ಕಥೆ : ತ್ವಮಸ್ಮಿನ್ (ಯು.ಕೆ.ಪ್ರವೀಣ)
ಹಣೆಬರಹ ಸರಿ ಇದ್ರೆ ಭಿಕ್ಷುಕ ಕೋಟ್ಯಾದಿಪತಿ ಅಗ್ಬಹುದು. ಅದ್ರೆ ಗ್ರಹಚಾರ ಕೆಟ್ರೆ, ಅವನ ಹಣೆಬರಹ ಸರಿ ಇಲ್ಲ ಅಂದ್ರೆ, ಕೋಟ್ಯಾಧಿಪತಿ ಬಿಕ್ಷುಕ ಆಗ್ಬಿಡ್ತಾನೆ. ನೊಂದವರು ಯಾವಾಗ್ಲು ಹೇಳೋ ಮಾತು. ನನ್ನ ಟೈಮ್ ಏ ಸರಿ ಇಲ್ಲ ಅಂತ. ಈ ಟೈಮ್, ಹಣೆಬರಹ, ಗ್ರಹಚಾರ, ಇವೆಲ್ಲ ಎಷ್ಟು ಸತ್ಯ ಎಷ್ಟು ಸುಳ್ಳು ನ್ನೋದು ಏನಾದ್ರು ನಿಮ್ಗೆ ಗೊತ್ತಾ?
ಜೀವನದಲ್ಲಿ ಆಸೆ, ಆಕಾಂಕ್ಷೆಗಳಿಲ್ಲದೆ, ಆಡಂಬರದ ಜೀವನವನ್ನು ಕನಸಲ್ಲಿಯೂ ಕಾಣದೆ, ತಂದೆ ತಾಯಿ ಬಂಧು ಬಳಗ ಯಾರೆಂದು ತಿಳಿಯದೆ, ಕೊನೆ ಪಕ್ಷ ತಮಗಿದ್ದ ನಾಮಾಂಕಿತದಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲಾಗದೆ, ಒಬ್ಬರಿಗೊಬ್ಬರು ಕೂಗಿಕೊಂಡಾಗ ಪರಸ್ಪರವಾಗಿ ಪರಿಚಯ ಮಾಡಿಕೊಳ್ಳಲು ತಮಗೆ ತಾವೇ ಹೆಸರನ್ನು ಇಟ್ಟುಕೊಂಡು ವಿದ್ಯಾಭ್ಯಾಸವಿಲ್ಲದೆ ಒಂದು ಹೊತ್ತಿನ ಊಟಕ್ಕಾಗಿ ಪರಿತಪ್ಪಿಸುತ್ತಾ ಜೀವನ ಸಾಗಿಸುತ್ತಿರುವ 5 ಜನ ಹುಡುಗರ ಹದಿಹರೆಯದ ವಯಸ್ಸಿನಿಂದ ಸಾವಿನ ಅಂಚಿನವರೆಗೆ ಪ್ರೀತಿ – ವಾತ್ಸಲ್ಯ ನೋವು-ನಲಿವು, ದ್ವೇಷ, ಆಸೂಯೆ ತುಂಬಿದ ಜೀವನದಲ್ಲಿ ನಡೆಯುವಂತಹ ಕಥೆ ಇದು.
ಇಂತಹ ಅದೆಷ್ಟೋ ಜನರಿಗೆ ಆಶ್ರಯ ಕೊಟ್ಟು ಜೀವನದ ರೂಪುರೇಷೆಗಳನ್ನು ತಿಳಿಸುತ್ತಾ ಪಾಠ ಕಲಿಸುತ್ತಿರುವ ಊರು ಕರ್ನಾಟಕದ ಬೆಂಗಳೂರು. ಆಶ್ರಯಕ್ಕಾಗಿ ಹೊಟ್ಟೆ ಬಟ್ಟೆಗಾಗಿ ಸಾವಿರಾರು ಕೆಲಸಗಳನ್ನು ನಿರ್ವಹಿಸುತ್ತಿರುವ ಅದೆಷ್ಟೋ ಜನರಿಗೆ ಆಸೆ ಆಕಾಂಕ್ಷೆಗಳು ಜಾಸ್ತಿಯಾಗಿ ಕೊಲೆ ಸುಲಿಗೆಗಳನ್ನು ಮಾಡುತ್ತಾ ಕಾಮದ ತೃಷೆವನ್ನು ತೀರಿಸಿಕೊಳ್ಳಲು ಅತ್ಯಾಚಾರವೆಸಗುತ್ತಾ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಇಂತಹವರ ಮಧ್ಯದಲ್ಲಿ ಈ 5 ಜನ ಹುಡುಗರು ಪ್ಲಾಸ್ಟಿಕ್ ಪೇಪರ್‍ಗಳನ್ನು ಆಯ್ದು ಇದನ್ನು ಮಾರಿ ಅದರಿಂದ ಬಂದಂತಹ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಾ, ಭೂಮಿಯೇ ಚಾಪೆ , ಆಕಾಶವೆ ಹೊದಿಕೆಯೆಂದುಕೊಂಡು ನಿದ್ರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ…..
ಅವತ್ತೊಂದಿನ ಆ ಕಾಣದ ದೇವರಿಗೆ ಈ ಹುಡುಗರ ಮೇಲೆ ಏಕೆ ಕೋಪ ಬಂತೋ ಏನೋ ಮೊದಲೇ ಕಷ್ಟದ ಜೀವನ ಸಾಗಿಸುತ್ತಿದ್ದ ಇವರಿಗೆ ಮುಂದಿನ ದಿನಗಳಲ್ಲಿ ಏನಾಗಬಹುದು……..? ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ. ಅವರ ಸಾವು ಅಷ್ಟೊಂದು ಕ್ರೂರವಾಗಿರುತ್ತಾ…..? ಮುಂದೆ ಓದಿ.
