ಸಾಗರ : ಇತ್ತೀಚೆಗಷ್ಟೇ ನೊಂದಣಿಯಾಗಿದ್ದ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ( KANNADA TIMES MEDIA WORLD) ಎಂಬ ಹೊಸ ಟ್ರಸ್ಟಿನ ಪ್ರಥಮ ಸಭೆ ಸೋಮವಾರ ಸಂಜೆ (11-2-2013) ನಗರದ ವಾಸವಿ ಕಲ್ಯಾಣ ಮಂಟಪದ ಎದುರು ಭಾಗದಲ್ಲಿರುವ ಅರ್ಪಣ ಟೈಲರ್ಸ್ ಮಹಡಿಯ ಮೇಲೆ ಜರುಗಿತು.
ಯುವ ಸಂಗೀತ ನಿರ್ದೇಶಕ ಚಿನ್ಮಯಎಂ.ರಾವ್ ಅವರು ಸಮಾಜಸೇವೆಗೆಂದೇ ಸ್ಥಾಪಿಸಿರುವ ಈ ಟ್ರಸ್ಟ್ ಹಲವು ಜನೋಪಕಾರಿ ಯೋಜನೆಗಳನ್ನು ರೂಪಿಸಿಕೊಂಡಿದೆ. ಇವುಗಳನ್ನು ಕಾರ್ಯಾನುಷ್ಠಾನಗೊಳಿಸುವುದು ಹೇಗೆಂದು ಸಂಸ್ಥೆಯಮಂಡಳಿಯ ಸರ್ವ ಸದಸ್ಯರೂ ಚರ್ಚಿಸಿದರು. ಟ್ರಸ್ಟಿನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ನಿವೃತ್ತ ಮುಖ್ಯೋಪಾದ್ಯಾಯ ಹಾಗು ಸಮಾಜಸೇವಕ ಜಿ.ಟಿ ಶ್ರೀಧರ ಶರ್ಮ ಸಂಸ್ಥೆಯೊಂದು ಸಮಾಜಮುಖಿಯಾಗಿ ಹೇಗೆಲ್ಲಾ ಕಾರ್ಯನಿರ್ವಹಿಸಬಹುದೆಂಬುದಕ್ಕೆ ಉದಾಹರಣೆ ಸಹಿತವಾಗಿ ವಿವರಿಸಿದರು.
ಸದ್ಯದಲ್ಲೇ ಟ್ರಸ್ಟ್ ವಿನೂತನ ಬಗೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥಾಪಕ ಸದಸ್ಯ ಚಿನ್ಮಯ ಎಂ.ರಾವ್ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಂಡಳಿಯ ಸದಸ್ಯರಾದ ನಾರ್ಬರ್ಟ್ ಇಗ್ನೇಶಿಯಸ್ ಗೋಮ್ಸ್, ಎನ್.ಡಿ ಹೆಗಡೆ, ಕೆ.ಎಸ್ ರಾಘವೇಂದ್ರ, ಹಾಗು ಕೆ.ರಾಜು ಉಪಸ್ಥಿತರಿದ್ದರು.
14-2-2013
*********************