ಸಂಪ್ರದಾಯ

ಸಂಭ್ರಮದಿಂದ ವರಮಹಾಲಕ್ಷ್ಮಿಯ ಹಬ್ಬವನ್ನಾಚರಿಸಿ ಅವಳ ಕೃಪೆಗೆ ಪಾತ್ರರಾಗಬೇಕು

ವರ ಕೊಡುವ ಮಹಾಲಕ್ಷ್ಮೀ

ಶುಕ್ಲೇ ಶ್ರಾವಣಿಕೇ ಮಾಸೆ ಪೂರ್ಣಿಮೋಪಾಂತ್ಯ ಭಾಗವೇ |ವರಲಕ್ಷ್ಮ್ಯಾ: ವ್ರತಂ ಕಾರ್ಯಂ ಸರ್ವಮಾಂಗಲ್ಯ ಸಿದ್ಧ0iÉುೀ || ಶ್ರಾವಣ ಮಾಸವೇ ಹಬ್ಬಗಳ ಮಾಸ. ಅದರಲ್ಲೂ ಶ್ರಾವಣ ಮಾಸದ ಎರಡನೇ ಶುಕ್ರವಾರ ಬಂತೆಂದರೆ ಹಿಂದೂ ಮಹಿಳೆಯರಿಗೆ ದೂರದೇಶದಲ್ಲಿರುವ ಮಗನೇ ಮನೆಗೆ ಬಂದಷ್ಟು ಖುಷಿಯಾಗುತ್ತದೆ. ಯಾಕೆಂದರೆ ಅಂದು ವರಮಹಾಲಕ್ಷ್ಮೀ ಹಬ್ಬದ ಸಡಗರ. ವರಮಹಾಲಕ್ಷ್ಮೀ ಹಬ್ಬ ಎಂದರೆ ಮಹಿಳೆಯರಿಗೆ ವಿಶೇಷ ರೀತಿಯ ಸಂಭ್ರಮವಿರುತ್ತದೆ. ಭಕ್ತಿಯಿಂದ ಏನು ವರ ಕೇಳಿದರೂ ಕರುಣಿಸುವ ಈ ತಾಯಿ0iÉುೀ ಮಹಾಲಕ್ಷ್ಮೀ. ಅದಕ್ಕೆ ಈ ಮಾತೆಗೆ ವರಮಹಾಲಕ್ಷ್ಮೀ ಎಂದು ಕರೆಯುವುದು.

ಪೌರಾಣಿಕ ಹಿನ್ನೆಲೆ: ಸುರರು ಮತ್ತು ಅಸುರರು ಸೇರಿ ಅಮೃತಕ್ಕಾಗಿ ವಾಸುಕಿಯನ್ನು ಮಂದರಪರ್ವತಕ್ಕೆ ಕಟ್ಟಿ ಕ್ಷೀರ ಸಮುದ್ರದಲ್ಲಿ ಕಡೆದಾಗ ವಿಷವು ಉದ್ಭವವಾಯಿತು. ಅದನ್ನು ಪರಶಿವನು ಕುಡಿದಾಗ ಪಾರ್ವತಿ ಬಂದು ಅವನ ಕಂಠದಲ್ಲೇ ಆ ವಿಷವನ್ನು ತಡೆದಿದ್ದರಿಂದಲೇ ಅವನು ನೀಲಕಂಠನಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಅದೇ ರೀತಿಯಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರ   ಶುಭ್ರವಾಗಿ ಶ್ವೇತವರ್ಣದ ವಸ್ತ್ರದಲ್ಲಿ ಅದೇ ಕ್ಷೀರ ಸಮುದ್ರದಲ್ಲಿ ಅದ್ಭವವಾದ ದೇವತೆ0iÉುೀ ಮಹಾಲಕ್ಷ್ಮೀ.

