Featured Articles

 • ಸಂಗೀತ ವಿದ್ಯೆಯೆಂಬ ಮಹಾಸಾಗರದಲ್ಲಿ ನಾನಿನ್ನೂ ಸಾಧಿಸಿದ್ದು ಬೊಗಸೆ ಮಾತ್ರದಷ್ಟು : ಚಿನ್ಮಯ ಎಂ.ರಾವ್

  ಸಂಗೀತ ಕಲಾವಿದ ಚಿನ್ಮಯ ಎಂ.ರಾವ್ ಅವರ ಸಂದರ್ಶನ ಸಂದರ್ಶಕರು : ಸಂಧ್ಯಾ, ಆಲ್ಪೈನ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ

 • ತಂತ್ರಜ್ಞಾನ ಭಾಷೆ ಮತ್ತು ಬಾಂದವ್ಯ ಗಟ್ಟಿಗೊಳಿಸುವ ಸಾಧನ

  ಸಾಗರದಲ್ಲಿ ಮಾರ್ಚಿ 1, 2ರಂದು ಅಪರೂಪದ ಕಾರ್ಯಾಗಾರವೊಂದು ನಡೆಯಿತು. ಕನ್ನಡದ ಅಂತರ್ಜಾಲ-ವಿಶ್ವಕೋಶವಾದ ವಿಕಿಪೀಡಿಯಾ ಕುರಿತು ಈ ಕಾರ್ಯಾಗಾರವಿದ್ದಿತ್ತು. ವಿಕಿಪೀಡಿಯಾಕ್ಕೆ ಲೇಖನ ಬರೆಯುವುದು ಹೇಗೆ, ಬರೆದ ಲೇಖನಗಳನ್ನು ಅಪ್‍ಲೋಡ್ ಮಾಡುವ ಬಗೆ ಇತ್ಯಾದಿಗಳ ತರಬೇತಿ ಅಲ್ಲಿ ನಡೆಯಿತು. ರಾಜ್ಯ ಸರ್ಕಾರದ ತಂತ್ರಾಂಶ ಸಮಿತಿ ಸದಸ್ಯ ಹಾಗೂ ಹೆಸರಾಂತ ತಂತ್ರಾಂಶ ತಜ್ಞ ಡಾ.ಯು.ಬಿ.ಪವನಜ ಇದನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಕನ್ನಡ ಟೈಮ್ಸ್ ಎಂಬ ಇ-ಪತ್ರಿಕೆ ಹೊರತರುತ್ತಿರುವ ಚಿನ್ಮಯ ಮತ್ತವರ ಬಳಗ ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದ ಉದ್ಘಾಟನೆ ಮಾಡಿದ ಲೇಖಕ, ಕನ್ನಡ ಉಪನ್ಯಾಸಕ ಸಫ್ರಾಜ್ ಚಂದ್ರಗುತ್ತಿ ಕನ್ನಡ ಭಾಷೆ ಮತ್ತದರ ಸಂವಹನ ಸಮಸ್ಯೆ ಕುರಿತಂತೆ ಮೌಲಿಕ ಮಾತುಗಳನ್ನಾಡಿದರು. ಆ ಮಾತುಗಳ ಸಂಗ್ರಹ ರೂಪವನ್ನಿಲ್ಲಿ ಕೊಡಲಾಗಿದೆ.

 • ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದ “ಕನ್ನಡ ಟೈಮ್ಸ್” ತ್ರೈಮಾಸಿಕ ಪತ್ರಿಕೆಯ ಲೋಕಾರ್ಪಣೆ

