ಸ್ಯಾಂಡಲ್ ವುಡ್

ಗಣೇಶ ಹಬ್ಬಕ್ಕೆ ‘ಹಿರಣ್ಯ’ ಸಿನಿಮಾದ ನಯಾ ಪೋಸ್ಟರ್ ರಿಲೀಸ್…ಮಾಸ್ ಲುಕ್ ನಲ್ಲಿ ಮಿಂಚಿದ ಮ್ಯಾಸೀವ್ ಸ್ಟಾರ್ ರಾಜವರ್ಧನ್

ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಪಕರಾದ ವಿಘ್ನೇಶ್ವರ್ ಯು ಮತ್ತು ವಿಜಯ್ ಗೌಡ ಬಿದರಹಳ್ಳಿ ಅತೀವ ಸಿನಿಮೋತ್ಸಾಹದಿಂದ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಹಿರಣ್ಯ ಸಿನಿಮಾದ ಹೊಸ ಪೋಸ್ಟರ್ ಗಣೇಶ್ ಚತುರ್ಥಿಗೆ ಬಿಡುಗಡೆಯಾಗಿದೆ. ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಾಯಕನಾಗಿ ಮಾಸ್ ಅವತಾರದಲ್ಲಿ ಧಗಧಗಿಸಿದ್ದು, ಬಾಯಲ್ಲಿ ಸಿಗರೇಟ್ ಹಿಡಿದು, ಪಕ್ಕ ರಾ ಲುಕ್ ನಲ್ಲಿ ಮಿಂಚಿದ್ದಾರೆ.

ಬಿಚ್ಚುಗತ್ತಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಾಜವರ್ಧನ್ ಮೊದಲ ಹೆಜ್ಜೆಯಲ್ಲಿಯೇ ಗೆಲುವು ತಮ್ಮದಾಗಿಸಿಕೊಂಡಿದ್ದರು. ಸದ್ಯ ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ಪ್ರವೀಣ್ ಅವ್ಯುಕ್ತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜವರ್ಧನ್ ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ.

ಸದ್ಯ ಹಿರಣ್ಯ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಇನ್ನೂ ಸ್ಪೆಷಲ್ ರೋಲ್ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಟಿಸುತ್ತಿದ್ದಾರೆ. ಅಂದ ಹಾಗೇ ಹಿರಣ್ಯ ಸಿನಿಮಾದ ಟೈಟಲ್ ಡಾಲಿ ಧನಂಜಯ್ ಬಳಿ ಇತ್ತು. ಪ್ರೀತಿಯಿಂದ ಡಾಲಿ ಗೆಳೆಯ ರಾಜವರ್ಧನ್ ಗೆ ಬಿಟ್ಟು ಕೊಟ್ಟಿದ್ದಾರೆ.

Related Articles

Back to top button

Adblock Detected

Kindly unblock this website.