ಪಾಕಶಾಲೆ

“ವೃದ್ಧಿ”ಯಾಯ್ತು ಮಹಿಳಾ ಉದ್ಯಮಿಯ ಕನಸು..

VRUDDHI Old Mysore Region Nutritious Food Heritage

ಕರೋನ ಜಗತ್ತಿಗೆ ವಕ್ಕರಿಸಿ ಒಂದು ವರ್ಷವೇ ಕಳೆದಿದೆ.ನಾಗಾಲೋಟದಿಂದ ಓಡುತಿದ್ದ ಜಗತ್ತಿದೆ ಕರೋನ ಒಂದು ಬ್ರೇಕ್ ಹಾಕಿತು ಎಂಬುದು ಸತ್ಯ. ಕೊರೋನ ಜಗತ್ತಿನ ಆರ್ಥಿಕವಾಗಿ ಸಾಕಷ್ಟು ಕುಗ್ಗಿಸಿದೆ.ಸಾಕಷ್ಟು ಉದ್ಯಮಗಳು ನೆಲಕಚ್ಚಿವೆ ಕೊಟ್ಯಾಂತರ ಮಂದಿಯ ಬದುಕು ಬೀದಿಗೆ ಬಿದ್ದಿದೆ.

ಆದರೆ ಇಲ್ಲೊಬ್ಬರು ಕರೋನ ಬಂದ ಮೇಲೆ ಬದುಕು ಕಟ್ಟಿಕೊಂಡೆ ಎನ್ನುತ್ತಾರೆ.ಕರೋನ ಬಹಳಷ್ಟು ಜನರ ಪಾಲಿಗೆ ಶಾಪವಾದರೆ,ಒಂದಷ್ಟು ಮಂದಿಗೆ ವರವಾಗಿದೆ. ಕರೋನ ಹೇಗೆ ವರವಾಯ್ತು ಎಂಬುದನ್ನು ನೀವು ಮಹಿಳಾ ಉದ್ಯಮಿಯಾಗಿ ಪ್ರಯಾಣ ಶುರು ಮಾಡಿರುವ ಆಶಾ ಪ್ರಸನ್ನ ಶೆಟ್ಟಿ ಅವರ ಮಾತುಗಳಲ್ಲೇ ಕೇಳಿ..

* ಕರೋನದಿಂದ ಉದ್ಯಮಗಳು ನೆಲಕಚ್ಚಿದವು,ನೀವು ಉದ್ಯಮ ಪ್ರಾರಂಭಿಸಿದ್ದು ಹೇಗೆ..?

ಕರೋನ ಎಲ್ಲರಂತಯೇ ನಮ್ಮನ್ನು ಲಾಕ್ ಡೌನ್ ಮಾಡಿದ್ದು ನಿಜ.ಅದು ಒಂದು ಎಫೆಕ್ಟ್ ಆಗಲಿಲ್ಲ ನನಗೆ.ಏಕೆಂದರೆ ಆಗಷ್ಟೇ ಮಗ ಹುಟ್ಟಿದ್ದ ಬಾಣಂತಿಯಾದ ನನಗೆ ಒಂದು ವರ್ಷ ಸಹಜವಾಗಿಯೇ ಲಾಕ್ ಡೌನ್ ಇರಲಿತ್ತು.ಲಾಕ್ ಡೌನ್ ತೆರವಾಗುವ ಸಮಯಕ್ಕೆ ಮಗುವಿಗೆ ಆರು ತಿಂಗಳು ತುಂಬಿಹೋಯ್ತು.ಆ ಸಮಯಕ್ಕೆ ಮಕ್ಕಳಿಗೆ ತಿನಿಸುವ ಸರಿಹಿಟ್ಟು ತಯಾರಿಸುವ ಆಲೋಚನೆಯಲ್ಲಿದ್ದಾಗಲೇ ಫೇಸ್ ಬುಕ್ಕಿನಲ್ಲಿ ಕೆಲವೊಂದು ಹೋಮ್ ಪ್ರಾಡಕ್ಟ್ಸ್ ಮಾರಾಟ ಮಾಡುವುದನ್ನು ಗಮನಿಸಿದ್ದೆ.ಕರೋನ ಭಯದಲ್ಲಿ ಏನನ್ನು ತರಿಸಿಕೊಳ್ಳಲು ಮುಂದಾಗಲಿಲ್ಲ.ನಮ್ಮ ಮಗುವಿಗೆ ತಿನಿಸಲು ತಯಾರಿಸಿದ ಸರಿಹಿಟ್ಟು ಸರಿಯಾಗಿ HiT ಆಗಲು ಕಾರಣವಾಯ್ತು.

‘ ಸ್ಟೇಟಸ್ ಬದಲಿಸಿದ ವಾಟ್ಸಾಪ್ ಸ್ಟೇಟಸ್’

*ನಿಮ್ಮ ಮಗುವಿಗೆ ತಯಾರಿಸಿದ ಹಿಟ್ಟನ್ನು ಮಾರಲು ಪ್ರಾರಂಭಿಸಿದ್ರಾ..?