ಪೂಜೆಯ ವಿಧಾನ: ಶ್ರಾವಣ ಮಾಸದ ಎರಡನೇ ಶುಕ್ರವಾರ ಬೆಳಿಗ್ಗೆ ಬೇಗ ಎದ್ದು ನಿತ್ಯಶೌಚಾದಿಗಳನ್ನು ಮುಗಿಸಿ ಶುಭ್ರವಾಗಿ ಸ್ನಾನ ಮಾಡಿ ಗೋಮೂತ್ರ ಸೇವಿಸಿ ಪವಿತ್ರರಾಗಿ ಮಡಿವಸ್ತ್ರವಿದ್ದರೆ ಮಡಿವಸ್ತ್ರವನ್ನು ಅದಿಲ್ಲದಿದ್ದರೆ ತೊಳೆದ ವಸ್ತ್ರವನ್ನುಟ್ಟು ಪೀಠದಲ್ಲಿರುವ ದೇವರ ಪೂಜೆ ಮುಗಿಸಬೇಕು. ನಂತರ ದೇವರಪೀಠದ ಎದುರಿನಲ್ಲಿ ಅಷ್ಟ ದಳದ(ಎಂಟು ಎಲೆಯ)ರಂಗೋಲಿಯನ್ನು ಬಿಡಿಸಬೇಕು. ಅದರ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿಎರಡು ಕುಡಿ ಬಾಳೆಯನ್ನಿಟ್ಟು ಅದರ ಮೇಲೆ ಅಕ್ಕಿಯನ್ನು ಹಾಕಬೇಕು. ಬಾಳೆ ಎಲೆ ಇಲ್ಲದ ಸಂದರ್ಭದಲ್ಲಿ ಬಟ್ಟಲಿನಲ್ಲಿ ಅಕ್ಕಿ ಹಾಕಬೇಕು. ನಂತರ ಅಕ್ಕಿಯ ಮೇಲೆ ಒಂದು ಕಲಶವನ್ನಿಟ್ಟು ಅದರಲ್ಲಿ ಮಿಕ್ಕಾಲು ಭಾಗ ನೀರನ್ನು ತುಂಬಬೇಕು.ನೀರಿಗೆ ಒಂದು ಹೂ, ಸ್ವಲ್ಪ ಅರಿಶಿನ ಕುಂಕುಮ, ಅಕ್ಷತೆ, ಒಂದು ನಾಣ್ಯ, ಗಂಧವನ್ನು ಸೇರಿಸಬೇಕು. ಅದರಲ್ಲಿ ಐದು ಎಲೆಯಿರುವ ಮಾವಿನ ಟೊಂಗೆಯನ್ನಿಡಬೇಕು. ಅದರ ಮೇಲೆ ಊರ್ಧ್ವಮುಖವಾಗಿ ತೆಂಗಿನಕಾಯಿಯನ್ನು ಇಡಬೇಕು. ಕಾಯಿಯ ಮೇಲೆ ನೂತನ ವಸ್ತ್ರವನ್ನಿಡಬೇಕು. ನಂತರ ಹೂವಿನಿಂದ ಅಲಂಕರಿಸಬೇಕು. ಆಭರಣವಿದ್ದರೆ ಅದನ್ನೂ ಹಾಕಬಹುದು. ಅಲ್ಲೇ ಒಂಬತ್ತು ಎಳೆಗಳಿರುವ ದಾರವನ್ನಿಟ್ಟು ಶ್ರದ್ಧಾ ಭಕ್ತಿಯಿಂದ ಆ ಕಲಶವನ್ನೂ, ಆ ದಾರವನ್ನೂ ಪೂಜಿಸಬೇಕು.

ಕಮಲವಾಸಿನೈ ನಮ:, ರಮಾ0iÉುೈ ನಮ:,  ಸರ್ವಮಂಗಳ0iÀiï ನಮ:, ಮನ್ಮಥಜನನೈ ನಮ:, ವಿಷ್ಣುವಲ್ಲಭಾ0iÉುೈ ನಮ:, ಲೋಕಮಾತ್ರೇ ನಮ:, ಕ್ಷೀರಬ್ಧಿಕನ್ನಿಕಾ0iÉುೈ ನಮ:, ಭಾರ್ಗವೈ ನಮ:, ಪದ್ಮಹಸ್ತಾ0iÉುೈ ನಮ:, ತುಷ್ಟೈ ನಮ:, ಪುಷ್ಟೈ ನಮ:, ವರಮಹಾಲಕ್ಷ್ಮೈ ನಮ: ಎಂಬ ದ್ವಾದಶನಾಮದಿಂದ ಕುಂಕುಮದ ಅರ್ಚನೆ ಮಾಡಬೇಕು. ಅಷ್ಟೋತ್ತರ ಶತನಾಮಾವಳಿ (ದೇವಿಯ 108 ನಾಮಗಳು) ಗೊತ್ತಿದ್ದರೆ ಅಥವಾ ಪುಸ್ತಕವಿದ್ದರೆ ಅದರಿಂದಲೂ ಅರ್ಚನೆ ಮಾಡಬಹುದು. ದೇವಿಗೆ ವಿಶೇಷವಾಗಿ ಹಯಗ್ರೀವವನ್ನು ಮಾಡಿ ನೈವೇದ್ಯವಿಡಬೇಕು. ಲಕ್ಷ್ಮೀ ಹಯಗ್ರೀವ ಪ್ರಿಯಳು. ಹಯಗ್ರೀವದ ಜೊತೆಗೆ ಪಾಯಸ, ವಿಶೇಷ ಪದಾರ್ಥಗಳನ್ನು ನೈವೇದ್ಯವಾಗಿ ಇಡಬಹುದು.

