ಹೊಸಬರ ’ಬನ್ ಟೀ’ ಸಿನಿಮಾದ ಟ್ರೇಲರ್ ರಿಲೀಸ್…ಯುವ ಪ್ರತಿಭೆಗಳ ಕನಸಿಗೆ ಸಾಥ್ ಕೊಟ್ಟ ನಾಗತಿಹಳ್ಳಿ ಚಂದ್ರಶೇಖರ್

ಯುವ ಸಿನಿಮೋತ್ಸಾಹಿ ತಂಡವೊಂದು ಸೇರಿ ಮಾಡಿರುವ ಬನ್ ಟೀ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಶಯ ಕೋರಿದ್ದಾರೆ. ಆನ್ ಲೈನ್ ಎಡಿಟರ್ ಆಗಿ ಗುರುತಿಸಿಕೊಂಡಿರುವ ಖಾಕಿ ಸಿನಿಮಾ ಬರಹಗಾರದಲ್ಲಿ ಕೆಲಸ ನಿರ್ವಹಿಸಿರುವ ಉದಯ್ ಕುಮಾರ್ ಪಿಎಸ್ ಎರಡನೇ ಹೆಜ್ಜೆ ಇದು..ಕಾರ್ಮೋಡ ಸರಿದು ಎಂಬ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಉದಯ್ ಬನ್ ಟೀ ಎಂಬ ವಿಭಿನ್ನ ಶೀರ್ಷಿಕೆ ಮೂಲಕ ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಲು ಸಜ್ಜಾಗಿದ್ದಾರೆ

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಉದಯ್ ಹೇಳಿದ ಕಥೆ ಇಷ್ಟವಾಯ್ತು. ಹಂಚಿ ತಿನ್ನುವ ಅಗತ್ಯವಿರುವ ಈ ದಿನಗಳಲ್ಲಿ ಹಂಚಿ ಉಣ್ಣದೇ ಬರೀ ಬಾಚಿಕೊಳ್ಳುವ ಮನಸ್ಥಿತಿ, ಅದರಿಂದ ಉಂಟಾಗುವ ಸಾಮಾಜಿಕ ತೊಂದರೆಗಳ ಸುತ್ತ ಕಥೆ ಸಾಗುತ್ತದೆ. ಉದಯ್ ನಿರ್ಮಾಪಕರು ಸಿಕ್ತಾರೆ ಅಂತಾ ಫ್ಯಾಷನ್ ಗೋಸ್ಕರ್ ಸಿನಿಮಾ ಮಾಡಿಲ್ಲ. ಆಳವಾಗಿ ತಾಂತ್ರಿಕವಾಗಿ ಚಿತ್ರ ಮಾಡಿದ್ದಾರೆ. ತಮ್ಮದೇ ಟೆಂಟ್ ಸಿನಿಮಾ ಸೂಲ್ಕ್ ಪ್ರತಿಭೆಗಳು ಸೇರಿ ಬನ್ ಟೀ ಚಿತ್ರ ಮಾಡಿದ್ದು, ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ನಿರ್ದೇಶಕ ಉದಯ್ ಮಾತನಾಡಿ, ಬನ್ ಟೀ ನಿರ್ದೇಶಕನಾಗಿ ನನ್ನ ಎರಡನೇ ಸಿನಿಮಾ. ಆನ್ ಲೈನ್ ಎಡಿಟರ್ ಆಗಿ ಎಡಿಟರ್ ಆಗಿ ಕೆಲಸ ಮಾಡ್ತಿದ್ದು, ಬನ್ ಟೀ ಏಳು ವರ್ಷದ ಕನಸು. ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರ ಸುತ್ತುವಾಗ ಬನ್ ಟೀ ನಮ್ಮ ಊಟ.. ಟೈಟಲ್ ಡಿಫರೆಂಟಾಗಿದೆ. ಶೀರ್ಷಿಕೆ ವಿಭಿನ್ನವಾಗಿ ಇದ್ದರೇ ಕುತೂಹಲ ಮೂಡುತ್ತದೆ. ಟೈಟಲ್ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕಷ್ಟಪಟ್ಟು ಓದು ಅನ್ನುವ ಬದಲು ಇಟ್ಟಪಟ್ಟು ಓದು ಅನ್ನೋದನ್ನು ಯಾಕೆ ಹೇಳುವುದಿಲ್ಲ ಅನ್ನೋದೇ ಚಿತ್ರದ ಒಟ್ಟಾರೆ ಸಾರಾಂಶ ಎಂದು ತಿಳಿಸಿರು.

ನೈಜ ಘಟನೆಯಿಂದ ಸ್ಫೂರ್ತಿ ಪಡೆದು ರೂಪಿಸಿರುವ ಬನ್ ಟೀ ಸಿನಿಮಾಗೆ ಉದಯ್ ಕಥೆ ಬರೆದು ನಿರ್ದೇಶನದ ಜೊತೆಗೆ ಸಂಕಲನ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಮೌರ್ಯ, ತನ್ಮಯ್, ಉಮೇಶ್ ಸಕ್ಕರೆನಾಡು, ಶ್ರೀದೇವಿ, ನಿಶಾ, ಗುಂಡಣ್ಣ, ಸುನಿಲ್ ನಟಿಸಿರುವ ಈ ಚಿತ್ರಕ್ಕೆ ರಾಧಾಕೃಷ್ಣ ಬ್ಯಾನರ್ ಆರ್ ಕೇಶವ ನಿರ್ಮಾಣ ಮಾಡಿದ್ದು, ರಾಜರಾವ್ ಅಂಚಲ್ಕರ್ ಕ್ಯಾಮೆರಾ, ಪ್ರದ್ಯೋತನ್ ಸಂಗೀತ ಸಿನಿಮಾಕ್ಕಿದೆ. ಪ್ರಾಮಿಸಿಂಗ್ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಬನ್ ಟೀ ಸಿನಿಮಾವನ್ನು ಏಪ್ರಿಲ್ ತಿಂಗಳಾಂತ್ಯಕ್ಕೆ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.

Exit mobile version