ನೀನು ಇಲ್ಲದೆ

ಒಂದು ಬಾರಿ ಬಂದು ನೋಡು
ಇಲ್ಲಿಯ ನೀನಿಲ್ಲದ ನನ್ನಯ ಪಾಡು
ಮಸಣದ ಹೆಣವಂತಾಗಿರುವೆ ನಾ ಗೆಳತಿ ನೀನು ಇಲ್ಲದೆ!
ಕೈ ಹಿಡಿದು ನಡೆದ ದಾರಿ
ನಮ್ಮ ಹೆಸರನ್ನು ನೆನೆದು ಕೂಗಿದೆ ಸಾರಿ
ಬಾಡಿದ ಹೂವಾದೆ ನಾ ಗೆಳತಿ ನೀನು ಇಲ್ಲದೆ !!

ಯಾರೂ ಇಲ್ಲದ ಜೀವನದಲ್ಲಿ
ಎನಗೆ ನೀ ಎಲ್ಲವಾಗಿದೆಯಲ್ಲ
ಇಂದು ಬಾವಿಯಲ್ಲಿನ ಸತ್ತ ಚಂದ್ರ ಬಿಂಬ ನಾ ಗೆಳತಿ ನೀನು ಇಲ್ಲದೆ!
ಬಂದು ನೀನು ನಗಬಾರದ ಒಮ್ಮೆ
ಮರವ ತಬ್ಬಿದ ಬಳ್ಳಿಯ ಹಾಗೊಮ್ಮೆ
ಸೂಜಿ ಇಲ್ಲದ ದಾರದ ಹಾಗೆ ನಾನು ಗೆಳತಿ ನೀನು ಇಲ್ಲದೆ!!

ನಿನ್ನೆಲ್ಲ ಮಾತುಗಳೆಲ್ಲವ ಮರೆತೆಯಾ?
ಈ ನಮ ಸ್ನೇಹವ ಮರೆತೇ ಹೋದೆಯಾ?
ಶಾಪಗ್ರಸ್ತ ನೀಚಗ್ರಹವು ನಾನು ಗೆಳತಿ ನೀನು ಇಲ್ಲದೆ! ಗೊತ್ತು ಗುರಿ ಇಲ್ಲದೆ ಸಾಗುತ್ತಿದೆ ಜೀವನ
ಬರಬಾರದೇ ಎನಿಸುತ್ತಿದೆ ಈ ಕ್ಷಣವೇ ಮರಣ
ಸ್ನೇಹದೀ ಗೂಡಿನಲ್ಲಿ ನಾ ಒಂಟಿ ಹಕ್ಕಿ ಗೆಳತಿ ನೀನು ಇಲ್ಲದೆ !!

-ರಶ್ಮಿ ಹೆಜ್ಜಾಜಿ

Exit mobile version