ಪೂಜೆಯ ನಂತರದಲ್ಲಿ ಸುಮಂಗಲೆಯನ್ನು ಪೂಜಿಸಿದರೆ ಉತ್ತಮ. ಮನೆಗೆ ಬಂದಂತಹ ಮಗಳಿಗೆ ಬಾಗಿನ ನೀಡಿ ಹರಸಬೇಕು. ದೇವರಿಗೆ, ಕಲಶಕ್ಕೆ ಮಹಾಮಂಗಳಾರತಿ ಮಾಡಿ ಒಂಬತ್ತು ಎಳೆಯಿರುವ ಆ ದಾರವನ್ನು ಗಂಡನಿಂದ ಬಲ ಕೈ ಗೆ ಕಟ್ಟಿಸಿಕೊಳ್ಳಬೇಕು. ಆಮೇಲೇ ಗಂಡನ ಪಾದಗಳಿಗೆ ನಮಸ್ಕರಿಸಿ ಅಶೀರ್ವಾದ ಸ್ವೀಕರಿಸಬೇಕು.

ನಮಸ್ತೇಸ್ತು ಮಹಾಮಾ0iÉುೀ ಶ್ರೀಪೀಠೇ ಸುರಪೂಜಿತೆ |ಶಂಖ ಚಕ್ರ ಗದಾ ಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||(ಪೀಠದಲ್ಲಿ ಕುಳಿತು ದೇವತೆಗಳಿಂದಲೂ ಪೂಜಿಸಲ್ಪಡುವವಳೇ, ಹಸ್ತದಲ್ಲಿ ಶಂಖ ಚಕ್ರ ಗದೆಯನ್ನು ಹಿಡಿದವಳೇ, ಹೇ ಮಹಾತಾಯಿ0iÉುೀ! ನಿನಗೆ ನಮಸ್ಕಾರ ) ಎಂಬ ಶ್ಲೋಕವನ್ನು ಪಠಿಸಿ ಪ್ರಾರ್ಥಿಸಬೇಕು.

ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀ |ದಾಸೀ ಭೂತ ಸಮಸ್ತದೇವ ನಮಿತಾಂ ಲೋಕೈಕದೀಪಾಂಕುರಾಮ್ ||ಶ್ರೀಮನ್ಮಂದ ಕಟಾಕ್ಷಲಬ್ಧವಿಭವಾಂ ಬ್ರಹ್ಮೇಂದ್ರಗಂಗಾಧರಾಮ್ |ತಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್||

  (ಕ್ಷೀರಸಮುದ್ರ ರಾಜನ ಮಗಳಾದ, ಶ್ರೀರಂಗಧಾಮದ ಒಡೆಯಳಾದ, ಸಮಸ್ತ ದೇವರಿಂದ ಸೇವೆ ಮಾಡಲ್ಪಡುವ, ಜಗತ್ತಿಗೇ ದಾರಿ ದೀಪವಾದ, ಬ್ರಹ್ಮ-ಇಂದ್ರ-ಶಂಕರಾದಿಗಳಿಗೆ ತನ್ನ ಕೃಪಾ ಕಟಾಕ್ಷದಿಂದ ಸಕಲ ವೈಭವವನ್ನಿತ್ತ,ಮೂರುಲೋಕಗಳಿಗೂ ಮಾತೆಯಾದ, ಕಮಲಜೆ ಹಾಗೂ ಕಮಲದ ಮೇಲೇ ಕುಳಿತಿರುವ ಶ್ರೀ ಹರಿಯ ಪ್ರಿ0iÉುಯಾದ ಮಹಾಲಕ್ಷ್ಮಿ! ನಿನಗೆ ನಮಿಸುತ್ತೇನೆ) ಎಂದು ಪ್ರಾರ್ಥಿಸಬೇಕು.

 ಬಂಧು ಮಿತ್ರರ , ಮನೆಯವರ, ಹಿತೈಷಿಗಳ ಜೊತೆಗೂಡಿ ಖುಷಿ ಖುಷಿಯಾಗಿ ದೇವರ ಪ್ರಸಾದವನ್ನುಂಡು ಸಂಭ್ರಮದಿಂದ ವರಮಹಾಲಕ್ಷ್ಮಿಯ ಹಬ್ಬವನ್ನಾಚರಿಸಿ ಅವಳ ಕೃಪೆಗೆ ಪಾತ್ರರಾಗಬೇಕು.

Vinay Bhat Bidrakan

Contact: 94488 24575

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.