  ಆನಂದಪುರ : ಇಲ್ಲಿಗೆ ಸಮೀಪದ ಹೊನಗೋಡಿನ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಸಮಾಜ ಸೇವಾ ಸಂಸ್ಥೆ ಹೊರತಂದಿರುವ “ಕನ್ನಡ ಟೈಮ್ಸ್” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಮಾಜಿ ಮುಖ್ಯಮಂತ್ರಿ ಹಾಗು ಸಂಸದ ಬಿ.ಎಸ್ ಯಡಿಯೂರಪ್ಪ ಮೇ ನಾಲ್ಕರಂದು ಭಾನುವಾರ ತಮ್ಮ ಸ್ವಗೃಹದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಿನ್ಮಯ ಎಂ.ರಾವ್ ಸಾರಥ್ಯದಲ್ಲಿ ಹೊರಬಂದಿರುವ "ಕನ್ನಡ ಟೈಮ್ಸ್" ಎಂಬ ತ್ರೈಮಾಸಿಕ ಪತ್ರಿಕೆ ವಿಶ್ವಕನ್ನಡಿಗರಿಗೊಂದು ಹೆಮ್ಮೆಯ ಸಂಗತಿ. ಇಂತಹ ಒಂದು ವೈಚಾರಿಕ ತ್ರೈಮಾಸಿಕ ಪತ್ರಿಕೆಯ ಅಗತ್ಯ ಕನ್ನಡಿಗರಿಗಿತ್ತು. ಹೊನಗೋಡು ಎಂಬ ಹಳ್ಳಿಯಲ್ಲಿದ್ದು ಒಬ್ಬ ಉದಯೋನ್ಮುಖ ಸಂಗೀತ ನಿರ್ದೇಶಕರಾಗಿಯೂ ಬೆಳೆಯುತ್ತಿರುವ ಚಿನ್ಮಯ ಬಹಳ ಶ್ರಮಪಟ್ಟು ಇದನ್ನು ರೂಪಿಸಿದ್ದಾರೆ. ಕನ್ನಡಿಗರಿಗೆ ವಾಸ್ತವಿಕ ಸಂಗತಿಗಳನ್ನು ತಿಳಿಸುವ ಪ್ರಯತ್ನ ಈ ಪತ್ರಿಕೆಯಿಂದಾಗಲಿ. ಚಿನ್ಮಯ ಅವರಂತಹ ಯುವಕ ಈ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂಬುದೇ ಸಂತೋಷದ ಸಂಗತಿ. ಚಿನ್ಮಯ ತಮ್ಮ ಸಂಸ್ಥೆಯ ಮೂಲಕ ಇಂತಹ ಒಂದು ಅಪರೂಪದ ಸಾಹಸಕ್ಕೆ ಕೈಹಾಕಿ ಕನ್ನಡಿಗರಿಗೆ ಕೊಡುಗೆಯನ್ನು ಕೊಡುತ್ತಿದ್ದಾರೆ. ಅವರು ಹಾಗು ಅವರ ಕನ್ನಡ ಟೈಮ್ಸ್ ಎಂಬ ಸಮಾಜ ಸೇವಾ ಸಂಸ್ಥೆ ಯಶಸ್ವಿಯಾಗಲಿ. ಕನ್ನಡಿಗರು ಇದರ ಸದುಪಯೋಗವನ್ನು ಪಡೆಯುವಂತಾಗಲಿ ಎಂದು ಶುಭಹಾರೈಸಿದರು.

 • ಸಕಲ ಬಗೆಯ ಸಂಗೀತಕ್ಕೂ ಶಾಸ್ತ್ರೀಯ ಸಂಗೀತವೇ ಭದ್ರಭುನಾದಿ- ಸ್ವರಮೇಧಾ ಸಂಗೀತ ವಿದ್ಯಾಲಯಕ್ಕೆ ಚಾಲನೆ

  ನಗರದ ವಿಜಯನಗರದಲ್ಲಿ ಕಳೆದ ಏಪ್ರಿಲ್ ಒಂಬತ್ತರಂದು ಬುಧವಾರ ಯುವ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಅವರ ಸ್ವರಮೇಧಾ ಸಂಗೀತ ವಿದ್ಯಾಲಯವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಶಾಸ್ತ್ರೀಯ ಸಂಗೀತದ ಕಲಿಕೆ ಗಾಯಕರನ್ನು ಹೇಗೆ ಪರಿಪೂರ್ಣರನ್ನಾಗಿಸುತ್ತದೆ ಎಂಬುದನ್ನು ಸಂಗೀತದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಈ ಮೂಲಕ "ಕನ್ನಡ ಟೈಮ್ಸ್" ಸಂಸ್ಥೆಯ ಶಾಸ್ತ್ರೀಯ ಸಂಗೀತ ಕಲಿಕೆ ಹಾಗು ಸಂಶೋಧನೆಯ ವಿಭಾಗಕ್ಕೆ ಚಾಲನೆಗೊಂಡಿತು.

 • ಕನ್ನಡ ಟೈಮ್ಸ್ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಕನ್ನಡ ವಿಕಿಪೀಡಿಯಾ ಮಾಹಿತಿ ಕಾರ್ಯಾಗಾರ

  ಕಳೆದ ಮಾರ್ಚ್ ಒಂದರಂದು ಸಾಗರದ ಬಿ.ವಿ. ರವೀಂದ್ರನಾಥ ಅವರ ಲೆಕ್ಕಪರಿಶೋಧನಾ ಕಚೇರಿ ಸಭಾಂಗಣದಲ್ಲಿ ಕನ್ನಡ ಟೈಮ್ಸ್ ಮೀಡಿಯಾ ವಲ್ರ್ಡ್ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಎರಡು ದಿನಗಳ ಕನ್ನಡ ವಿಕಿಪೀಡಿಯಾ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಸರ್ಫ್‍ರಾಜ್ ಚಂದ್ರಗುತ್ತಿ ಅತ್ಯಮೋಘವಾಗಿ ಮಾತನಾಡಿದರು. ಭಾಷಣದ ಪೂರ್ಣಪಾಥವನ್ನು ಕನ್ನಡ ಟೈಮ್ಸ್ ಅಲ್ಲಿ ಪ್ರಕಟಿಸಲಾಗಿದೆ.