ಸ್ವಲ್ಪ ಸಮಯವಾಗಿದೆ ಸೂರ್ಯ ಉದಯವಾಗಿ. ಆ ಬೆಳಗಿನ ಜಾವದ ಆ ಚಳಿಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪ್ಲಾಸ್ಟಿಕ್ ಪೇಪರ್ ಆರಿಸುತ್ತಾ, ಬೆಂಗಳೂರಿನ ಹೊರವಲಯದ ಡಪ್ಪಿಂಗ್ ಯಾರ್ಡ್ ಬಳಿ ಬಂದಿದ್ದಾರೆ. ಅಲ್ಲೂ ಅವರ ತಮಾಷೆ… ಅದು ಕ್ಷಣ ಮಾತ್ರ.
ಯಾರೋ ಮಧ್ಯ ವಯಸ್ಸ್ಕನೊಬ್ಬ ಕಿರುಚಿಕೊಂಡ ಶಬ್ದ ಕೇಳಿಸುತ್ತಿದ್ದಂತೆ ಮೂಕ ಸ್ತಬ್ದರಾದ ಅವರೆಲ್ಲರ ಮುಖದಲ್ಲಿ ಸ್ವಲ್ಪ ಆತಂಕ, ಆ ಆತಂಕದ ನಡುವೆ ಆ ಶಬ್ದ ಕೇಳಿಸಿದ್ದಲ್ಲಿಗೆ ಸಾಗುತ್ತಾ ನೋಡಿದಾಗ ಆ ಚಳಿಯಲ್ಲೂ ಮೈಯಲ್ಲಾ ಬೆವರಿಹೋಯಿತು.
ಹೌದು ಅಲ್ಲೊಬ್ಬ ಪ್ರಮುಖ ಮತ್ತು ಆತನ ಇಬ್ಬರು ಸಹಚರರಿಂದ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಹತ್ಯೆ ಮಾಡಿ ಅಲ್ಲಿನ ಕೊಳೆತ ಕಸದಡಿ ಮುಚ್ಚಿ ಹಾಕುತ್ತಿರುವ ಸಂದರ್ಭ. ಈ ಘಟನೆಯನ್ನು ಕಣ್ಣು ಮಿಟುಕಿಸಿದಂತೆ ನೋಡುತ್ತಿರುವಾಗಲೇ ಅವರಲ್ಲೊಬ್ಬ ಈ ಹುಡುಗರನ್ನು ನೋಡುತ್ತಾನೆ. ತತ್‍ಕ್ಷಣದಲ್ಲಿ ಅವರಿಗೂ ಅಷ್ಟೇ ಆತಂಕ ಶುರುವಾಗುತ್ತದೆ. ಈ ನಡುವೆ ಆತ ನಮ್ಮನ್ನು ಗಮನಿಸುತ್ತಿದ್ದನ್ನು ತಿಳಿದ ಹುಡುಗರು ಎದ್ದು ಬಿದ್ದು ಓಡುತ್ತಿದ್ದಾರೆ. ಆ ಪ್ರಮುಖನ ಆದೇಶದ ಮೇರೆಗೆ ಅವನು ಸೇರಿದಂತೆ ಅವನ ಸಹಚರರು ಅ ಹುಡುಗರನ್ನು ಅಟ್ಟಾಡಿಸಿಕೊಂಡು ಹಿಂಬಾಲಿಸುತ್ತಿದ್ದಾರೆ. ಬೀದಿ ಬೀದಿ ಗಲ್ಲಿ ಗಲ್ಲಿಗಳಲ್ಲೂ ಉಸಿರು ಬಿಗಿಹಿಡಿದುಕೊಂಡು ಓಡಿ ಓಡಿ ಅಂತೂ ಇಂತೂ ಅವರಿಂದ ತಪ್ಪಿಸಿಕೊಂಡು ಬಂದಾಯಿತು. ಒಬ್ಬರನ್ನೊಬ್ಬರು ಮುಖವನ್ನು ನೋಡಿಕೊಳ್ಳುತ್ತಿದ್ದಾರೆ. ಮುಖದಲ್ಲಿ ಮುಂದೇನು ಎಂಬ ಭಾವನೆಗಳು ಗೊತ್ತಾಗುತ್ತಿದೆ.
ಕೆಲವು ದಿನಗಳ ನಂತರ….
5 ಜನರು ಒಂದು ಊರಿಗೆ ಬಂದಿದ್ದಾರೆ. ನಾವೆಲ್ಲೆದ್ದೇವೆ ಎಂದು ಯಾರಿಗೂ ಗೊತ್ತಿಲ್ಲ. ಅಲ್ಲಿನ ಜನರ ವೇಷಭೂಷಣ ಭಾಷೆ ಎಲ್ಲವೂ ವಿಭಿನ್ನ. ಇವೆಲ್ಲವನ್ನು ಯೋಚಿಸುತ್ತಿರುವಾಗಲೇ ಅವರಿಗೆ ತಿಳಿದಿದ್ದು, ಸರಿಸುಮಾರು 2000 ಕಿಲೋ ಮೀಟರ್‍ಗಿಂತ ಹೆಚ್ಚಿನ ದೂರದ ಊರಿಗೆ ಬಂದಿದ್ದೇವೆ ಎಂದು. ಇವರ ಮಾತಿಗೆ ಯಾರು ಸ್ಪಂಧಿಸುತ್ತಿಲ್ಲ. ಹಸಿವು ಅವರನ್ನು ತಲೆ ಸುತ್ತುವಂತೆ ಮಾಡುತ್ತಿದೆ. ಅ ಊರನ್ನು ಸುತ್ತುತ್ತಿದ್ದಾರೆ. ಏನೂ ತೋಚುತ್ತಿಲ್ಲ. ಏಲ್ಲೋ ಒಂದು ಕಡೆ ಸ್ವಲ್ಪ ನೀರು ಕುಡಿದು ಅನ್ನಕ್ಕಾಗಿ ಹಂಬಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೆ ಎಲ್ಲೋ ಒಂದು ಕಡೆ ಕಸದ ರಾಶಿ. ಅನ್ನಕ್ಕಾಗಿ ಹಂಬಲಿಸುತ್ತಿದ್ದ ಅವರೆಲ್ಲರ ಮುಖದಲ್ಲಿ ಸ್ವಲ್ಪ ಖುಷಿ, ಇಲ್ಲಿಯೂ ಸಹ ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ.
