ಸಂಭ್ರಮದ ನೃತ್ಯ ದಸರಾ

ಬೆಂಗಳೂರು : ಆರಾಧನ ನೃತ್ಯ ಶಾಲೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ತಾ: ೧೫-೧೦-೨೦೨೩ ರಿಂದ ೧೮-೧೦-೨೦೨೩ ರ ವರೆಗೆ ದಸರಾ ಮಹೋತ್ಸವ ನೃತ್ಯ ಕಾರ‍್ಯಕ್ರಮ ನಡೆಸಲಾಯಿತು.

ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿರುವ ಆರಾಧನ ನೃತ್ಯ ಶಾಲೆಯು ನಗರದ ಗಾಯತ್ರಿ ರಂಗಮಂದಿದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ನಾಲ್ಕು ದಿನಗಳ ಕಾಲ ನೃತ್ಯ ಕಾರ‍್ಯಕ್ರಮ ನಡೆಯಿತು.

ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದುಷಿ ಸೀತಾ ಗುರುಪ್ರಸಾದ್, ವಿದುಷಿ ಅರಣ್ಯ ನಾರಾಯಣ್, ವಿದ್ವಾನ್ ಬೆಟ್ಟ ವೆಂಕಟೇಶ್ ಹಾಗೂ ಶ್ರೀ ಸಾಯಿ ವೆಂಕಟೇಶ್ ರವರು ಆಗಮಿಸಿದ್ದರು.

ಕಾರ‍್ಯಕ್ರಮದಲ್ಲಿ ಮಹಿಷಾಸುರಮರ‍್ದಿನಿಯ ನೃತ್ಯ ರೂಪಕ, ಶಿವ ಪರ‍್ವತಿ ಕಲ್ಯಾಣ ಇನ್ನಿತರ ನೃತ್ಯ ಪ್ರಕಾರಗಳನ್ನು ಪ್ರರ‍್ಶಿಸಲಾಯಿತು.

ನೃತ್ಯ ಶಾಲೆಯ ಎಲ್ಲ ವಿದ್ಯರ‍್ಥಿಗಳು ತಮ್ಮ ನೃತ್ಯ ಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರರ‍್ಶಿಸುವ ಮೂಲಕ ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.

ಆರಾಧನ ನೃತ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದಂತಹ ಶ್ರೀ ನಾಗಭೂಷಣ್ ರವರು ಶಾಲೆಯ ಕಾರ‍್ಯದರ‍್ಶಿ ಸ್ಮೃತಿ, ಖಜಾಂಚಿಯಾದ ಶ್ರೀ ಜಯಸಿಂಹ ವಿದ್ಯರ‍್ಥಿಗಳು, ಪಾಲಕರು ಹಾಗೂ ಕಲಾಭಿಮಾನಿಗಳು ಈ ಸಂರ‍್ಭದಲ್ಲಿ ಹಾಜರಿದ್ದರು.

Exit mobile version