ಸ್ಯಾಂಡಲ್ ವುಡ್

ಮಾಂಜ್ರಾ ಚಿತ್ರದ ಮೂಲಕ ಪ್ರಖ್ಯಾತ ಗಾಯಕ ಹರಿಹರನ್ ಅವರ ಮತ್ತೊಂದು ಹಾಡು ಕನ್ನಡ ಚಿತ್ರರಂಗಕ್ಕೆ..!

ಡಾ.ಚಿನ್ಮಯ ರಾವ್ ಸಂಗೀತ-ಸಾಹಿತ್ಯದ ಏನ್ ಬ್ಯೂಟಿ ನೀನು...ಮಿಸ್ ಆದೆ ನಾನು...

ಬಾಲಿವುಡ್ ಸಂಗೀತ ಲೋಕದಲ್ಲಿ ಒಂದರ ನಂತರ ಇನ್ನೊಂದು ಮತ್ತೊಂದು ಸೂಪರ್ ಹಿಟ್ ಗೀತೆಗಳಿಗೆ ಹಾಡುತ್ತಿದ್ದ ಹರಿಹರನ್ ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರಗಳಿಗೆ ಹಾಡಿದ್ದು ತೀರಾ ಅಪರೂಪ. ಕನ್ನಡದ ಸಂಗೀತ ಪ್ರೇಮಿಗಳು ಹುಡುಕಾಡಿ ತಡಕಾಡಿ ಹರಿಹರನ್ ಗಾಯನದ ಒಂದಷ್ಟು ಹಳೆಯ ಕನ್ನಡದ ಗೀತೆಗಳನ್ನೇ ಕೇಳುವಂತಾಗಿತ್ತು. ಆದರೆ ಈಗ ಆ ಸಮಸ್ಯೆ ನಿವಾರಣೆಯಾಗಿದೆ.

“ಏನ್ ಬ್ಯೂಟಿ ನೀನು…ಮಿಸ್ ಆದೆ ನಾನು…
ನಿನ್ನ ನೋಡುತ..ನೋಡುತ…ಕಳೆವುದೆ ನನ್ನ ಡ್ಯುಟಿ..
ನಿನ್ನ ಅಂದಕೆ ಯಾರೂ ಇಲ್ಲ..ಸರಿ ಸಾಟಿ…!..”

ನೀವೆಲ್ಲ ಮಿಸ್ ಮಾಡದೆ ಕೇಳಲೇಬೇಕಾದ ಈ ಹಾಡಿಗೆ ನಿಮ್ಮ ನೆಚ್ಚಿನ ಬಾಲಿವುಡ್ ಗಾಯಕ ಹರಿಹರನ್ ಹಾಡಿದ್ದಾರೆ.

ಮುಂಬೈನ ಚಾಂದಿವಿಲಿಯಲ್ಲಿರುವ ರೆಕಾರ್ಡಿಂಗ್ ಸ್ಟೂಡಿಯೋ ಒಂದರಲ್ಲಿ ಬರೊಬ್ಬರಿ 5 ವರ್ಷಗಳ ಹಿಂದೆ ಅಂದರೆ 2015 ಫೆಬ್ರವರಿ ಹತ್ತರಂದು ಧ್ವನಿಮುದ್ರಣಗೊಂಡಿದ್ದ ಯುವ ಸಂಗೀತ ನಿರ್ದೇಶಕ ಡಾ.ಚಿನ್ಮಯ ರಾವ್ ಅವರ ಸಂಗೀತ ಹಾಗು ಸಾಹಿತ್ಯವಿರುವ “ಮಾಂಜ್ರಾ” ಚಿತ್ರದ ಆಡಿಯೋ ನಿನ್ನೆ (12-2-2020, ಬುಧವಾರ) ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.

ಲಹರಿ ಸಂಸ್ಥೆ ಹೊರತಂದಿರುವ ಆಡಿಯೊವನ್ನು ಲಹರಿ ವೇಲು ಹಾಗೂ ಚಿತ್ರ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್ ಅವರು ಚಿತ್ರತಂಡದ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೋಕಾರ್ಪಣೆಗೊಳಿಸಿದರು.