ಕಸವನ್ನು ಆಯ್ದು ಮಾರಲು ಸಹ ಸುತ್ತಾಡುತ್ತಿದ್ದಾರೆ. ಕೊನೆಗೆ ಎಲ್ಲೋ ಒಂದು ಕಡೆ ಆ ಪ್ಲಾಸ್ಟಿಕ್ ಪೇಪರ್‍ನ್ನು ಮಾರಿ ಬಂದ ದುಡ್ಡಿನಿಂದ ಅಲ್ಲಿ ಸಿಗುವ ಊಟವನ್ನು ಮಾಡಿ ಅರೆ ಹೊಟ್ಟೆ ತುಂಬಿಸಿಕೊಂಡು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಅರ್ಧ ತಾಸಿನ ನಿದ್ರೆಗೂ ಕ್ರಿಮಿ-ಕೀಟಗಳ ಕಾಟ. ಪೊಲೀಸರ ಕಾಟ. ಇವೆಲ್ಲ ಯಾವ ಜನ್ಮದ ಕರ್ಮವೆಂದು ಸಂಕಟ ಪಡುತ್ತಾ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾರೆ.
ಅದೇ ಕಳ್ಳತನ. ಯೋಚನೆಯಂತೆ, ನಿರ್ಧಾರದಂತೆ, ಕಳ್ಳತನ ಪ್ರಾರಂಭಿಸುತ್ತಾರೆ. ತಲೆಗೆ ಕೆಲಸ ಕೊಟ್ಟು ಅತ್ಯಂತ ಚಾಣಕ್ಷಾತನದಿಂದ ಕಳ್ಳತನ ಮಾಡುತ್ತಾ ಹೊಟ್ಟೆ ತುಂಬಾ ಊಟ ಮಾಡುತ್ತಾ ತಲೆ ಹರಟೆ ಮಾಡಿಕೊಂಡು ಆ ಊರಿನ ಬಗ್ಗೆ ಜನರ ಜೀವನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುತ್ತಾರೆ. ಅಲ್ಲಿನ ಪರಿಸರಕ್ಕೆ ಹೊಂದುಕೊಳ್ಳುತ್ತಿದ್ದಂತೆ ತಾನೊಂದು ಬಗೆದರೆ, ದೈವ ಇನ್ನೊಂದು ಬಗೆಯುವುದು ಎಂಬುವಂತೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಅವರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆನೋ ಎಂದು ಕೊಳ್ಳುತ್ತಿದ್ದಂತೆ, ಅವರಿಂದ ಹಾಗೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ.
ಬೆಳಗಾಗಿದೆ. ಕೆಲಸ ನಿಮಿತ್ತ (ಅಲ್ಲಿನ ಪರಿಸರಕ್ಕೆ ಅನುಗುಣವಾಗಿ) ತಂದೆ ಮಗಳು ಇಬ್ಬರು ಮಾತಾನಾಡುತ್ತಾ ಬರುತ್ತಿದ್ದಾರೆ.ಈ 5 ಜನ ಹುಡುಗರು, ಸತ್ತವರಂತೆ ರಾತ್ರೋ ರಾತ್ರಿ ಓಡಿ ಬಂದು ಸುಸ್ತಾಗಿ ಮಲಗಿದ್ದಾರೆ.ಇವರೆಲ್ಲರೂ ಸತ್ತಿದ್ದಾರೆಂದು ತಿಳಿದು ಕಿಟಾರನೆ ಕಿರಿಚಿದ್ದಾಳೆ ಆ ಹುಡುಗಿ. ಅವಳು ಕಿರುಚಿದ ಶಬ್ಧಕ್ಕೆ ಎಲ್ಲರೂ ಎಚ್ಚರಗೊಂಡು ಎಲ್ಲಿದ್ದೀವಿ ಎಂದು ನೋಡುತ್ತಿರುವಾಗಲೇ ಆಕೆಯ ತಂದೆ ಬಂದು ಬೈಯುತ್ತಿದ್ದಾನೆ. ಹುಡುಗರೆಲ್ಲರೂ ಅವನ ಭಾಷೆ ಅರ್ಥವಾಗದೆ ಮುಖ ಮುಖ ನೋಡಿಕೊಂಡು ಅವರವರೇ ಮಾತನಾಡಿಕೊಳ್ಳುತ್ತಿದ್ದಾಗ ಅವನಿಗೆ ಕನ್ನಡದವರೆಂದು ಗೊತ್ತಾಗಿ, ನನಗೂ ಸ್ವಲ್ಪ ಸ್ವಲ್ಪ ಕನ್ನಡ ಬರುವುದಾಗಿ ತಿಳಿಸುತ್ತಾ, ಮಾತಿನ ವಿನಿಮಯವಾಗುತ್ತಾ ಆತ ಇವರ ಪೂರ್ವಪರ ವಿಚಾರಿಸುತ್ತಿದ್ದಾನೆ.