 • ಜೋಗದ ಹಾದಿಯಲ್ಲಿ ಕೊಲ್ಲಿ ಬಚ್ಚಲು ಡ್ಯಾಂ

  ಜೋಗದ ಪ್ರವಾಸಕ್ಕೆ ಶಿವಮೊಗ್ಗ ಮೂಲಕ ಆಗಮಿಸುವ ಪ್ರವಾಸಿಗರಿಗೆ ಮೋಜು ಮಸ್ತಿ ನೀಡುವ ಪುಟ್ಟ ಅಣೆಕಟ್ಟು ಇಲ್ಲಿದೆ. ಶಿವಮೊಗ್ಗದಿಂದ ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸುಮಾರು 40 ಕಿ.ಮೀ.ದೂರ ಸಾಗಿದರೆ ಗಿಳಾಲಗುಂಡಿ ಎಂಬ ಪುಟ್ಟ ಊರಿದೆ. ಇಲ್ಲಿಂದ ಬಲಕ್ಕೆ 2 ಕಿ,ಮೀ.ಒಳಕ್ಕೆ ಇರುವ ಕೊಲ್ಲಿಬಚ್ಚಲು ಅಣೆಕಟ್ಟು ಸೌಂದರ್ಯ , ಗಂಭೀರತೆ ಮತ್ತು ನಿರ್ಸಗದ ಮಡಿಲುಗಳಿಂದ ಎಂಥವರನ್ನಾದರೂ ಆಕರ್ಷಿಸುತ್ತದೆ.

 • ಯಾಣದ ಹಾದಿಯಲ್ಲ ಸುಂದರ ಝರಿ-ತೊರೆ

  ಪುರಾಣ ಪ್ರಸಿದ್ಧಿ ಮತ್ತು ಪ್ರಾಕೃತಿಕ ವೈಚಿತ್ರದ ಕಲ್ಲು ಬಂಡೆಗಳಿಂದ ಯಾತ್ರಾ ಸ್ಥಳವಾಗಿ ಬದಲಾಗಿದೆ. ದಿನ ನಿತ್ಯ ಯಾಣಕ್ಕೆ ಭೇಟಿ ನೀಡುವವರು ಸಂಖ್ಯೆ ನಾಲ್ಕಂಕಿಯನ್ನು ಸಮೀಪಿಸುತ್ತಿದೆ. ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗಡಿಭಾಗದಲ್ಲಿ ಪಶ್ಚಿಮಘಟ್ಟದ ಘೋರ ಅರಣ್ಯದಲ್ಲಿ ಶಿರಸಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಯಾಣ ಪ್ರವಾಸವೇ ಒಂದು ವಿಶಿಷ್ಠ ಅನುಭೂತಿ. ಶಿರಸಿಯಿಂದ ಕುಮಟಾ ಮಾರ್ಗದ ಹೆದ್ದಾರಿಯಲ್ಲಿ ವಾನಳ್ಳಿ, ಮತ್ತಿಘಟ್ಟದ ಮೂಲಕ ಆಗಮಿಸಿದರೆ ರಸ್ತೆ ಮುಕ್ತಾಯಗೊಂಡ ಸ್ಥಳದಿಂದ ಸುಮಾರು 1 ಕಿ.ಮೀ. ನಡೆದುಕೊಂಡೇ ಸಾಗಬೇಕು. ಹಾಗೆ ಬರುವಾಗ ಅತಿವಿಶಿಷ್ಠ ಮರಗಿಡಗಳು, ಅಪರೂಪದ ಬೃಹತ್ ಬಳ್ಳಿಗಳು, ಅಮೂಲ್ಯ ಔಷಧ ಸಸ್ಯಗಳು ,ಅಲ್ಲಲ್ಲಿ ವಿಚಿತ್ರ ಕಲ್ಲು ಬಂಡೆಗಳು ಕಾಣುವುದು ಸಾಮಾನ್ಯ.

