ನಿಗರ್ವಿ ನಿಸರ್ಗ

-ಕವಿತಾ (ಆಲ್ಪೈನ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ)

ಒರತೆಯ ನಿಧಿಯಾದ ನಿನಗೆ
ಬರದ ಗೊಡವೆ ಯಾಕೆ
ನೀನಾಗು ಎಂದೆಂದು
ಚಿಗುರಿನಾ ಚಿಲುಮೆ
ಜೀವಕ್ಕೆ ಜೀವವಾಗಿರುವ ನಿನ್ನ
ಗುಣದಲ್ಲಿರುವುದು ಹಾರೈಕೆಯ ಸಿರಿ
ನೀನೊಂದು ಬದುಕಿನಾ ಗರಿಮೆ
ನಿನ್ನಲ್ಲಡಗಿರುವುದು ರಾಶಿ ರಾಶಿ ಜೀವರಾಶಿ
ಆ ಸಮ್ರಜ್ಯಕ್ಕೆಲ್ಲಾ ನೀ ಒಡತಿ
ನಿಗರ್ವಿಯಾದ ನಿನಗೆ ನೀನೆ ಸಾಟಿ
ನಿನ್ನನ್ನು ತೃಣವಾಗಿ ಕಾಣುವ
ಜೀವಗಳಿಗಿದೆ ಸಂಚಕಾರ
ನಿನ್ನನ್ನರಿತು ನಡೆದರೆ ಬಾಳೆ ಬಂಗಾರ.

Exit mobile version