ಹೊಸ ಜಾಗ, ಹೊಸ ಊರು ಬದುಕು ಕಲಿಸಿತು ಎನ್ನುವಂತೆ ಆಗತಾನೇ ಬದುಕಲು ಹೊಸ ಮಾರ್ಗ ಹುಡುಕಿಕೊಂಡ ಇವರಿಗೆ ಆತನಲ್ಲಿ ಅವರ ಬಗ್ಗೆ ಕಥೆಯೊಂದನ್ನು ಹೆಣೆಯಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಅದರಂತೆ ಸ್ಥಳದಲ್ಲೇ ತಾವು ಯಾರೆಂದು ಕಥೆಯ ರೂಪವಾಗಿ ಅವನಿಗೆ ತಿಳಿಸುತ್ತಾರೆ. ಆ ಕರುಣಾಜನಕ ಕಥೆಯನ್ನು ಕೇಳಿ ಆತನೂ ಹಾಗೂ ಅರ್ಥವಾಗದಿದ್ದರೂ ಆತನ ಮಗಳು ಹೀಗೆ ಇಬ್ಬರ ಮುಖದಲ್ಲೂ ಕಣ್ಣೀರೂ ಬಂದಿತೇನೋ ಎನ್ನುವಂತೆ ಬಾವುಕರಾಗಿ, ಆಕೆಯ ತಂದೆ ನೀವೆಲ್ಲರೂ ನನ್ನ ಬಳಿ ಇದ್ದು, ಇನ್ನೂ ಸ್ವಲ್ಪ ದಿನದಲ್ಲಿ ನಿಮಗೆನಾದರೂ ಕೆಲಸ ಕೊಡಿಸುವುದಾಗಿ ಆಶ್ವಾಸನೆ ಕೊಡುತ್ತಾನೆ.
ಮುಂದಿನ ದಿನಗಳಲ್ಲಿ ಅವರೆಲ್ಲರೂ ಆತನ ಮಗಳನ್ನು ತಮ್ಮ ತಂಗಿ ಎಂದು ಭಾವಿಸಿ ಆಕೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಅವಳಿಗೂ ಸ್ವಲ್ಪ ನೋವಾಗದಂತೆ ಕಾಳಜಿ ವಹಿಸುತ್ತಾ ತಂದೆ-ಮಗಳಿಗೆ ಆಶ್ರಯವಾಗಿರುತ್ತಾರೆ. ಅವಳಿಗೆ ಕನ್ನಡ ಕಲಿಸಲು ಆಸಕ್ತಿವಹಿಸುತ್ತಾರೆ.
ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡಲು ಮತ್ತೆ ಶುರು ಮಾಡುತ್ತಾರೆ. ಅದರ ಅರ್ಥ ಬರಿ ಬಾಯ-ಮಾತಲ್ಲಿ ಆಶ್ರಯ ವಹಿಸಿಕೊಂಡಿರುವ ಇವರು ಅವರಿಬ್ಬರಿಗೆ ದಾರಿದೀಪವಾಗಲು ಪುನ: ಕಳ್ಳತನ ಮಾಡಲು ಮುಂದಾಗುತ್ತಾರೆ. ಅದರಂತೆ ಕಳ್ಳತನ ಮಾಡಿ ಪ್ರೀತಿಯ ತಂಗಿಯನ್ನು ಎಲ್ಲರೂ ಸಹ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಆಕೆಯ ಜೊತೆಗಿದ್ದ 5 ಜನ ಹುಡುಗರನ್ನು ಬೆಂಗಳೂರಿನಲ್ಲಿ ಕೊಲೆ ಮಾಡಲ್ಪಟ್ಟವನ ಮೊದಲನೆ ಸಹಚರನ ಕೆಂಗಣ್ಣಿಗೆ ಗುರಿಯಾಗುತ್ತಾರೆ.
ಕಲಿಯುವಾಗ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ ಎನ್ನುವಂತೆ ಕಳ್ಳತನ ಮಾಡುತ್ತಾ ಮಾಡುತ್ತಾ ಚತುರರಾಗಿ ಪೊಲೀಸರಿಗೆ ಸೇರಿದಂತೆ ಯಾರೊಬ್ಬರಿಗೂ ಸುಳಿವನ್ನು ಬಿಟ್ಟಕೊಡದೆ ಕ್ರಿಯಾಶೀಲರಾಗಿದ್ದಾರೆ. ಪ್ರೀತಿಯ ತಂಗಿಯ ಜೊತೆಗೆ ಒಡನಾಟ ಬೆಳೆಸಿಕೊಂಡಿದ್ದಾರೆ.
ಕಳ್ಳÀನ ಹೆಂಡತಿ ಯಾವತ್ತಿದ್ದರೂ ವಿಧವೆ ಎನ್ನುವ ಮಾತಿದೆ. ಆದರೆ ಕಳ್ಳನ ತಂಗಿಗೆ ಯಾವ ಪಟ್ಟ ಕೊಡಬಹುದು ನೀವೊಂದು ಸಲ ಯೋಚಿಸಿ. ಅಪರಾಧವೆಲ್ಲವೂ ಬೆಳಕಿಗೆ ಬಂದರೆ, ಗೊತ್ತಾದರೆ, ಪಾಪ ಆಕೆ ನೋವನ್ನು ಅನುಭವಿಸುತ್ತಾ ಕಾಲ ಕಳೆಯಬೇಕೆ ಹೊರತು, ಮತ್ತಿನೇನಿದೆ ಹೇಳಿ.
ಅವತ್ತು ಗುರುವಾರ, ಬೆಳಗಿನ ಜಾವ 5 ಜನ ಹೊರಗಡೆ ಹೊರಡುತ್ತಿದ್ದಾರೆ. ಇಲ್ಲಿಯವರೆಗೂ ಯಾವತ್ತು ಇಲ್ಲದ ಪ್ರೀತಿಯನ್ನು ತಂಗಿ ವ್ಯಕ್ತಪಡಿಸುತ್ತಿದ್ದಾಳೆ. ಇವರೂ ಸಹ ಭಾವನಾತ್ಮಕವಾಗಿದ್ದಾರೆ. ಅದರಲ್ಲೂ ಸ್ವಲ್ಪ ತಮಾಷೆ,ತಲೆಹರಟೆ. ಈ ನಡುವೆ ಅವರ ಬೀಳ್ಕೊಡುಗೆಯಾಗಿದೆ.
