ಯೋ ವೇದಾದೌ ಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ |
ತಸ್ಯ ಪ್ರಕೃತಿಲೀನಸ್ಯ ಯಃ ಪರಃ ಸ ಮಹೇಶ್ವರಃ ||
ಸ್ವರ ಎಂದರೆ ಓಂಕಾರ. ಇದನ್ನು “ ಪ್ರಣವ” ಎಂದೂ ಕರೆಯುತ್ತಾರೆ. ವೇದಗಳ ಆದಿಯಲ್ಲಿ ಈ ಓಂಕಾರವು ( ಸ್ವರವು) ಉಚ್ಚರಿಸಲ್ಪಡುತ್ತದೆ. ಅಂತೆಯೇ ವೇದಗಳ ಕೊನೆಯಲ್ಲಿರುವ ಉಪನಿಷತ್ತಿನಲ್ಲಿಯೂ ಅದೇ ಸ್ವರ ಅಥವಾ ಪ್ರಣವವು ಉಚ್ಚರಿಸಲ್ಪಡುತ್ತದೆ.
ಆ ಓಂಕಾರವು ಪ್ರಕೃತಿಯಲ್ಲಿ ಒಂದಾಗುವುದು. ಈ ಪ್ರಕೃತಿಗಿಂತ ಶ್ರೇಷ್ಠನಾದವನು ಪರಮೇಶ್ವರ ಎಂದು ನಂಬಲಾಗಿದೆ. ಅಂದರೆ ಓಂಕಾರದಲ್ಲಿ ಪರಮೇಶ್ವರನನ್ನು ಕಾಣುತ್ತೇವೆ.
ಓಂ ಕಾರವನ್ನು ಅಥವಾ ಪ್ರಣವವನ್ನು ಸಂನ್ಯಾಸಿಗಳು ಸದಾ ಅನುಸಂಧಾನ ಮಾಡುತ್ತಾರೆಂಬ ಅಭಿಪ್ರಾಯವೂ ಇದೆ.
ಇದು ವೇದಗಳ ಆದಿಯಿಂದ ಉಪನಿಷತ್ತಿನತನಕ ಹಾಸಿಹೊಕ್ಕಿದೆ, ಅಷ್ಟು ಪ್ರಭಾವ ಬೀರಿದೆ. ದೇವತಾ ಪೂಜೆಯ ಮೊದಲಲ್ಲಿ ಹೇಳುವ ಮಂತ್ರ.
ಸಂಗ್ರಹ:- ಜಿ. ಟಿ. ಶ್ರೀಧರ ಶರ್ಮಾ,
ವಿಜಯನಗರ- ಸಾಗರ-577401
ದೂರವಾಣಿ- 9480473568 –