ಇಲ್ಲ ಮಾರಾಟದ ಆಲೋಚನೆಯೇ ಇರಲಿಲ್ಲ.ನಮ್ಮ ಹಿರಿಯರು ಮಾಡುತಿದ್ದ ಸರಿಹಿಟ್ಟಿನ ರೆಸಿಪಿಯ ಜೊತೆಗೆ ಒಂದಷ್ಟು Improve ಮಾಡಿ ಪುಡಿ ತಯಾರಿಸಿದ ವಿಧಾನವನ್ನ ವಾಟ್ಸಾಪ್ ಸ್ಟೇಟಸ್ ಹಾಕಿದ್ದೆ.ಕೆಲವರು ನಮ್ಮ ಮನೆಯ ಮಗುವಿಗೂ ಬೇಕು ಎಂದು ಕೇಳಲು ಪ್ರಾರಂಭಿಸಿದರು.ಒಂದಿಬ್ಬರಿಗೆ ಕಳಿಸಿಕೊಟ್ಟೆ.ಕ್ರಮೇಣ ಬೇಡಿಕೆ ಬರಲು ಪ್ರಾರಂಭವಾಯಿತು. ಆಗ ಆಲೋಚನೆ ಮಾಡಿದ್ದು ಈ ಪ್ರಾಡಕ್ಟ್ ಡೆವಲಪ್ ಮಾಡಬೇಕು ಎಂದು.

*ಓಕೆ.. ನೀವು ಬಾಣಂತಿಯಾಗಿದ್ಕೊಂಡೇ ಈ ಬಿಸಿನೆಸ್ ಸ್ಟಾರ್ಟ್ ಮಾಡಿದ್ರಿ..?

ಹೌದು.. ನಾನು ಅಂದ್ರೆ ನಮ್ ಯಜಮಾನ್ರು ನನ್ನ ಪ್ರಯೋಗದ ಮೇಲೆ ನಂಬಿಕೆಯಿಟ್ಟು ಸಪೋರ್ಟ್ ಮಾಡಿದ್ರು.ನಾನು ಹೊರಗೆಲ್ಲೂ ಹೋಗ್ತಿರಲಿಲ್ಲ ಪದಾರ್ಥಗಳನ್ನು ತರೋದು ,ಕೊರಿಯರ್ ಮಾಡೋದು ಇದೆಲ್ಲಾ ಅವರೇ ನೊಡ್ಕೊತಿದ್ರು.

* ನೀಮ್ಮ ಮಾರ್ಕೆಟಿಂಗ್ ಹೇಗೆ ನಡಿತಿತ್ತು..?

ಫೇಸ್‌ಬುಕ್‌ .. ಎಷ್ಟೋ ಜನ ಫೇಸ್‌ಬುಕ್‌ ಅಂದ್ರೆ ಟೈಂ ಪಾಸ್ ಅನ್ನೊಂಡಿರ್ತಾರೆ.ಆದ್ರೆ ನನ್ನ ವಿಷಯದಲ್ಲಿ ಫೇಸ್‌ಬುಕ್‌ ಒಂದು ಮಾಧ್ಯಮ. ನಮ್ಮ ವೃದ್ಧಿ ಪ್ರಾಡಕ್ಟ್ಸ್ ಬಗ್ಗೆ ಫೇಸ್‌ಬುಕ್‌ ನಲ್ಲೇ ನಾನು ಪ್ರಮೋಷನ್ ಮಾಡ್ತಿದ್ದೆ.
ಆರ್ಡರ್ ಬರ್ತಿತ್ತು.

* ಈಗ ಈ ವೃದ್ಧಿ ಪ್ರಾಡಕ್ಟ್ಸ್ ನ ಸ್ಟೇಜ್ ಏನಿದೆ..?

ಹೋಮ್ ಮೇಡ್ ಆಗಿದ್ದ ನಮ್ಮ ವೃದ್ಧಿ ಪ್ರಾಡಕ್ಟ್ಸ್ ಈಗ ವೃದ್ಧಿಯಾಗಿದೆ.FSSAI ಲೈಸೆನ್ಸ್ ಮಾಡ್ಸಿಕೊಂಡ್ವಿ.
ರಾಜ್ಯಾದ್ಯಂತ Distribution ಆಗ್ತಿದೆ.AMAZON, FLIP CART ಗಳಂತ ಈ ಕಾಮರ್ಸ್ ನಲ್ಲೂ ಲಭ್ಯವಿದೆ.
ಒಂದು ಕೆಜಿ ಮಾರಾಟದಿಂದ ಪ್ರಾರಂಭವಾದ ನಮ್ಮ ವೃದ್ಧಿ ಇವತ್ತು ಸಾವಿರ ಕೆಜಿ ಆರ್ಡರ್ ತೆಗೆದುಕೊಳ್ಳುವ ಹಂತಕ್ಕೆ ವೃದ್ಧಿ ಆಗಿದೆ.

