ನಾಯಕ-ನಾಯಕಿ

ಗುಂಗುರು ಕೂದಲಿನಿಂದ ಗುಂಗು ಹಿಡಿಸುವ ಕೇಶರಾಶಿಯೆಡೆಗೆ ದಿಶಾ ಪೂವಯ್ಯ

ಇಂದಿನ ಬೆಡಗಿಯರಿಗೆ ಕೇಶರಾಶಿ ಸೌಂದರ್ಯದ ಮುಖ್ಯ ಅಂಗ. ಅದರಲ್ಲೂ ಸಿನಿಮಾ ನಟಿಯರಿಗಂತೂ ಕೇಶರಾಶಿಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಬಹುದೊಡ್ಡ ಜವಾಬ್ದಾರಿ. ಅಂಗಸೌಷ್ಠವವನ್ನು ಅದೆಷ್ಟೇ ಪ್ರದರ್ಶಿಸಿದರೂ ಅವೆಲ್ಲಕ್ಕಿಂತ ಹೆಚ್ಚಾಗಿ ಸೌಂದರ್ಯಕ್ಕೆ ಕಳಶಪ್ರಾಯವೆಂಬುದು ಮುಡಿಯಲ್ಲಿರುವ ರಾಶಿ ರಾಶಿ ಕೂದಲುಗಳೇ. ಇತ್ತೀಚೆಗಷ್ಟೇ “ಅಗಮ್ಯ” ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಗಾಂಧಿನಗರದ ಗ್ರೀನ್ ಹೌಸಿನಲ್ಲಿ ಆಯೋಜಿತವಾಗಿತ್ತು. ಗಣ್ಯಾತಿಗಣ್ಯರು ಆಗಮಿಸುವವರೆಗೂ ಪತ್ರಿಕಾಗೋಷ್ಠಿ ಆರಂಭವಾಗಿರಲಿಲ್ಲ.

ಸರಿ..ಪತ್ರಕರ್ತರೊಬ್ಬರು ಹಾಯಾಗಿ ಅಡ್ಡಾಡೋಣವೆಂದು ಗ್ರೀನ್ ಹೌಸಿನ ಹೊರಗಡೆ ಬಂದಾಗ ಗ್ಲಾಸ್ ಏರಿಸಿ ಕಾರಿನಲ್ಲಿ ಕುಳಿತಿದ್ದ ಚೆಲುವೆಯೊಬ್ಬಳು ಗ್ಲಾಸ್ ಇಳಿಸಿ ಮಾತಿಗಿಳಿದಳು. ಯಾವುದೋ ಮುಂಬೈ ನಾಯಕಿ…ತಪ್ಪಿ ಕನ್ನಡದ ಈ ಪತ್ರಿಕಾಗೋಷ್ಠಿಗೆ ಬಂದಳಾ..ಎಂದು ಈ ಪತ್ರಕರ್ತರು ಆಲೋಚಿಸುವ ಮುನ್ನವೇ ಆಕೆ..”ಹಾಯ್ ಸಾರ್..ಚೆನ್ನಾಗಿದ್ದೀರಾ?” ಎಂದು ಅಪ್ಪಟ ಕನ್ನದದಲ್ಲೇ ನಗುನಗುತ್ತಾ ಮಾತನಾಡಿದಳು !

ಆಕೆ ಬೇರಾರೂ ಆಗಿರಲಿಲ್ಲ. ಅದೇ “ಅಗಮ್ಯ” ಚಿತ್ರದ ನಾಯಕಿ ದಿಶಾ ಪೂವಯ್ಯ ಆಗಿದ್ದಳು ! ಹಾಗಾದರೆ ಹಿಂದೆ ದಿಶಾ ಹೇಗಿದ್ದಳು? ಈಗ ಹೇಗೆ ಹೀಗಾಗಿದ್ದಾಳೆ…ಎಂದು ಆ ಪತ್ರಕರ್ತರು ಗಮನ ಹರಿಸುವ ಮುನ್ನವೇ ಆಕೆ ತನ್ನ ಬಲಗೈಯಿಂದ ಬೆನ್ನ ಹಿಂದಿದ್ದ ಕೇಶರಾಶಿಯನ್ನು ಕುತ್ತಿಗೆಯ ಹಿಂಬದಿಯಿಂದ ಮುಂದೆಳೆದು ತಂದಳು…ಜೊತೆಗೆ ಆಕೆಯ ಮುಂಗುರುಳೂ ಮಾತಿಗೆ ನಿಂತಿತು. ಈಗ ಆ ಪತ್ರಕರ್ತರಿಗೆ ಆಕೆಯಲ್ಲಾದ ಬದಲಾವಣೆಗೆ ಮೂಲಕಾರಣ ಗೊತ್ತಾಯಿತು.

