂತ್ರಜ್ಞಾನ ಭಾಷೆ ಮತ್ತು ಬಾಂದವ್ಯ ಗಟ್ಟಿಗೊಳಿಸುವ ಪ್ರಮುಖ ಸಾಧನ,ತಂತ್ರಜ್ಞಾನವನ್ನು ನಮಗೆ ಬೇಕಾದ ಭಾಷೆಯಲ್ಲಿಯೇ ಪ್ರಾಪಂಚಿಕ ಜ್ಞಾನ ಪಡೆಯಲು ಬಳಸುವುದರಿಂದ ಭಾಷೆ ಉಳಿಯುವ ಜೊತೆಗೆ ಬೆಳೆಯುತ್ತದೆ ಎಂದು ಉಪನ್ಯಾಸಕ ಡಾ.ಸರ್ಫ್‍ರಾಜ್ ಚಂದ್ರಗುತ್ತಿ ಹೇಳಿದರು.
ಕಳೆದ ಮಾರ್ಚ್ ಒಂದರಂದು ಸಾಗರದ ಬಿ.ವಿ. ರವೀಂದ್ರನಾಥ ಅವರ ಲೆಕ್ಕಪರಿಶೋಧನಾ ಕಚೇರಿ ಸಭಾಂಗಣದಲ್ಲಿ ಕನ್ನಡ ಟೈಮ್ಸ್ ಮೀಡಿಯಾ ವಲ್ರ್ಡ್ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಎರಡು ದಿನಗಳ ಕನ್ನಡ ವಿಕಿಪೀಡಿಯಾ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಸರ್ಫ್‍ರಾಜ್ ಚಂದ್ರಗುತ್ತಿ ಅತ್ಯಮೋಘವಾಗಿ ಮಾತನಾಡಿದರು. ಭಾಷಣದ ಪೂರ್ಣಪಾಥವನ್ನು ಕನ್ನಡ ಟೈಮ್ಸ್ ಅಲ್ಲಿ ಪ್ರಕಟಿಸಲಾಗಿದೆ.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡ ತಂತ್ರಾಂಶ ಪಂಡಿತ ಹಾಗೂ ಕನ್ನಡ ವಿಕಿಪೀಡಿಯಾ ಸಂಪಾದಕ ಡಾ.ಯು. ಬಿ.ಪವನಜ ಮಾತನಾಡಿ ಇಂತಹ ಕಾರ್ಯಾಗಾರದ ಕಾರ್ಯಕ್ರಮಗಳಲ್ಲಿ ದೊಡ್ಡದೊಡ್ಡ ಗಣ್ಯರುಗಳು ತಂತ್ರಾಂಶ ಗಣಕದ ಪ್ರಯೋಜನಗಳ ಬಗ್ಗೆ ಹೊಗಳಿ ಹಾಡಿ ನೀವು ಮಾಡಿ ಎನ್ನುವುದಕ್ಕಿಂತ ನಾವು ವಿಕಿಪೀಡಿಯಾ ಕಾರ್ಯದಲ್ಲಿ ಸಕ್ರಿಯ ತೊಡಗಿಕೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸುವುದು ಅತಿ ಅಗತ್ಯವಾಗಿದೆ ಎಂದರು.
ಸರ್ಕಾರದ ಮಾಹಿತಿ ತಂತ್ರಜ್ಞಾನ ವೆಬ್‍ಸೈಟ್‍ಗಳು ಕೆಲವೆ ಒಂದೆರಡು ವರ್ಷ ಗಳಲ್ಲಿ ಅವನತಿಯಾಗುತ್ತವೆ. ಆದರೆ ಸರ್ಕಾರದ ಅಕಾಡಮಿಗಳು, ವೈದಕೀಯ ಪರಿಷತ್ತು ಸೇರಿದಂತೆ ಎಲ್ಲಾ ಸಂಸ್ಥೆಗಳು ಅಮೂಲ್ಯ ಮಾಹಿತಿಗಳನ್ನು ವಿಕಿಪೀಡಿಯಾಕ್ಕೆ ಆಪ್‍ಲೋಡ್ ಮಾಡುವುದರಿಂದ ಕನ್ನಡದಲ್ಲಿಯೇ ಪ್ರಾಪಂಚಿಕ ಜ್ಞಾನ ವಿಸ್ತರಿಸುವ ಮಹತ್ವದ ಮಾಧ್ಯಮವನ್ನಾಗಿ ಮಾಡಲು ಸಹಕಾರಿಯಾಗುತ್ತದೆ, ಇಂತಹ ಕಾರ್ಯಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಬೇಕು ಎಂದರು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಮುರುಳಿಧರ, ಕನ್ನಡ ಟೈಮ್ಸ್ ಸಂಸ್ಥೆಯ ಅಧ್ಯಕ್ಷ ಜಿ.ಟಿ.ಶ್ರೀಧರ ಶರ್ಮಾ, ಕನ್ನಡ ಟೈಮ್ಸ್ ಸಂಸ್ಥೆಯ ಸಂಸ್ಥಾಪಕರಾದ ಚಿನ್ಮಯ ಎಂ.ರಾವ್ ಉಪಸ್ಥಿತರಿದ್ದರು. ಕನ್ನಡ ಟೈಮ್ಸ್ ಸಂಸ್ಥೆಯ ಗೌರವ ಸಲಹೆಗಾರರಾದ ಪ್ರಖ್ಯಾತ ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಗಾಯಕಿ ಸಹನಾ ಜಿ.ಭಟ್ ಪ್ರಾರ್ಥಿಸಿ, ಗಾಯಕ ಅರುಣ್‍ಘಾಟೆ ಕಾರ್ಯಕ್ರಮ ನಿರ್ವಹಿಸಿ, ಎಂ.ಸತ್ಯನಾರಾಯಣ ಭಟ್ ಸ್ವಾಗತಿಸಿ, ವೈಶಾಲಿ ವಂದಿಸಿದರು.
Sunday, March 2, 2014