Latest in English

View all

Movies Today

View all

Our NGO News

View all

Photo Gallery

South Actress SANJJANAA Unedited Hot Exclusive Sexy Photos Set-23

Sanjjanna Galrani better known by her stage name Sanjjanaa, is an Indian model and film actress. She made her film debut in the Tamil film Oru Kadhal Seiveer (2006) and soon became noted after her controversial role in the Kannada film Ganda Hendathi (2006). Her supporting role in the 2008 Telugu film Bujjigadu directed by Puri Jagannadh brought her to limelight in the Telugu industry.

View all

ಸಾಹಿತ್ಯ

View all

ಚಲನಚಿತ್ರ

 • ನಾಯಕ-ನಾಯಕಿ
  ಅಮ್ಮಾಜಿಯಾಗಿ ಬಂದ ಅಂಬಿಕಾ… “ಪ್ರೀತಿಯಿಂದ”…ಮಾತಾಡಿದಾಗ…

  ಹೌದು..ಕನ್ನಡ ಕಿರುತೆರೆಗೆ ಇದೊಂದು ಸಂತಸದ ಸಂಗತಿ. ಹಕ್ಕಿಯೊಂದು ಮರಳಿ ಗೂಡಿಗೆ ಬಂದಂತಾಗಿದೆ. ಎಂಬತ್ತರ ದಶಕದ ಹಾಟ್ ಬೆಡಗಿ ಅಂಬಿಕಾಳನ್ನು ಮನೆಯಿಂದ ಕರೆತಂದು ಕಿರುತೆರೆಯ ಮುಂದೆ ನಿಲ್ಲಿಸಿದ್ದಾರೆ ನಿರ್ಮಾಪಕಿ ರೇಖಾರಾಣಿ. ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಇನ್ನು ನಿರ್ದೇಶಕ ಅಶೋಕ್ ಕಶ್ಯಪ್ ಪಕ್ಕ “ಸೂಪರ್” ಶೈಲಿಯಲ್ಲಿ ಅಂಬಿಕಾ ರಿ ಎಂಟ್ರಿಯನ್ನು ಚಿತ್ರಿಸಿ ಬೆರಗಾಗಿಸಿದ್ದಾರೆ. ಸುಮಾರು ೫೦ ಸಂಚಿಕೆಯ ನಂತರ ಅಂಬಿಕಾ ಪ್ರವೇಶ, ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪ್ರೀತಿಯಿಂದ” ಧಾರವಾಹಿಗೆ ಕಳಶವಿಟ್ಟಂತಾಗಿದೆ!
  ಮಲೆನಾಡಿನ ಮಡಿಲು ತೀರ್ಥಹಳ್ಳಿ ಸನಿಹದ ಕೋಟೆಗದ್ದೆಯಲ್ಲಿ “ಪ್ರೀತಿಯಿಂದ” ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಟೈಮ್ಸ್ ಪತ್ರಿಕೆಗೆಂದು ಈ ಲೇಖಕ ಸಂದರ್ಶನ ಮಾಡಿದಾಗ ..ಸೆಟ್‌ನಲ್ಲಿ ಒಂದಿನಿತೂ ಅಪ್‌ಸೆಟ್ ಆಗದೆ ಮೊನಚಾದ ಪ್ರೆಶ್ನೆಗಳಿಗೂ ಮನಬಿಚ್ಚಿ ಮಾತಾಡಿದಳು ಕಳೆದುಹೋಗಿದ್ದ ಅದೇ “ಚಳಿ ಚಳಿ” ಹಾಡಿನ ಅಂಬಿಕಾ…