ಹಸಿವು, ಸಮಯ, ಸಂದರ್ಭ ಮನುಷ್ಯನ ಕೈಯಲ್ಲಿ ಏನಾದರೂ ಮಾಡಿಸುತ್ತದೆ, ಅನ್ನುವುದಕ್ಕೆ ಎಷ್ಟೋ ಉದಾಹರಣೆಗಳಿವೆ. ದಿನನಿತ್ಯದಂತೆ, ಕಳ್ಳತನ ಮಾಡಿ ಸಂಜೆಯಲ್ಲಿ ಒಟ್ಟಿಗೆ ಸೇರಿದ್ದಾರೆ. ಸ್ವಲ್ಪ ಖುಷಿ, ತಲೆ-ಹರಟೆ. ಕ್ಷಣಮಾತ್ರದಲ್ಲಿ ಬೆಂಗಳೂರಿನಲ್ಲಿ ಕೊಲೆಗೈದವನ ಎರಡನೇ ಸಹಚರ ತನ್ನ ಇಬ್ಬರು ಸಹಚರರೊಂದಿಗೆ ಕಾಣಿಸಿಕೊಂಡಿದ್ದಾನೆ.
ನಾವು – ನೀವೆಲ್ಲರೂ ಊಹಿಸದ ಘಟನೆ ಸ್ವಲ್ಪ ಸಮಯದಲ್ಲೆ, ನಡೆದುಹೋಗುತ್ತದೆ. ಅವರನ್ನು ನೋಡಿ ಭಯಭೀತರಾಗಿ ಅವರಿಂದ ತಪ್ಪಿಸಿಕೊಂಡು ಓಡುತ್ತಿದ್ದ 5 ಜನರು ಅವರ ಜೀವನವನ್ನು ಕಾಪಾಡಿಕೊಳ್ಳಲು ಆತನನ್ನು ಸಾಯಿಸುತ್ತಾರೆ. ಆ ಸಂದರ್ಭವು ಎದುರಾಗುತ್ತದೆ. ಅವನ ಇಬ್ಬರು ಸಹಚರರು ಓಡಿಹೋಗುತ್ತಾರೆ. ಮುಂದೆ…..?
ಭಯ ಶುರುವಾಗಿದೆ. ಕಸದ ಡಂಪ್ಪಿಗ್ ಯಾರ್ಡ ಬಳಿ ಆತನನ್ನು ಹೂತು ಹಾಕಿ ಆ ಊರನ್ನು ಬಿಟ್ಟು ಹೊರಡಲು ನಿರ್ಧಾರ ಮಾಡುತ್ತಿದ್ದಂತೆ, ಪ್ರೀತಿಯ ತಂಗಿಯನ್ನು ಬಿಟ್ಟು ಹೋಗಲು ಮನಸಾಗುತ್ತಿಲ್ಲ. ಸಿಕ್ಕಾಪಟ್ಟೆ ಯೋಚಿಸಿ ಆಕೆಯೊಂದಿಗೆ ಮಾತಾನಾಡಿಕೊಂಡು ಹೋಗಲು ನಿರ್ಧರಿಸುತ್ತಾರೆ.ಆ ದಿನ ರಾತ್ರಿ ಭಯದಲ್ಲಿ ಕಾಲ ಕಳೆಯುತ್ತಾರೆ.
ಮರುದಿನ ಬೆಳ್ಳಿಗ್ಗೆ ತಂಗಿಯ ಮನೆಗೆ ಬಂದಾಗ ಆಕೆ ಕಾಣಿಸುತ್ತಿರುವುದಿಲ್ಲ. ಹಾಗಾಗಿ ಆಕೆಯ ತಂದೆಯು ಕೂಡ ಹುಡುಕುತ್ತಿದ್ದಾರೆ. ಅಷ್ಟರಲ್ಲಿ ಆಕೆಯ ತಂದೆ ಬಂದು ರಾತ್ರಿಯಿಂದ ತನ್ನ ಮಗಳು ಕಾಣುತ್ತಿಲ್ಲವೆಂದು ಪೊಲೀಸ್ ಕಂಪ್ಲೇಟ್ ಕೊಟ್ಟಿದ್ದು, ಅವರ ಮೇಲೆ ನಂಬಿಕೆ ಇಲ್ಲ ಎನ್ನುವ ರೀತಿ ಮಾತನಾಡಿದಾಗ, ಕೈ ತುತ್ತು ಕೊಟ್ಟ ತಾಯಿಗಿಂತಲೂ ಹೆಚ್ಚಾದ ತಂಗಿಯನ್ನು ಹುಡುಕಲು ಭಯದಲ್ಲೂ ಹೊರಡುತ್ತಾರೆ.
