ಸಂಗೀತ ಸಮಯ

ಸೃಜನ ಸಾಂಸ್ಕೃತಿಕ ಸಮೂಹದ 23ನೇ ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬೆಂಗಳೂರು: ಸೃಜನ ಸಾಂಸ್ಕೃತಿಕ ಸಮೂಹದ ೨೩ನೇ ವಾರ್ಷಿಕೋತ್ಸವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ ೨ ಮಾರ್ಚ್ ೨೦೨೫ರಂದು, ಸಂಜೆ ೪:೩೦ ಗಂಟೆಗೆ, ಗಾಂಧಿ ನೆಹರು ರಂಗಮಂದಿರ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರು, ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಶ್ರೀಮತಿ ಸಹನ ಬಲ್ಕಲ್‌ರವರು ಮತ್ತು ಡಾ|| ಅನುಷಾ ಎ ರಾವ್ ಹೃದ್ರೋಗ ತಜ್ಞರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸೃಜನ ಸಂಗೀತ ಶಾಲೆಯಲ್ಲಿ ಸುಗಮ ಸಂಗೀತಾಭ್ಯಾಸ ಮಾಡುತ್ತಾ, ಎಸೆಸೆಲ್ಸಿ ಮತ್ತು ದ್ವಿತೀಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ ೧೮ ಅರ್ಹ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಜೊತೆಗೆ, ಗೀತ ಗಾಯನ, ನೃತ್ಯ, ಸಮೂಹ ಗಾಯನ ಮೊದಲಾದ ಹಲವಾರು ಮನರಂಜನಾ ಕಾರ್ಯಕ್ರಮಗಳೂ ಸಹ ನಡೆಯಲಿದೆ. ಮುಖ್ಯ ಅತಿಥಿಗಳು ಪುರಸ್ಕೃತರು ಮತ್ತು ಪ್ರೇಕ್ಷಕರನ್ನುದ್ದೆಶಿಸಿ ಮಾತನಾಡಿ ಮಾರ್ಗದರ್ಶನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕೃತರು, ಸೃಜನ ಸಂಗೀತ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಮಂದಿ ಕಲಾಸಹೃದಯರು ವೀಕ್ಷಿಸುವ ನಿರೀಕ್ಷೇಯಿದೆ.

********

Related Articles

Back to top button