ಸ್ವರಮೇಧಾ ಮ್ಯೂಸಿಕ್ ಫೆಸ್ಟಿವಲ್-2020-21-ಇಂದು ರಾಜರಾಜೇಶ್ವರಿನಗರದಲ್ಲಿ

ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ 2020-21 ನೆಯ ಶೈಕ್ಷಣಿಕ ವರ್ಷದ ಸಂಗೀತೋತ್ಸವವನ್ನು ಅಕ್ಟೋಬರ್ 15, ಶನಿವಾರದಂದು ರಾಜರಾಜೇಶ್ವರಿನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ  ಕಾಲೇಜಿನ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

“ಸ್ವರಮೇಧಾ ಮ್ಯೂಸಿಕ್ ಫೆಸ್ಟಿವಲ್ 2020-21“ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಒಟ್ಟು ನಾಲ್ಕು ಅವಧಿಗಳಲ್ಲಿ ವಿದ್ಯಾಲಯದ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ವಿಭಾಗದ ನೂರಾರು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯಲಿದೆ.

ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತಗಾರರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ವಿದ್ವಾನ್ ಟಿ ಆರ್ ರಂಗಸ್ವಾಮಿ ಅವರಿಗೆ “ಸ್ವರಮೇಧಾ ಸಂಗೀತರತ್ನ” ಪ್ರಶಸ್ತಿಯನ್ನೂ, ವಿದುಷಿ ಎನ್ ಶ್ರೀಮತಿ ಅವರಿಗೆ “ಸ್ವರಮೇಧಾ ಸಂಗೀತವಿಭೂಷಣ” ಪ್ರಶಸ್ತಿಯನ್ನೂ ಹಾಗೂ ಪ್ರಖ್ಯಾತ ಹಿನ್ನೆಲೆ ಗಾಯಕಿ ಚೈತ್ರ ಅವರಿಗೆ “ಸ್ವರಮೇಧಾ ಸಂಗೀತಶ್ರೀ” ಪ್ರಶಸ್ತಿಯನ್ನೂ ನೀಡಿ ಸನ್ಮಾನಿಸಲಾಗುತ್ತಿದೆ.

ಜನಪ್ರಿಯ ಸಮಾಜಸೇವಕ ಪಟ್ಟಣಗೆರೆ ಜಯಣ್ಣ, ಸುಪ್ರಸಿದ್ಧ ನಟ ವಿಜಯ್ ಕಾಶಿ, ಗೋಸೇವಕರಾದ ಮಹೇಂದ್ರ ಮುನ್ನೋಟ್, ಉದ್ಯಮಿ ಜಗನ್ನಾಥ ಹಾಗೂ ನಾರಾಯಣ ಬಾಬು, ರಾಜೇಶ್ ಬಾಬು, ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕ,ಪ್ರಾಂಶುಪಾಲಕ ಡಾ. ಚಿನ್ಮಯ ರಾವ್ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿರಲಿದ್ದಾರೆ.

ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಕಿರುಪರಿಚಯ :

ವಿಶ್ವದಾಖಲೆ ವಿಜೇತ ಯುವ ಸಂಗೀತ ನಿರ್ದೇಶಕ ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ. ಚಿನ್ಮಯ ಎಂ.ರಾವ್ ಅವರ ಪರಿಕಲ್ಪನೆಯಲ್ಲಿ 2015ರಲ್ಲಿ ಸಂಸ್ಥಾಪಿಸಲ್ಪಟ್ಟ ಸಂಸ್ಥೆಯೇ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಿವಿಧ ಶಾಖೆಗಳನ್ನು ಹೊಂದಿದ್ದು ಅಲ್ಲೆಲ್ಲಾ ಸ್ವತಹ ಚಿನ್ಮಯ ಎಂ.ರಾವ್ ಅವರೇ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಪ್ರಾಂಶುಪಾಲಕರಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ವಿಶೇಷವಾಗಿ ಯುವಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಯುವಪೀಳಿಗೆಯನ್ನು ಶಾಸ್ತ್ರೀಯ ಸಂಗೀತದ ಸಾಧನೆಯತ್ತ ಕೊಂಡೊಯ್ಯಲು ಸಂಸ್ಥೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

 

 

Exit mobile version