ಹುಡುಕುತ್ತಿದ್ದಾರೆ ಒಂದು ದಿನ, ಎರಡು ದಿನ, ಮೂರು ದಿನ, ಹಗಲು ರಾತ್ರಿ ಎನ್ನದೆ ಹುಡುಕುತ್ತಿದ್ದಾರೆ. ತಂದೆ ಗಾಬರಿಗೊಂಡಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸ್ ಕಾಣಿಸಿಕೊಂಡಾಗ ಅವರಿಗೆ ಕಣ್ಣು ತಪ್ಪಿಸಿ ಬಂದಿದ್ದಾರೆ, ಹಾಳು ಮನೆಯ ಹತ್ತಿರ. ವಿಭಿನ್ನವಾಗಿ ವಾಸನೆ ಇವರ ಮೂಗಿಗೆ ಬಡಿಯುತ್ತಿದೆ. (ಮಲ್ಲಿಗೆ ಹೂವಿನ ವಾಸನೆ, ಮಾಂಸದ ವಾಸನೆ, ಎಣ್ಣೆ ವಾಸನೆ)ಚಾವಣಿಯಿಲ್ಲದ ಮನೆಯ ಒಳಗೆ ಹೋದಾಗ, ಆ ತಿಂಗಳು ಬೆಳಕಿನಲ್ಲಿ ಅವರ ಪ್ರೀತಿಯ ತಂಗಿ ಅರೆ ಬೆತ್ತಲಾಗಿ ಬಿದ್ದಿದ್ದಾಳೆ. ಅವಳನ್ನು ನೋಡುತ್ತಿದ್ದಂತೆ 5 ಜನ ಆಕೆಯ ಬಳಿ ದಾವಿಸಿ ಕಣ್ಣಿರಿಡುತ್ತಾ ಅವಳ ಸ್ಥಿತಿಗೆ ಪ್ರಶ್ನಿಸುತ್ತಿದಾರೆ. ಮಾತಿಲ್ಲ, ಕಥೆಯಿಲ್ಲ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾಷೆ ಬರುತ್ತಿಲ್ಲ, ಡಾಕ್ಟರ್‍ಗೆ ಅರ್ಥವಾಗುತ್ತಿಲ್ಲ. ನಿರಾಕರಿಸಿದಾಗ ಮೂರು ಜನ ಅವರ ಕಾಲಿಗೆ ಬೀಳುತ್ತಾರೆ. ಚಿಕಿತ್ಸೆ ನಡೆಯುತ್ತಿದೆ. ತಂದೆಯೂ ಕೂಡ ಮತ್ತಿಬ್ಬರ ಜೊತೆ ಅತುರದಿಂದ ದಾವಿಸಿದ್ದಾನೆ. ಕಣ್ಣೀರಿಡುತ್ತಿದ್ದಾನೆ. ತಂದೆ ಬಂದಾಗ ಡಾಕ್ಟರ್ ಅವರ ಬಳಿ ಬಂದು ವಿಚಾರಿಸಿದಾಗ ಅವರಿಂದ ಬಂದಂತಹ ಉತ್ತರ ನಿಮ್ಮೆಲ್ಲರ ಕಣ್ಣಲ್ಲಿ ನೀರನ್ನು ತರಿಸುತ್ತದೆ. ಪಾಪ ಪ್ರಜ್ಞೆ ಮೂಡುವುದಂತೂ ಸಹಜ ……
……ಅದೇ ಸತತ 3 ದಿನಗಳಿಂದ ಅವಳಿಗೆ ಸಾಮೂಹಿಕ ಅತ್ಯಾಚಾರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆಂದು,
ಭಾಷೆ ಗೊತ್ತಿಲ್ಲದಿದ್ದರೂ, ಅರ್ಥವಾಗದಿದ್ದರೂ, ರೇಪ್ ಎನ್ನುವ ಒಂದು ಪದದಿಂದ ಪ್ರೀತಿಯ ತಂಗಿಗೆ ಅತ್ಯಾಚಾರವಾಗಿರುವುದು ತಿಳಿದು ಬರುತ್ತದೆ. ಕಣ್ಣೀರಿಡುತ್ತಿದ್ದಾರೆ. ಅಷ್ಟರಲ್ಲಿ ನರ್ಸ್ ಬಂದು ಡಾಕ್ಟರ್ ಬಳಿ ಆಕೆಗೆ ಪ್ರಜ್ಞೆ ಬಂದಿರುವುದಾಗಿ ತಿಳಿಸಿದಾಗ ಡಾಕ್ಟರ್ ಆಕೆಯ ತಂದೆಯನ್ನು ಅವನ ಸಂಕಟವನ್ನು ನೋಡಿ ಆತನೊಬ್ಬನನ್ನು ಆತನ ಮಗಳ ಬಳಿಗೆ ಕರೆದುಕೊಂಡು ಹೋಗುತ್ತಾನೆ.
ಕಣ್ಬಿಟ್ಟಿದ್ದಾಳೆ ಅಷ್ಟೆ . ಡಾಕ್ಟರ್ ಚೆಕ್ ಮಾಡುತ್ತಿರುವ ಸಂದರ್ಭ, ಸೂರ್ಯನ ಕಿರಣಗಳು ಆಕೆಯ ಮೇಲೆ ಬೀಳಲಿ ಎಂದು ಅಲ್ಲಿರುವ ನರ್ಸ್‍ಗೆ ಕಿಟಕಿಯ ಪರದೆಯನ್ನು ಸರಿಸಲು ಹಿಂದಿಯ ಭಾಷೆಯಲ್ಲಿ (KHOL DHO ) ಎನ್ನುತ್ತಿದ್ದಂತೆ ತತ್ತ್‍ಕ್ಷಣದಲ್ಲಿ ಎದ್ದ ಆಕೆ ತನ್ನ ತಂದೆಯ ಎದುರಿಗೆ ಬಟ್ಟೆ ಬಿಚ್ಚುತ್ತಿದ್ದಾಳೆ. ಇಂತಹ ದೃಶ್ಯವನ್ನು ನೋಡುತ್ತಾ ಅವಳ ಬಳಿ ದಾವಿಸಿದಾಗ, ಆಸ್ಪತ್ರೆಯ ಮಂಚದಿಂದ ಇಳಿದು, ಪುನ: ಬಟ್ಟೆ ಬಿಚ್ಚುವುದನ್ನು ಮುಂದುವರೆಸುತ್ತಾ ಮೂಲೆಯಲ್ಲಿ ಹೋಗಿ ಕುಳಿತುಕೊಂಡು……..
ಅವಳ ಕಿರುಚಾಟಕ್ಕೆ ಹುಡುಗರು ಒಳ ಬಂದಿದ್ದಾರೆ.