 • ಕಿರುತೆರೆ
  ದಾರಿ ಬಿಡಿ ಬಂದಳು ಮೋಹಕ ತಾರೆ ಅಂಬಿಕಾ

  ಕನ್ನಡದ ಕಿರುತೆರೆಗೆ ಆಗಾಗ ಸ್ವೀಟ್‌ಶಾಕ್ ನೀಡುತ್ತಲೇ ಬಂದಿರುವ ಪ್ರಖ್ಯಾತ ನಿರ್ದೇಶಕ ಅಶೋಕ್ ಕಶ್ಯಪ್, ಕನ್ನಡದ ಕಲಾರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿ ಮೈಮರೆಯಲಿ ಎಂದು ಅಂಬಿಕಾ ಅವರನ್ನು ಪ್ರೀತಿಂದ ಕರೆತಂದಿದ್ದಾರೆ. ಸೂಪರ್ ಕ್ಯಾಮೆರಾಮನ್ ಅಶೋಕ್ ಹೊಸ ಕ್ಯಾಮೆರಾಗಳಿಗೆ ಹಳೆ ಸುಂದರಿಯನ್ನು ಪರಿಚುಸಿದ್ದಾರೆ.
  “ನಾನೇ ಅಂಬಿಕೆ….ನನ್ನ ಮೇಲಿರಲಿ ನಿಮಗೆ ನಂಬಿಕೆ…” ಎಂದು ಪ್ರೀತಿಯ “ಅಮ್ಮಾಜಿ”ಯಾಗಿ ಸುವರ್ಣವಾಹಿನಿಯಲ್ಲಿ ಪ್ರತಿರಾತ್ರಿ ಒಂಬತ್ತಕ್ಕೆ “ಪ್ರೀತಿಯಿಂದ” ಧಾರವಾಹಿಯಲ್ಲಿ ಅಂಬಿಕಾ ಕಾಣಿಸಿಕೊಳ್ಳುತ್ತಿದ್ದಾರೆ. “ನಿಮ್ಮಾಣೆ ನಾನು ಕಾಣೆಯಾಗಿಲ್ಲ,ಅಭಿನಯವೇ ನನ್ನ ಮನೆ” ಎಂದು ಕನ್ನಡಿಗರ ಪ್ರೀತಿಗೆ ಕನ್ನಡಿ ಹಿಡಿಯುತ್ತಿದ್ದಾರೆ.

 • ಕಿರುತೆರೆ
  ಈತ ಕೇಶವ ಚಂದ್ರ…. ಇವರು ಯಾರು ಅಂದ್ರಾ?

  ಕನ್ನಡದಲ್ಲಿ ಇತ್ತೀಚೆಗೆ ಧಾರವಾಹಿಗಳದ್ದೇ ಜಮಾನ, ಒಂದೆಡೆ ಚಿತ್ರಮಂದಿರಗಳು ಹೌಸ್‌ಪುಲ್ ಆಗದೆ ಖಾಲಿ ಹೊಡೆಯುತ್ತಿರುವಾಗ ಜಾಲಿಯಾಗಿ ಚಾನೆಲ್‌ಗಳನ್ನು ಬದಲಾಯಿಸುತ್ತಾ ಹತ್ತಾರು ಧಾರವಾಹಿಗಳಲ್ಲಿ ಹೊತ್ತುಕಳೆಯುತ್ತಿದ್ದಾರೆ ಹೌಸ್‌ವೈಫ್‌ಗಳು. ಇತ್ತ ಚಿತ್ರನಿರ್ಮಾಪಕರ ಜೇಬು ತುಂಬುತ್ತಿಲ್ಲ. ಅತ್ತ ಗೃಹಿಣಿಯರು ಧಾರವಾಹಿ ನೊಡುವ ಜಾಬು ಬಿಡುತ್ತಿಲ್ಲ, ಬೆಳ್ಳಿತೆರೆಯ ಚಿನ್ನದಂತಹ ನಟರೆಲ್ಲಾ `ಮನೆ ಬಿಟ್ಟು ಥಿಯೇಟರ್‌ಗೆ ಜನ ಬರುತ್ತಿಲ್ಲವಲ್ಲ ಎಂದು ಗೊಣಗಿ ತಾವೇ ಕಿರುತೆರೆಯ ಮೂಲಕ ಮನೆ ಮನೆ ಬಾಗಿಲು ತಟ್ಟುತ್ತಿದ್ದಾರೆ. ಸಣ್ಣದೊಂದು ಸನ್ನಿವೇಶವನ್ನೂ ವಿಸ್ತಾರವಾಗಿ ವಿಸ್ತರಿಸುವ… ಆದರೂ ಜನ ಅದನ್ನೇ ಮುಗಿಬಿದ್ದು ನೋಡುವಂತೆ ಮಾಡುವ ಈ ಭರಪೂರ ಧಾರವಾಹಿಗಳ ಹಿಂದೆ ಸಂಭಾಷಣೆಕಾರರ ಕೈಚಳಕ ಸಕತ್ತಾಗಿ ಅಡಗಿದೆ ಎಂಬುದೇ ಸ್ವಾರಸ್ಯಕರ ಸಂಗತಿ. ಬನ್ನಿ .. ಇಲ್ಲೊಬ್ಬರಿದ್ದಾರೆ. ಧಾರವಾಹಿಗಳಿಗೆ `ಸೈ ಎನಿಸುವಂತಹ ಸಂಭಾಷಣೆಗಳನ್ನು ಬರೆವ ಇವರ ಸಾಧನೆಗೆ ಒಮ್ಮೆ`ಕೈಮುಗಿದು ಕೃತಾರ್ಥರಾಗೋಣ

