ಅಂಕಣಶಾಶ್ವತ ಸತ್ಯಗಳು

 ಹಿಂಸೆ ಮಾಡಬೇಡ

ಶಾಶ್ವತ ಸತ್ಯಗಳು-1

ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ |

ವೀರಾನ್ಮಾ ನೋ ರುದ್ರ ಭಾಮಿತೋ ವಧೀರ್ ಹವಿಷ್ಮಂತೋ ನಮಸಾ ವಿಧೇಮತೇ  ||

ಎಲೈ ರುದ್ರ ದೇವನೇ ನಮ್ಮ ಮಕ್ಕಳನ್ನು , ಮೊಮ್ಮಕ್ಕಳನ್ನು ಹಿಂಸೆ ಮಾಡಬೇಡ. ನಮ್ಮ ಆಯುಷ್ಯವನ್ನು ಕಡಿಮೆ ಮಾಡಬೇಡ. ನಮ್ಮ ಗೋವುಗಳನ್ನು , ನಮ್ಮ ಕುದುರೆಗಳನ್ನು ನಾಶಮಾಡಬೇಡ. ನೀನು ಕೋಪಗೊಂಡಾಗ ನಮ್ಮ ವೀರರಾದ ಸಂಗಡಿಗರನ್ನು ಕೊಲ್ಲಬೇಡ. ಏಕೆಂದರೆ ಹವಿಸ್ಸಿನಿಂದ ಕೂಡಿದ ನಾವು ನಿನ್ನನ್ನು ನಮಸ್ಕಾರದೊಂದಿಗೆ ಪೂಜಿಸುತ್ತೇವೆ.

ಭಗವಂತನಲ್ಲಿ ನಾವು ಪ್ರಾರ್ಥಿಸುವಾಗ ನಮ್ಮೊಂದಿಗೆ ನಮ್ಮ ಸಂಸಾರ, ವೀರರು ಹಾಗೂ ನಮ್ಮೊಂದಿಗೇ ಇರುವ ನಮ್ಮ ಹಸುಗಳು ಹಾಗೂ ಕುದುರೆಗಳನ್ನೂ ಸ್ಮರಿಸುತ್ತೇವೆ. ವೇದಕಾಲದಲ್ಲಿಯೇ ಇಂಥ ಸಮಗ್ರ ಹಿತವನ್ನು ನಾವು ನೊಡಬಹುದು. ಸರ್ವಸ್ವವೂ ಸ್ವಾರ್ಥದ ಸುತ್ತಲೇ ಗಿರಕಿ ಹೊಡೆಯುತ್ತಿರುವ ಇಂದಿನ ಕಾಲದಲ್ಲಿ ವೇದಕಾಲ ಸಾರ್ವತ್ರಿಕ ಹಿತದ ಪ್ರಾರ್ಥನೆ (ಪರಿಕಲ್ಪನೆ) ಎಂದೆಂದೂ ಬತ್ತದ –ಮಾಸದ ಶಾಶ್ವತ ಸತ್ಯವಾಗಿದೆ. ಬಾಳ ಬೆಳಕಾಗಿದೆ.

(ಮೃತ್ಯುನಿವಾರಣ ಮಂತ್ರಗಳು).

ಸಂಗ್ರಹ:- ಜಿ. ಟಿ. ಶ್ರೀಧರ ಶರ್ಮಾ, ವಿಜಯನಗರ ಸಾಗರ-577401

ದೂರವಾಣಿ- 9480473568.

Related Articles

Back to top button