ಡಾಕ್ಟರ್ ಅಷ್ಟರಲ್ಲಿ ಇಂಜೆಕ್ಷನ್ ಕೊಟ್ಟು ಮಲಗಿಸಿದ್ದಾರೆ. ತಂದೆಗೆ ಬುದ್ದಿ ಭ್ರಮಣೆಯಾಗಿದೆ. ಏನು ಮಾತನಾಡದೆ ಒಬ್ಬನೆ ಆಸ್ಪತ್ರೆಯಿಂದ ಹೊರ ಹೋಗುತ್ತಿದ್ದಾನೆ. ನೀವೇ ಹೇಳಿ ಜನ್ಮದಾತನ ಮುಂದೆ ಆತನ ಮಗಳು ಬೆತ್ತಲಾಗುತ್ತಾಳೆ ಎಂದರೆ, ಅವನ ಜನನದಿಂದ ಸಾವಿನ ನಡುವಿನಲ್ಲಿ ಬಂದ ಕೆಟ್ಟ ದಿನ ಎಂದೆ ಅರ್ಥ. ಇಂತಹ ಪರಿಸ್ಥಿತಿ ಯಾವ ತಂದೆಗೂ ಬರುವುದು ಬೇಡ.
ಸ್ವಲ್ಪ ಸುಧಾರಿಸಿಕೊಂಡು ನಂತರ ಅವರೆಲ್ಲ ಆಕೆಯ ಬಳಿ ಬಂದಾಗ ಕಣ್ಣೀರಿಡುತ್ತಿದ್ದಾಳೆ. ನಡೆದ ವಿಚಾರವನ್ನು ಹೇಳುತ್ತಿದ್ದಂತೆ ವಾಕ್‍ಮ್ಯಾನ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಬಾರ್‍ಲ್ಲಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದ ಕನ್ನಡ ಮಾತನಾಡುವ ಹುಡುಗನ ಬಳಿ ಹಿಂದಿಯ ಅರ್ಥವನ್ನು ಕನ್ನಡದಲ್ಲಿ ಹೇಳು ಎಂಬುವುದಾಗಿ ಕೇಳಿದಾಗ ಅವಳು ಮಾತಾನಾಡಿದನ್ನು ಕನ್ನಡದಲ್ಲಿ ಹೇಳುತ್ತಿದ್ದಾನೆ.
ಸಂದರ್ಭ ಸರಿಸುಮಾರು ರಾತ್ರಿ 11-30 ರ ಸಮಯ. ತಿಂಗಳ ಬೆಳಕು ಆದ್ದರಿಂದ ಅಷ್ಟೊಂದು ಭಯವಿಲ್ಲ. ಆ ಊರಿಗೆ ಕೊನೆಯ ಬಸ್. 5 ಜನ ಹುಡುಗರು, ಆ ಊರಿಗೆ ಬಂದಾಗಿನಿಂದ ಸಿಟಿಗೆ ಹೋಗಿ ಬರುವುದು ಈ ಲಾಸ್ಟ್ ಬಸ್‍ಗೆ. ಅದರಂತೆ ಅವರ ಪ್ರೀತಿಯ ತಂಗಿ ಅಣ್ಣಂದಿರ ಆಗಮನಕ್ಕಾಗಿ ಕಾಯುತ್ತಿದ್ದಳು. ಕೊನೆಯ ಬಸ್ ಬಂದರು ಅವರ್ಯಾರು ಬಂದಿಲ್ಲವೆಂದು ಗಾಬರಿಗೊಂಡು ಯೋಚಿಸುತ್ತಿರುವಾಗಲೇ 3 ಜನರಿಂದ KIDNAP ಆಗುತ್ತದೆ.
ಅದೊಂದು ಹಾಳು ಮನೆ. ಛಾವಣಿಯಿಲ್ಲ. 3 ಜನ ಅವಳನ್ನು ಎತ್ತಾಕಿಕೊಂಡು ಬಂದು ಆ 5 ಜನರಿಗೆ ಬುದ್ದಿ ಕಲಿಸಲು ಈಕೆಯನ್ನು KIDNAP ಮಾಡಿರುವ ವಿಚಾರವನ್ನು ಬೆಂಗಳೂರಿನಲ್ಲಿ ಕೊಲೆಗೈದವನ ಮೊದಲನೆ ಸಹಚರ ತಮ್ಮಿಬ್ಬರ ಸಹಚರರೊಂದಿಗೆ ಮಾತಾನಾಡುತ್ತಾ, ಆಕೆಯ ಅಂದ – ಸೌಂದರ್ಯದ ಬಗ್ಗೆ ಜೊಲ್ಲು ಸುರಿಸುತ್ತಾ, ಅವಳನ್ನು ಅನುಭವಿಸಬೇಕೆಂದು ಆಕ್ರಮಣ ಮಾಡಿದ್ದಾರೆ. ಕಿರುಚಾಡುತ್ತಿದ್ದಾಳೆ. ಕೂಗುತ್ತಿದ್ದಾಳೆ, ಬಾಯಿಗೆ ಬಟ್ಟೆ ಕಟ್ಟಿದ್ದರಿಂದ ಅವೆಲ್ಲವೂ ಅವಳಿಗೆ ಅಸಾಧ್ಯವಾಗಿದೆ.
ಕೊನೆಗೆ ಅವರಿಂದ ಬಿಡಿಸಿಕೊಳ್ಳಲಾಗದೆ ಆ ಮೂರು ಜನರಿಗೆ ಶರಣಾಗಿದ್ದಾಳೆ. ಹೀಗೆ ದಿನದ 3 ಹೊತ್ತು 3 ದಿನ ಸತತವಾಗಿ ಅವಳ ಮೇಲೆ ಲೈಂಗಿಕ ಪ್ರಕ್ರಿಯೆ ನಡೆಯುತ್ತದೆ. ಪ್ರತಿಯೊಂದು ಸಾರಿನೂ ಆಕ್ರಮಣವಾಗುತ್ತಿರುವ ಸಂದರ್ಭದಲ್ಲಿ ಅವಳೇ ಬಟ್ಟೆ ಬಿಚ್ಚುವಂತೆ KHOL DHO ಎಂದು ಚಿತ್ರಹಿಂಸೆ ನೀಡಿ ಭಯ ಹುಟ್ಟಿಸಿ ಅವಳನ್ನು ಸಂಪೂರ್ಣವಾಗಿ ಅನುಭವಿಸಿದ್ದಾರೆ ಆ ಕ್ರೂರ ಮೃಗಗಳು.
