ಎಲ್ಲರೂ ಕೆಟ್ಟವರಲ್ಲ, ಸಿಕ್ಕಿಹಾಕಿಕೊಂಡರೆ ಮಾತ್ರ ಕೆಟ್ಟವರು. ಇದೇ ಸಂದೇಶವನ್ನು ಸಿನಿಮಾ ಮಾಡಿ ಅಭಿನಯಿಸಿದಾರೆ ಕಿಚ್ಚ ಸುದೀಪ್. ಚಿತ್ರದಲ್ಲಿ ದ್ವಿಪಾತ್ರ ಇಲ್ಲದಿದರೂ ಸತ್ಯ ಮತ್ತು ಶಿವನಾಗಿ ದ್ವಿಪಾತ್ರದ ರೀತಿ ಪೋಷಕರಿಗೆ ತೋರಿಸಿ ಸುದೀಪ್ ಮತ್ತೂಮ್ಮೆ ಅಭಿನಯ ಚಕ್ರವರ್ತಿ ಎಂದು ನಿರೂಪಿಸಿದ್ದಾರೆ.
ಹೊಳೆಯುವ ಕಣ್ಣುಗಳಿಂದ ಮುದ್ದು ಮಾತುಗಳಿಂದ ಗುಂಗುರು ಕೂದಲಿನ ಚಲುವೆ ನಿತ್ಯಾಮೆನೆನ್ ಸುದೀಪ್ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ. ಚಿಕ್ಕಣ ತೆರೆ ಮೇಲೆ ಬಂದಾಗಲ್ಲೆ ನಗುವಂತೂ ಗ್ಯಾರಂಟಿ. ಸಾಧು ತಬಲ ನಾಣಿ ಇದ್ದರೂ ಪ್ರೇಕ್ಷಕರು ಗುರುತಿಸುವುದು ಚಿಕ್ಕಣನ ನಟನೆಯೆ ACP ಪಾತ್ರದಲ್ಲಿ ಕಾಣಿಸಿದ ರವಿಶಂಕರ್ ಸುದೀಪನಿಂದ ಚೆನ್ನಾಗಿ ಚಳೆ ಹಣ್ಣು ತಿನ್ನತ್ತಾರೆ.
ತೆರೆ ಮೇಲೆ ಮೊದಲು ಶಿವನಾಗಿ ಕಾಣಿಸುವ ಸುದೀಪ್ ಎರಡು ಅಧ್ಬುತ ದರೋಡೆಗಳಲ್ಲಿ ಮಾಡುತ್ತಾರೆ. ಅದರೆ ನಾಯಕಿಯ ಮುಂದೆ ಮಾತ್ರ ಸತ್ಯವಂತನಾಗುತ್ತಾನೆ. ಅಂತೂ ಸತ್ಯನೆ ಶಿವನೆಂದು ತಿಳಿದ ನಾಯಕಿ ದೂರವಾದಾಗ ಸುದೀಪನ ಹಳೆಯ ಕತೆಯೊಂದು ತೆರೆಯುತ್ತದೆ. ಇಲ್ಲಿ ಪ್ರಕಾಶ್ ರೈ ಸುದೀಪ್ ತಂದೆಯಾಗಿ ಕಾಣಿಸಿದ್ದಾರೆ. ಅವರು ತೆರೆ ಮೇಲೆ ಇದಷ್ಟು ಪ್ರೇಕ್ಷಕರ ಕಣ್ಣಲಿ ಬರಿ ನೀರು. ಕೊನೆಗೆ ನಾನು ಪ್ರೀತಿಸಿದ್ದು ಸತ್ಯನನ್ನೆ ಎಂದು ನಾಯಕಿ ಹೇಳಿದಾಗ ಶಿವನನ್ನು ಸಾಯಿಸಿ ಎಲ್ಲರ ಮುಂದೆ ಸತ್ಯನಾಗಿ ಸುದೀಪ್ ನಿಲ್ಲುತ್ತಾರೆ. ಇನ್ನೂ ಚಿತ್ರದ ಹಾಡುಗಳು ಸಂಗೀತ ಕೇಳಲು ಇಂಪಾಗಿವೆ. ಪೋಷಕ ಪಾತ್ರಗಳು ಸಹ ಕತೆಗೆ ಜೀವ ತುಂಬಿವೆ ಚಿತ್ರದ ಪ್ರಮುಖ ಅಂಶವೆಂದರೆ ವಿಷ್ಣುವರ್ಧನವರನ್ನು ಸ್ಮರಿಸುವುದು. ಹಾಸ್ಯ ,ಪ್ರೀತಿ, ತಂದೆಯ ಮೇಲಿನ ಗೌರವ ಈ ಎಲ್ಲ ಅಂಶಗಳು ಇರುವ ಚಿತ್ರವನ್ನು ತಪ್ಪದೆ ನೋಡಿ
-Sudheendra Bellary