ಉದ್ಯಾನವನಕನ್ನಡಜೀವನ ಕಲೆ

ಕೋಜಿಕೊಡೆಯಲ್ಲಿ ಮೊದಲ ಲಿಂಗ ಉದ್ಯಾನವನ

ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕೇರಳದ ಕೋಳಿಕೊಡೆಯಲ್ಲಿ ದೇಶದ ಮೊದಲ ಲಿಂಗ ಉದ್ಯಾನವನ ಉದ್ಘಾಟಿಸಿದರು. ಇದು ಏಷ್ಯಾದಲ್ಲೇ ಮೊಟ್ಟಮೊದಲ ಲಿಂಗ ಗುಣಮಟ್ಟ ಒಗ್ಗೂಡಿಸುವ ಕೇಂದ್ರವಾಗಿಯೂ ಇದು ಕಾರ್ಯ ನಿರ್ವಹಿಸಲಿದೆ. ಈ ಉದ್ಯಾನವನವನ್ನು ಕೇರಳ ಸರ್ಕಾರದ ಸಾಮಾಜಿಕ ನ್ಯಾಯ ವಿಭಾಗ ಅಭಿವೃದ್ಧಿಪಡಿಸಿದ್ದು, ಇದು ಒಟ್ಟಾರೆ ಲಿಂಗ ಗುಣಮಟ್ಟ ಹೆಚ್ಚಳದ ಸಲುವಾಗಿ ಸಂಶೋಧನೆ ಹಾಗೂ ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಇದನ್ನು ರೂಪಿಸಲಾಗಿದೆ.

ಪ್ರಮುಖ ಅಂಶಗಳು
* ಲಿಂಗ ಉದ್ಯಾನವವು ಮಹಿಳೆಯರು ಅಭಿವೃದ್ಧಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡುತ್ತದೆ.
* ರಾಜ್ಯ ಹಾಗೂ ಕೇಂಧ್ರ ಸರ್ಕಾರಗಳು ಎಲ್ಲರನ್ನೂ ಒಳಗೊಂಡ ಹಾಗೂ ತಾರತಮ್ಯ ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಯತ್ನಗಳಿಗೆ ಇದು ಪೂರಕವಾಗಿ ಕೆಲಸ ಮಾಡಲಿದೆ.
* ಇದು ಎಲ್ಲ ಲಿಂಗಿಗಳಿಗೆ ನಿರ್ದಿಷ್ಟವಾಗಿ ಸಂಬಂಧಪಡುವ ಎಲ್ಲ ವಿಷಯಗಳನ್ನೂ ಒಳಗೊಳ್ಳಲಿದ್ದು, 2015ರ ಲಿಂಗ ಹಾಗೂ ಲಿಂಗಪರಿವರ್ತಿತ ನೀತಿಗಗಳೂ ಇದರ ವ್ಯಾಪ್ತಿಯಲ್ಲಿ ಬರುತ್ತವೆ.
* ಈ ಉದ್ಯಾನವನದಲ್ಲಿರುವ ಲಿಂಗ ಸಂಸ್ಥೆ ಮುಖ್ಯವಾಗಿ ಕಲಿಕೆ, ಸಂಶೋಧನೆ ಹಾಗೂ ಸಾಮಥ್ರ್ಯ ವೃದ್ಧಿಯಲ್ಲಿ ಕೆಲಸ ಮಾಡಲಿದೆ.
* ಇದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ನಾಗರಿಕ ಸಮಾಜ ಹಾಗೂ ಶೈಕ್ಷಣಿಕ ತಜ್ಞರನ್ನು ಒಂದೇ ವೇದಿಕೆಯಡಿ ತಂದು, ಲಿಂಗ ಸಮಸ್ಯೆಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಲುವ ಮೂಲಕ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಇದು ಕಾರ್ಯನಿರ್ವಹಿಸಲಿದೆ.
* ಲಿಂಗ ಅಸಮಾನತೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಜ್ಞಾನವನ್ನು ಹಾಗೂ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
* ಇದು ಲಿಂಗ ಸಮಾನತೆ, ಆರ್ಥಿಕ ಪ್ರಗತಿ ಹಾಗೂ ಬಡತನ ನಿರ್ಮೂಲನೆ ನಿಟ್ಟಿನಲ್ಲಿ ಪ್ರಮುಖ ಸಂಬಂಧಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಲಿಂಗ ಆಧರಿತ ಸಮಸ್ಯೆಗಳನ್ನು ರಾಷ್ಟ್ರೀಯ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡೆದು ಹಾಕುವುದು ಇದರ ಉದ್ದೇಶ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.