ಇವೆಲ್ಲವನ್ನು ತಿಳಿದ 5 ಜನ ಹುಡುಗರು ಕೆಂಡಮಂಡಲವಾಗಿದ್ದಾರೆ. ಸ್ವಲ್ಪ ಚೇತರಿಸಿಕೊಂಡ ಅವಳನ್ನು ಮನೆಗೆ ಕರೆ ತಂದು ಆ ಊರಿನ ಆಂಟಿಯೊಬ್ಬಳಿಗೆ ಅವಳನ್ನು ನೋಡಿಕೊಳ್ಳುವಂತೆ ತಿಳಿಸಿ, ಹಿಂದುರಿಗಿ ಬರುವುದಾಗಿ ಹೇಳಿ ಹೊರಡುತ್ತಿದ್ದಾಗ ಆಕೆಗೆ ತಂದೆಯ ನೆನಪಾಗಿ ವಿಚಾರಿಸುತ್ತಿದ್ದಾಳೆ. ಅವರನ್ನು ಕರೆತರಲು ಹೋಗುತ್ತಿರುವುದಾಗಿ ತಿಳಿಸಿ ಅವರೆಲ್ಲರೂ ಆ ಮೃಗಗಳ ಸಂಹಾರಕ್ಕಾಗಿ ಹೊರಡುತ್ತಾರೆ.
5 ಜನರು ಆ ಮೂವರ ಹುಡುಕಾಟದಲ್ಲಿ ತೊಡಗಿದ್ದಾರೆ. ಒಂದೆಡೆ ಎದುರಾಗಿದ್ದಾರೆ. ಅವರವರ ನಡುವೆ ಕಾದಾಟ ಶುರುವಾಗಿದೆ.ಈ ನಡುವೆ ಈ 5 ಜನರಲ್ಲಿ 3 ಜನ ಹುಡುಗರು ಹಾಗೂ ಆ ಮೂರು ಜನ ಕಾಮುಕರಲ್ಲಿ ಬೆಂಗಳೂರಿನಲ್ಲಿ ಕೊಲೆಗೈದವನ ಮೊದಲನೆ ಸಹಚರನ ಇಬ್ಬರು ಸಹಚರರು ಸಾಯುತ್ತಾರೆ.
ಈ ಸಂದರ್ಭದಲ್ಲಿ ಇಬ್ಬರು ಹುಡುಗರು ತನ್ನ ಆತ್ಮೀಯ ಸ್ನೇಹಿತರನ್ನು ಕಳೆದುಕೊಂಡು ಪರಿತಪಿಸುವುದರೊಂದಿಗೆ ಮೊದಲನೆ ಸಹಚರನ ವಿರುದ್ಧ ಸಾವಿನ ಹೊಡೆದಾಟ ನಡೆಸುತ್ತಿದ್ದಾರೆ.ಇನ್ನೇನೂ ಆತ ಸಾಯಬೇಕು ಅನ್ನುವ ಹೊತ್ತಿಗೆ ಅದರಂತೆ ಆತ ಸಾಯುವ ಸಂದರ್ಭ ಎದುರಾದಂತೆ ಬೆಂಗಳೂರಿನಲ್ಲಿ ಕೊಲೆಗೈದವನ ಆಗಮನವಾಗಿರುತ್ತದೆ.
ಆತನೊಂದಿಗೆ ಇವರಿಬ್ಬರ ಕಾದಟ, ಹೊಡೆದಾಟ….. 3 ಜನರಿಗೆ ಸಾವು ಇನ್ನೇನು ಸಮೀಪಿಸುತ್ತಿದೆ ಎನ್ನುತ್ತಿದ್ದಂತೆ ಬೆಂಗಳೂರು ವಿಲನ್‍ನಿಂದ (ಕೊಲೆಗೈದವನು) ಅವರಿಬ್ಬರ ಸಾವು ಆಗುತ್ತದೆ.
ಕ್ಷಣಮಾತ್ರದಲ್ಲಿ ಆತ ಸಾವು ಕೂಡ ಸಂಭವಿಸುತ್ತದೆ. ಅದು ಅವರ ಪ್ರೀತಿಯ ತಂಗಿಯಿಂದ…..
ಪಾಪ ಆ ಹುಡುಗಿ ಅವರಿಬ್ಬರ ಶವದ ಮುಂದೆ ಕಣ್ಣೀರಿಡುತ್ತಾ, ತಾನು, ಕನ್ನಡವನ್ನು ಕಲಿತಿರುವುದಾಗಿ ಹೇಳುತ್ತಿದ್ದಾಳೆ.ಮೇಲೆ ಎದ್ದೇಳಲು ಕಣ್ಣೀರಿಡುತ್ತಿದ್ದಾಳೆ.
ಆದರೆ, ಮತ್ತೆಲ್ಲಿ ಅವರು ಬದುಕಿ ಬರಲು ಸಾಧ್ಯ, ಹೇಳಿ, ಒಬ್ಬಂಟಿಯಾದ ಆಕೆಯೂ ಕಣ್ಣೀರಿಡುತ್ತಿದ್ದರೆ ಬುದ್ದಿ-ಹೀನವಾದ ಆಕೆಯ ತಂದೆ ಬಂದು, ಈ ಪ್ರಪಂಚದಲ್ಲಿ ಕಾಮುಕರು ಜಾಸ್ತಿಯಾಗಿದ್ದು, ನೀನು ಬೇಗ ಮನೆಗೆ ಹೋಗು ಎಂದಾಗ….. ಸ್ವಂತ: ತಂದೆಯನ್ನು ನೋಡಿ ಆಕೆಗೆ ಮತ್ತೇನಾಗಬೇಕು ಹೇಳಿ ?
***********