 • ಕಿರುತೆರೆ
  ಗುರುಮೂರ್ತಿಯವರ ಗುರುತರ ಸಾಧನೆ

  ಮಲೆನಾಡಿನ ಹಸಿರ ತಪ್ಪಲಿನಲ್ಲೊಂದು ಪುಟ್ಟ ಊರು ವರದಾಮೂಲ. ಸಾಗರ ತಾಲೂಕು ಕೇಂದ್ರದಿಂದ ಅನತಿ ದೂರ. ಈ ಭಾಗದಲ್ಲೆಲ್ಲಾ ಕೃಷಿಯೇ ಜೀವನಾಧಾರ. ಅಡಿಕೆ ಪ್ರಮುಖ ಬೆಳೆ. ತೆಂಗು,ಬಾಳೆ,ಏಲಕ್ಕಿ ಮುಂತಾದ ಉಪಬೆಳೆಗಳ ಆದಾಯದಿಂದಲೇ ನಡೆಯುವುದು ಸಂಸಾರ. ವರುಷದಲ್ಲಿ ಆರೆಂಟು ತಿಂಗಳು ಮಾತ್ರ ಕೃಷಿಕೆಲಸ. ಉಳಿದ ಬಿಡುವಿನ ಕಾಲದಲ್ಲಿ ಏನಾದರೊಂದು ಖುಷಿ ಕೆಲಸ,ಹವ್ಯಾಸ.ಆ ವೇಳೆಯಲ್ಲಿ ಕೆಲಸಕ್ಕೆ ಬಾರದ ಕೆಲಸ ಮಾಡುವವರೂ ಇದ್ದಾರೆ. ಆದರೆ ಕೆಲವರು ಮಾತ್ರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶೇಷಸಾಧನೆ ಮಾಡಿದವರಿದ್ದಾರೆ. ಆ ಪೈಕಿಯಲ್ಲಿ ಒಬ್ಬ ವಿಭಿನ್ನ ವ್ಯಕ್ತಿಯೇ ವರದಾಮೂಲದ ಗುರುಮೂರ್ತಿ. ಬನ್ನಿ ಈಗ ಗುರುಮೂರ್ತಿಯವರ ಗುರುತರ ಸಾಧನೆಗಳ ಬಗ್ಗೆ ಅರಿತು ಅಭಿನಂದಿಸೋಣ ಮನಸ್ಪೂರ್ತಿ. ಅವರಾಗಬಹುದು ನಮಗೆಲ್ಲಾ ಸ್ಪೂರ್ತಿ.