ಮೂಲತಹ ಗುಂಗುರು ಕೂದಲಿನ ದಿಶಾ ಆಧುನಿಕ ತಂತ್ರಜ್ಞಾನದ ಸಹಾಯದಿಂದ ತನ್ನ ಕೇಶರಾಶಿಯನ್ನು ನೇರಗೊಳಿಸಿಕೊಂಡಿದ್ದಳು. ಅದೇ ಆಕೆಯ ಸೌಂದರ್ಯ ಇಮ್ಮಡಿಗೊಳ್ಳಲು ನೆರವಾಗಿತ್ತು ! ಅಗಮ್ಯ ಚಿತ್ರದ ಮೊದಲ ಪ್ರೆಸ್ ಮೀಟಿಗೆ ಹಿಂದೆ ಗುಂಗುರು ಕೂದಲಿನಲ್ಲಿ ಬಂದಿದ್ದ ದಿಶಾ ಈಗ ಗುಂಗುರು ಕೂದಲಿನಿಂದ ಗುಂಗು ಹಿಡಿಸುವಂತೆ ತನ್ನ ಕೂದಲುಗಳನ್ನು ನೇರಗೊಳಿಸಿಕೊಂಡಿದ್ದಳು.

ಏನಿದು ಹೊಸ ಬದಲಾವಣೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ದಿಶಾಳದ್ದು ಒಂದೇ ಉತ್ತರ…”ಪರಿವರ್ತನೆ ಜಗದ ನಿಯಮ…ಜನ ಚೈಂಜ್ ಕೇಳ್ತಾರೆ…ಸೋ ಈಗ ನಾನು ಹಳೆ ದಿಶಾ ಅಲ್ಲ..ಹೊಸ ದಿಶಾ (disha)” ಎಂದು ಸುಂದರ ದಂತಪಂಕ್ತಿಗಳನ್ನು ಪ್ರದರ್ಶಿಸುತ್ತಾ ನಗುವ ಹೂವಾದಳು. ಆ ನಂತರದಲ್ಲಿ ಇದೇ ಪತ್ರಿಕಾಗೋಷ್ಠಿಗೆ ಮುಂಬೈನಿಂದ ರಮಣೀತು ಚೌದ್ರಿ ಎಂಬ ಯಶಸ್ವಿ ನಾಯಕಿಯ ಆಗಮನವಾದರೂ ನೆರೆದಿದ್ದ ಎಲ್ಲರ ಗಮನ ಮಾತ್ರ ದಿಶಾಳನ್ನು ಬಿಟ್ಟು ಆಚೆ ಈಚೆ ಸರಿಯಲಿಲ್ಲ. ಪ್ರೇಕ್ಷಕರ ಕಂಗಳು ಒಮ್ಮೊಮ್ಮೆ ರಮಣೀತು ಕಡೆಗೆ ಹರಿದರೂ ರಮಣೀಯ ದಿಶಾಳೆಡೆಗೇ ಮತ್ತೆ ಮತ್ತೆ ತಿರುಗಿ ಅಂದವನ್ನು ಅಳೆಯುತ್ತಿತು ! ಅಲ್ಲಿಗೆ ಅಲ್ಲಿಂದ ಹಾರಿ ಬಂದವಳೆದುರೂ ಇಲ್ಲಿಯವಳೇ ಮಿಂಚಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಅಂದ ಹಾಗೆ ಇನ್ನು ಕೊಡಗಿನ ಹಾಟ್ ಕನ್ನಿಕೆ ದಿಶಾ ಪೂವಯ್ಯ ಇಲ್ಲಿಂದ ಅಲ್ಲಿಗೆ ಹಾರುವ ಕಾಲವಿಲ್ಲ ಬಹುದೂರ !

KANNADA TIMES-6-2-2013

Related Articles

Back to top button

Adblock Detected

Please consider supporting us by disabling your ad blocker