ಚಿತ್ರದ ನಿರ್ದೇಶಕ ಮುತ್ತುರಾಜ್, ನಿರ್ಮಾಪಕ ರವಿ ಅರ್ಜುನ್ ಪೂಜೇರ, ಸಂಗೀತ ನಿರ್ದೇಶಕ ಡಾ.ಚಿನ್ಮಯ ಎಂ.ರಾವ್, ನಾಯಕ ರಂಜಿತ್, ನಾಯಕಿ ಅಪೂರ್ವ ಹಾಗೂ ಇಡೀ ಚಿತ್ರತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೈಜ ಘಟನೆಯಾಧಾರಿತ ಈ ಚಿತ್ರದ ನಿಜವಾದ ಕಥಾನಾಯಕ ಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾದರು.

ಯುವ ಸಂಗೀತ ನಿರ್ದೇಶಕ ಡಾ.ಚಿನ್ಮಯ ರಾವ್ ಅವರ ಸಂಗೀತ ಹಾಗು ಸಾಹಿತ್ಯವಿದ್ದ ಈ ಗೀತೆಗೆ ಪದ್ಮಶ್ರೀ ಹರಿಹರನ್ ಮುಂಬೈನ ಚಾಂದಿವಿಲಿಯಲ್ಲಿರುವ ತಮ್ಮದೇ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಅತ್ಯಮೋಘವಾಗಿ ಹಾಡಿದ್ದರು. ಆ ಮೂಲಕ ಮಾಂಜ್ರಾ ಚಿತ್ರದ ಧ್ವನಿಮುದ್ರಣ ಕಾರ್ಯ ಯಶಸ್ವಿಯಾಗಿ ನೆರವೇರಿತ್ತು. ಚಿತ್ರದ ನಿರ್ದೇಶಕ ಮುತ್ತುರಾಜ್ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೈಗೆ ನಿಲುಕದ ನಕ್ಷತ್ರ..? !

ಭಾರತೀಯ ಚಿತ್ರಸಂಗೀತದಲ್ಲಿ ಪದ್ಮಶ್ರೀ ಹರಿಹರನ್ ಅವರಿಗೆ ಬಹುದೊಡ್ಡ ಸ್ಥಾನವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹರಿಹರನ್ ಈವರೆಗೆ ಹಾಡಿರುವ ಸುಮಾರು ಎಲ್ಲಾ ಹಾಡುಗಳೂ ಸೂಪರ್ ಹಿಟ್ ಎಂದರೆ ಅದೇನು ಅತಿಶಯೋಕ್ತಿಯಲ್ಲ. ಕೆಲವೊಂದು ಚಿತ್ರ ಹರಿಹರನ್ ಅವರ ಸೂಪರ್ ಹಿಟ್ ಹಾಡಿದಿಂದಾಗಿಯೇ ಹಿಟ್ ಆಗಿರುವುದೂ ಉಂಟು. ಕೆಲವೊಮ್ಮೆ ಚಿತ್ರ ಫ್ಲಾಪ್ ಆದರೂ ಆ ಚಿತ್ರದ ಹರಿಹರನ್ ಅವರ ಹಾಡು ಇನ್ನಿಲ್ಲದಂತೆ ಸೂಪರ್ ಹಿಟ್ ಆದ ಉದಾಹರಣೆಯೂ ಇದೆ.

ಇಂತಹ ಹರಿಹರನ್ ಬರೀ ಸ್ಟಾರ್ ಸಂಗೀತ ನಿರ್ದೇಶಕರಿಗೆ…ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಹಾಡುತ್ತಾರೆ…ಅವರು ಕೈಗೆ ನಿಲುಕದ ನಕ್ಷತ್ರ..ಎಂದೆಲ್ಲಾ ಹೇಳುತ್ತಾರೆ. ಆದರೆ “ಮಾಂಜ್ರಾ” ಎಂಬ ಹೊಸ ತಂಡದ ಹೊಸ ಪ್ರತಿಭೆಗಳಿಗೂ ಪೆÇ್ರೀತ್ಸಾಹ ಕೊಡುವ ಮೂಲಕ ಡೌನ್ ಟು ಅರ್ತ್ ಎಂಬಂತಾಗಿದ್ದು ಅವರ ಹೃದಯ ವೈಶಾಲ್ಯ ತುಂಬಿದ ಅಗಾಧ ವ್ಯಕ್ತಿತ್ವಕ್ಕೊಂದು ಜ್ವಲಂತ ಉದಾಹರಣೆ…ನಿದರ್ಶನವಾಗಿತ್ತು ಅಂದಿನ ಆ ದಿನ !