View all

ಸ್ಯಾಂಡಲ್ ವುಡ್

View all

ಚಿತ್ರವಿಮರ್ಶೆ

View all

ಸಂಗೀತ

View all

ರಂಗಭೂಮಿ

View all

ಕಥಾಕಣಜ

View all

ಸಂದರ್ಶನ

View all

ನೂರಾರು ಭಾವ

View all

ಭಲೇ… ಬಾಲಸುಬ್ರಹ್ಮಣ್ಯಮ್

View all

ಅಸಾಮಾನ್ಯರು

View all

ಅರಿವೇ ಗುರು

View all

ನಾಯಕ-ನಾಯಕಿ

View all

ಚಿತ್ರಸಂಗೀತ

View all

ನೃತ್ಯ

View all

ಕರಕುಶಲ

View all

ಕವಿಸಮಯ

View all

ವ್ಯಕ್ತಿ ಪರಿಚಯ

View all

ವಿಚಾರಲಹರಿ

View all

ಪುಟ್ಟ ತಂಗಿಗೆ

View all

ಕೃಷಿ-ಖುಷಿ

View all

ಪಾಕಶಾಲೆ

View all

ಕಿರುತೆರೆ

View all

ಹೊಸ ಪರಿಚಯ

View all

ಜಾನಪದ

View all

ಅವಧಾನ ಕಲೆ

View all

ಅಧ್ಯಯನ

View all

ಹೊತ್ತಿಗೆ ಹೊತ್ತು

View all

ದೇಶ-ವಿದೇಶ

View all

ಹಾಸ್ಯ ಬರಹ

View all

ಸಂಪ್ರದಾಯ

View all

ಉದ್ಯಾನವನ

View all

ಪ್ರವಾಸ

 • ಜಲಪಾತ
  ಜೋಗದ ಹಾದಿಯಲ್ಲಿ ಕೊಲ್ಲಿ ಬಚ್ಚಲು ಡ್ಯಾಂ

  ಜೋಗದ ಪ್ರವಾಸಕ್ಕೆ ಶಿವಮೊಗ್ಗ ಮೂಲಕ ಆಗಮಿಸುವ ಪ್ರವಾಸಿಗರಿಗೆ ಮೋಜು ಮಸ್ತಿ ನೀಡುವ ಪುಟ್ಟ ಅಣೆಕಟ್ಟು ಇಲ್ಲಿದೆ. ಶಿವಮೊಗ್ಗದಿಂದ ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸುಮಾರು 40 ಕಿ.ಮೀ.ದೂರ ಸಾಗಿದರೆ ಗಿಳಾಲಗುಂಡಿ ಎಂಬ ಪುಟ್ಟ ಊರಿದೆ. ಇಲ್ಲಿಂದ ಬಲಕ್ಕೆ 2 ಕಿ,ಮೀ.ಒಳಕ್ಕೆ ಇರುವ ಕೊಲ್ಲಿಬಚ್ಚಲು ಅಣೆಕಟ್ಟು ಸೌಂದರ್ಯ , ಗಂಭೀರತೆ ಮತ್ತು ನಿರ್ಸಗದ ಮಡಿಲುಗಳಿಂದ ಎಂಥವರನ್ನಾದರೂ ಆಕರ್ಷಿಸುತ್ತದೆ.

 • ಜಲಪಾತ
  ಯಾಣದ ಹಾದಿಯಲ್ಲ ಸುಂದರ ಝರಿ-ತೊರೆ

  ಪುರಾಣ ಪ್ರಸಿದ್ಧಿ ಮತ್ತು ಪ್ರಾಕೃತಿಕ ವೈಚಿತ್ರದ ಕಲ್ಲು ಬಂಡೆಗಳಿಂದ ಯಾತ್ರಾ ಸ್ಥಳವಾಗಿ ಬದಲಾಗಿದೆ. ದಿನ ನಿತ್ಯ ಯಾಣಕ್ಕೆ ಭೇಟಿ ನೀಡುವವರು ಸಂಖ್ಯೆ ನಾಲ್ಕಂಕಿಯನ್ನು ಸಮೀಪಿಸುತ್ತಿದೆ.
  ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗಡಿಭಾಗದಲ್ಲಿ ಪಶ್ಚಿಮಘಟ್ಟದ ಘೋರ ಅರಣ್ಯದಲ್ಲಿ ಶಿರಸಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಯಾಣ ಪ್ರವಾಸವೇ ಒಂದು ವಿಶಿಷ್ಠ ಅನುಭೂತಿ. ಶಿರಸಿಯಿಂದ ಕುಮಟಾ ಮಾರ್ಗದ ಹೆದ್ದಾರಿಯಲ್ಲಿ ವಾನಳ್ಳಿ, ಮತ್ತಿಘಟ್ಟದ ಮೂಲಕ ಆಗಮಿಸಿದರೆ ರಸ್ತೆ ಮುಕ್ತಾಯಗೊಂಡ ಸ್ಥಳದಿಂದ ಸುಮಾರು 1 ಕಿ.ಮೀ. ನಡೆದುಕೊಂಡೇ ಸಾಗಬೇಕು. ಹಾಗೆ ಬರುವಾಗ ಅತಿವಿಶಿಷ್ಠ ಮರಗಿಡಗಳು, ಅಪರೂಪದ ಬೃಹತ್ ಬಳ್ಳಿಗಳು, ಅಮೂಲ್ಯ ಔಷಧ ಸಸ್ಯಗಳು ,ಅಲ್ಲಲ್ಲಿ ವಿಚಿತ್ರ ಕಲ್ಲು ಬಂಡೆಗಳು ಕಾಣುವುದು ಸಾಮಾನ್ಯ.

