ಲಯಲಹರಿ ಶಾಲೆಯ ದಸರಾ ಸಾಂಸ್ಕೃತಿಕ ಉತ್ಸವ

ಬೆಂಗಳೂರು : ಲಯಲಹರಿ ಸಂಗೀತ ನೃತ್ಯ ಶಾಲೆಯ ವತಿಯಿಂದ 19-10-2023 ರಿಂದ 21-10-2023ರವರೆಗೆ ಮೂರು ದಿನಗಳ ದಸರಾ ಹಬ್ಬದ ಸಂಗೀತ ನೃತ್ಯದ ಉತ್ಸವ ಬೆಂಗಳೂರಿನ ಗಾಯತ್ರಿ ರಂಗಮಂದಿರದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ದೊಂದಿಗೆ ನಡೆಯಿತು.

ವಿಘ್ನ ನಿವಾರಕ ಗಣಪತಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲೆಯ ವಿದ್ಯಾರ್ಥಿಗಳು ದೇವಿ ಕುರಿತಾದ ಕೃತಿಗಳಿಗೆ ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದುಷಿ ರತ್ನ ನಾಗರಾಜ್, ವಿದುಷಿ ಮೋಹನ ಪ್ರಿಯ ಮತ್ತು ಶ್ರೀಮತಿ ರೇವತಿ ಕಾಮತ್ ರವರು ಆಗಮಿಸಿದ್ದರು. ಕಾರ್ಯಕ್ರಮದ ಕುರಿತು ಮಾತನಾಡಿದ ಗಣ್ಯರು ಸಂಗೀತ ನೃತ್ಯ ಕಲೆ ಬಹಳ ದೈವಿಕ  ಕಲೆಯಾಗಿದ್ದು ಸಾಧನೆ ಮಾಡಿದರೆ ಬಹಳ ಉತ್ತುಂಗಕ್ಕೆ ಏರಬಹುದು ಎಂದು ಹೇಳಿದರು.

ಎಲ್ಲ ಅತಿಥಿ ಗಣ್ಯರನ್ನು ಲಯಲಹರಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಸುರೇಶ್ ರವರು ಸನ್ಮಾನಿಸಿದರು. ಶಾಲೆಯ ಕಾರ್ಯದರ್ಶಿ ಗಳಾದ ಸೌಮ್ಯ ನಂಬಿಸನ್, ಖಜಾಂಚಿ ಸುರೇಶ್ ಜೋಯಿಸ್, ಶಾಲೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.

Exit mobile version