 

ಧ್ವನಿಮುದ್ರಣದ ನಂತರ ಮಾತನಾಡಿದ್ದ ಪ್ರಖ್ಯಾತ ಹಿನ್ನೆಲೆ ಗಾಯಕ ಹರಿಹರನ್ ಭಾರತೀಯ ಹಾಗು ಪಾಶ್ಚಾತ್ಯ ಸಂಗೀತದ ಸಮ್ಮಿಶ್ರಣಗೊಂಡ ಡಾ.ಚಿನ್ಮಯ ರಾವ್ ಅವರ ಸಂಗೀತ ಸಾಹಿತ್ಯದ ಈ ಗೀತೆ ಸೂಪರ್ ಹಿಟ್ ಆಗಲಿ ಎಂದು ಶುಭ ಹಾರೈಸಿದ್ದರು. ಮುತ್ತುರಾಜ್ ಅಂತಹ ಹೊಸ ಪ್ರತಿಭಾನ್ವಿತ ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದರು.

ಇಂದಿನ ಈ ಗೀತೆಗೆ ನಾನು ಹೊಸ ವಿದ್ಯಾರ್ಥಿ…!

ನಾನು ಎಷ್ಟೇ ದೊಡ್ಡ ಗಾಯಕನಾಗಿರಬಹುದು…ಆದರೆ ಇಂದಿನ ಈ ಗೀತೆಗೆ ನಾನು ನಿಮ್ಮ ವಿದ್ಯಾರ್ಥಿ ಎಂದು ಹರಿಹರನ್ ಚಿತ್ರದ ಸಂಗೀತ ನಿರ್ದೇಶಕ ಡಾ.ಚಿನ್ಮಯ ರಾವ್ ಅವರಿಗೆ ಹೇಳುವಾಗ ಸ್ಥಳದಲ್ಲಿದ್ದವರಿಗೆ ಅಚ್ಚರಿಯಾಯಿತು ! ಹರಿಹರನ್ ಅವರ ಮೇರುವ್ಯಕ್ತಿತ್ವಕ್ಕೆ ಅವರ ಈ ಮಾತೇ ಸಾಕ್ಷಿಯಾಯಿತು.

ಅವರಿಗೆ ಅವರೇ ಸಾಟಿ..!

ಇದೇ ಸಂದರ್ಭದಲ್ಲಿ ಮಾತನಾಡಿದ್ದ ಚಿತ್ರದ ಸಂಗೀತ ನಿರ್ದೇಶಕ ಚಿನ್ಮಯ ರಾವ್ ಈ ಗೀತೆಯನ್ನು ಹರಿಹರನ್ ಅವರಿಗಾಗಿಯೇ ರಚಿಸಿದ್ದು. ಅವರಿಗೆ ಅವರೇ ಸಾಟಿ ಹೊರತು ಮತ್ತ್ಯಾರು ಸಾಟಿಯಾಗಲಾರರು. ಅಂತಹ ಅನನ್ಯತೆ ತುಂಬಿದ ಗಾಯನ ಅವರದ್ದು. ಅದಕ್ಕಾಗಿಯೇ ಹರಿಹರನ್ ಸದಾ ವಿಶ್ವಮಾನ್ಯರು ಎಂದು ಅವರೆದುರೇ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡದ್ದರು.

*****

DR.CHINMAYA M.RAO Musical 4th Movie MANJRA

SONG-1-YEN BEAUTY NEENU
SINGER : HARIHARAN

MUSIC & LYRICS :
DR.CHINMAYA M.RAO

Officially Released today in
Lahari Kannada | T-Series
YouTube Channel.

Please view it, like and share but most importantly drop in your valuable inputs and feedback below on YouTube, so that we can keep a record of your comments on YouTube itself.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.