* ಕೊಂಡವರು ಏನು ಹೇಳ್ತಾರೆ..?

ನಮ್ಮ Costumer ಒಮ್ಮೆ ಖರೀದಿ ಮಾಡಿದವರು ನಮಗೆ ರೆಗ್ಯುಲರ್ ಆಗಿಬಿಡ್ತಾರೆ.
ಒಳ್ಳೆ ರಿಜಲ್ಟ್ ಇದೆ.ಎಷ್ಟೋ ಜನ ಎಮೋಷನಲ್ ಆಗಿ ಫೋನ್ ಮಾಡಿ ಥ್ಯಾಂಕ್ಸ್ ಹೇಳ್ತಾರೆ.
ಯಾಕೆ ಅಂದ್ರೆ ಮಕ್ಕಳಿಗೆ ಊಟ ಮಾಡಿಸೋದೆ ಒಂದು ಸಾಹಸ.ಏನು ಕೊಟ್ರು ತನ್ನಲ್ಲ ಅನ್ನೊ ಸಂದರ್ಭಗಳಲ್ಲಿ ನಮ್ಮ ವೃದ್ಧಿ ಪೌಡರ್ ನ ಪ್ರಿಪೇರ್ ಮಾಡಿ ತಿನಿಸಲು ಶುರು ಮಾಡಿದಾಗ ಮಕ್ಕಳು ಹೊಟ್ಟೆ ತುಂಬ ತಿಂದು ನಕ್ಕಿವೆ.ಅಯ್ಯೋ ಎಷ್ಟೋ ಜನ ಕೊರಿಯರ್ ತಲುಪೋದು ಲೇಟಾದ್ರೆ ಜಗಳ ಮಾಡಿದ್ದಾರೆ.ನಮ್ಮ ಮಗು ಏನು ತಿನ್ತಿಲ್ಲ ಬೇಗ ಕಳ್ಸಿ ಅಂತ.ಅದೆಲ್ಲಾ ಖುಷಿ ಅನ್ಸತ್ತೆ.ಒಂದಷ್ಟು ಜನ ವಯಸ್ಸಾದವರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಪ್ರಾಡಕ್ಟ್ ಮಾಡಿದೆ.

* ಕೊನೆಯದಾಗಿ ಏನ್ ಹೇಳ್ತೀರಾ..?

ಇಲ್ಲಾ ಕೊನೆಯಲ್ಲ ಇದು ಪ್ರಾರಂಭ ಇ‌ನ್ನು ಮೇಲೆ ಹೇಳ್ತಾ ಇರ್ತೀವಿ.
ಆರುತಿಂಗಳು ತುಂಬಿದ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರು ಸೇವಿಸಬಹುದಾದ ಪೌಷ್ಟಿಕ ಆಹಾರದ ಪುಡಿ ನಮ್ಮಲ್ಲಿ ಲಭ್ಯವಿದೆ.
ದೇಶಾದ್ಯಂತ ಯಾವ ಜಾಗಕ್ಕಾದರೂ ನಮ್ಮ ಪ್ರಾಡಕ್ಟ್ಸ್ ಕಳುಹಿಸಿ ಕೊಡಲು ನಾವು ಸಿದ್ದವಿದ್ದೇವೆ.
ಜಗತ್ತು ಪ್ರಸ್ತುತ ಬಳಲುತ್ತಿರೋದೇ ಅಪೌಷ್ಟಿಕತೆಯಿಂದ.ನಮಗೆ ಯಾವ ಆಹಾರ ಸೇವಿಸಬೇಕು ಎಂಬ ತಿಳುವಳಿಕೆ ಇಲ್ಲ.ಹಾಗಾಗಿ ಜಗತ್ತಿನ ವೇಗಕ್ಕೆ ನಾವು ಪೌಷ್ಟಿಕತೆ ಕೊಡಲು ಸಿದ್ದವಿದ್ದೇವೆ.

ಆರೋಗ್ಯದ ವೃದ್ಧಿಗಾಗಿ ವೃದ್ಧಿ ಹೆಲ್ತ್ ಮಿಕ್ಸ್ ಸೇವಿಸಿ.

ಈ ಒಂದು ಜರ್ನಿಯಲ್ಲಿ ಕಾರಣರಾದ ಎಲ್ಲರಿಗೂ ಧನ್ಯವಾದಗಳು.

ಕನ್ನಡ ಟೈಮ್ಸ್ ತಂಡಕ್ಕೆ ವಿಷೇಶವಾಗಿ ಕೃತಜ್ಞತೆಗಳು..ನಮಸ್ಕಾರ…

ನಿಮ್ಮ ಊರಿನಲ್ಲಿ ವೃದ್ಧಿ ಪ್ರಾಡಕ್ಟ್ಸ್ ಮಾರಲು ಫ್ರಾಂಚೈಸಿಗಾಗಿ ಸಂಪರ್ಕಿಸಿ :

6360613057

8105381027

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker