ಬೆಂಗಳೂರು : ನಗರದ ಇಸ್ರೊ ಲೇಔಟಿನಲ್ಲಿರುವ ಆಲ್ಪೈನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಯೋಗ ಶಿಕ್ಷಕಿ ಶುಭ ಅವರ ಮಾರ್ಗದರ್ಶನದಲ್ಲಿ ಯೋಗಾಸನದ ವಿವಿಧ ಭಂಗಿಗಳಲ್ಲಿಯೇ ವಿವಿಧ ಫಾರ್ಮೇಶನ್‌ಗಳನ್ನು ಅತ್ಯುದ್ಭುತವಾಗಿ ಒಡಮೂಡಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಮೇಶ್, ಶಾಲೆಯ ಪ್ರಾಂಶುಪಾಲಕಿ ಜಯಲಕ್ಷ್ಮೀ ಶಾಸ್ತ್ರಿ ಹಾಗೂ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
೨೭-೧-೨೦೧೭