 • ಪುಣ್ಯಕ್ಷೇತ್ರ
  ಆಯಿತು ಮನೆಯೇ ಮಠ…….ಅದೀಗ ಶ್ರೀಕ್ಷೇತ್ರಕುಂಟಿಕಾನಮಠ

  ಮಂಗಳೂರಿನಿಂದ ಕಾಸರಗೋಡಿಗೆ ಸಾಗುವ ಕಡಲತೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ೪೦ ಕಿಲೋಮೀಟರ್ ಪಯಣಿಸಿದರೆ ಕುಂಬಳೆ ಸಿಗುತ್ತದೆ.ಅಲ್ಲಿ ಎಡಕ್ಕೆ ತಿರುಗಿ ಬದಿಯಡ್ಕ ರಸ್ತೆಯಲ್ಲಿ ೧೪ ಕಿಲೋಮೀಟರ್ ಸಾಗಿದರೆ ಕನ್ಯಪ್ಪಾಡಿ ಎಂಬ ಒಂದು ಊರು ಸಿಗುತ್ತದೆ. ಅಲ್ಲಿ ಮತ್ತೆ ಎಡರಸ್ತೆಯಲ್ಲಿ ೪ ಕಿಲೋಮೀಟರ್ ಚಲಿಸಬೇಕು. ಪುಟ್ಟಪುಟ್ಟ ಗುಡ್ಡಗಳ ನಡುವೆ ದಟ್ಟ ಕಾಡಿನಲ್ಲಿ ಅಂಕುಡೊಂಕಾದ ದಾರಿ. ಹಸಿರ ತೇರಿನಲ್ಲಿ ತಂಪಾದ ಗಾಳಿ. ವಿಹಂಗಮನೋಟದೋಕುಳಿಯ ಸವಾರಿ. ವನರಾಶಿಯ ಮಡಿಲಲ್ಲಿ ವರದಾನದಿಯತೀರದಲ್ಲಿ ಕಟ್ಟಕಡೆಯದಾಗಿ ಸಿಗುತ್ತದೆ ಕುಂಟಿಕಾನಮಠ.

 • ಪುಣ್ಯಕ್ಷೇತ್ರ
  ಶ್ರೀಧರ ತೀರ್ಥ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ನಿತ್ಯ ಆಕರ್ಷಿಸುತ್ತಿದೆ

  ಸಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೇಂದ್ರದಿಂದ ಶ್ರೀಕ್ಷೇತ್ರ ಸಿಗಂದೂರನ್ನು ಸಂಪರ್ಕಿಸುವ ಮಾರ್ಗದಲ್ಲಿ ಕೇವಲ ೫ ಕಿ.ಮೀ.ದೂರದಲ್ಲಿರುವ ಶ್ರೀಧರ ತೀರ್ಥ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ನಿತ್ಯ ಆಕರ್ಷಿಸುತ್ತಿದೆ.

View all

ಆಧ್ಯಾತ್ಮ

ನವದುರ್ಗೆಯರೆ ನಿಮಗೆ ಸುಪ್ರಭಾತ (ನವದುರ್ಗೆಯರ ಮಹತ್ವವನ್ನು ಸಾರುವ ಸುಪ್ರಭಾತ)

ರಚನೆ-ಚಿನ್ಮಯ.ಎಂ.ರಾವ್ ಹೊನಗೋಡು (ನವದುರ್ಗೆಯರ ಗುಣಲಕ್ಷಣಗಳನ್ನು ಸೂಕ್ಷ್ಮವಾಗಿ ವಿವರಿಸುವ,ನವದುರ್ಗೆಯರ ಮಹತ್ವವನ್ನು ಸಾರುವ ಸುಪ್ರಭಾತ) ನವದುರ್ಗೆಯರೆ ನಿಮಗೆ ಸುಪ್ರಭಾತ ನವಶಕ್ತಿಯರೆ ನೀವು ನಿತ್ಯ ಶಾಂತ -ಪಲ್ಲವಿ ಬೆಳಗಾಯಿತೇಳಿ ಈ ಗಾನ ಕೇಳಿ ರವಿ ಎದ್ದ ಏಳಿ ಈ ಗಾನ ಕೇಳಿ-ಅನುಪಲ್ಲವಿ ಆದಿಯಲಿ ಪೂಜಿಪಳೆ ಶ್ರೀ ಶೈಲಪುತ್ರಿಯೆ ಪ್ರಥಮಸ್ವರೂಪ ನೀ ವೃಷಭವಾಹನಳೆ ನವರಾತ್ರಿಯಾರಂಭ ನಿನ್ನಿಂದ ತಾನೆ ಹೈಮವತಿ ಪಾರ್ವತಿ ಬೆಳಗಾಯಿತೇಳೆ-೧ ಎರಡನೆಯ ರೂಪದಲಿ ಬ್ರಹ್ಮಚಾರಿಣಿ ನೀನು ಶಿವನ ಪಡೆಯಲು ಘೋರ ತಪವನ್ನು ಗೈದೆ ತ್ಯಾಗ ವೈರಾಗ್ಯದ ಮತಿಯನ್ನು ಪಾಲಿಪಳೆ ವಿಶ್ವಜನನಿಯೆ ತಾಯೆ […]

View all
KannadaTimes is an online magazine since June, 2011 running as a part of Kannada Times Media World® a Trust founded by Chinmaya M Rao.

Kannada Times Media World (R.)
Honagodu, Hosur, Sagar, Shimoga
Karnataka, India - 577412
Call: +91 9449911590
           +91 9535585270

Email: info@kannadatimes.com

Flickr

  We accept the following payment:

         

  Newsletter