ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ರಾಷ್ಟ್ರೀಯ ಸಮಿತಿಯು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ

ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) - ರಾಷ್ಟ್ರೀಯ ಸಂಸ್ಥೆ ದಿನಾಂಕ: 27-08-2026 | ಬೆಂಗಳೂರು

ಕರ್ನಾಟಕ ರಾಜ್ಯದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಜೆ. ಶ್ರೀನಿವಾಸ ಮೂರ್ತಿರವರು ತಮ್ಮ ಎರಡು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸಮಿತಿಯು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದೆ.

ಕರ್ನಾಟಕ ರಾಜ್ಯದ ಎರಡನೇ ರಾಜ್ಯಾಧ್ಯಕ್ಷರಾಗಿ ವೇದಬ್ರಹ್ಮ ಶ್ರೀ ವೇಣುಗೋಪಾಲ್ ಕೆ.ಎಸ್. ರವರು ನಿಯೋಜನೆಗೊಂಡಿದ್ದಾರೆ.

ರಾಜ್ಯಾದ್ಯಂತ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕೆಳಗಿನ ನೇಮಕಾತಿಗಳನ್ನು ಮಾಡಲಾಗಿದೆ:

– ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ: ವೇದಬ್ರಹ್ಮ ಶ್ರೀ ರಾಜಣ್ಣ ಹುಲಿಯವರು

– ರಾಜ್ಯ ಉಪಾಧ್ಯಕ್ಷರಾಗಿ: ಶ್ರೀ ಸಂತೋಷ್ ಕುಮಾರ್ ದೇಶಕ್ ರವರು

ಇದರೊಂದಿಗೆ ರಾಜ್ಯದ ಹಲವು ಪದಾಧಿಕಾರಿಗಳು ಆಯ್ಕೆಗೊಂಡಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿ ಎರಡು ತಿಂಗಳೊಳಗೆ ಸಂಘಟನೆಯನ್ನು ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ.

ನೂತನ ಮಹಿಳಾ ಘಟಕಗಳ ರಚನೆ:

ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಮಹಿಳಾ ಘಟಕ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.

– ನೂತನ ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾಗಿ: ಶ್ರೀಮತಿ ಜಯಶ್ರೀ ಕನ್ನೂರ್ ರವರು ಅಧಿಕಾರ ವಹಿಸಿಕೊಂಡಿದ್ದಾರೆ.

– ನೂತನ ಕರ್ನಾಟಕ ರಾಜ್ಯ ಮಹಿಳಾ ಅಧ್ಯಕ್ಷರಾಗಿ: ಶ್ರೀಮತಿ ನಾಗರತ್ನ H.R. ರವರು ಆಯ್ಕೆಗೊಂಡಿದ್ದಾರೆ.

ಇದರ ಜೊತೆಗೆ ರಾಷ್ಟ್ರೀಯ ಯುವ ಘಟಕ ಮತ್ತು ರಾಜ್ಯ ಯುವ ಘಟಕಗಳು 31 ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ABAPKF ರಾಜ್ಯ ಮತ್ತು ರಾಷ್ಟ್ರ ಸಮಿತಿ ಈಗ ಸಂಪೂರ್ಣ ಸದೃಢವಾಗಿದೆ.

ಸಂಸ್ಥೆಯ ಮುಂದಿನ ಗುರಿ: ಸದ್ಯದಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಅನುದಾನಗಳು, ಸೌಲಭ್ಯಗಳು ಅರ್ಹ ಪುರೋಹಿತರು, ಅರ್ಚಕರು, ಅಡುಗೆ ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರಿಗೆ ತಲುಪಿಸುವಲ್ಲಿ ನಮ್ಮ ಸಂಸ್ಥೆ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ.

ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಪದಾಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಸ್ವಯಂಸೇವಕರಾಗಿ ಸಮಾಜಮುಖಿ ಕೆಲಸ ಮಾಡಲು ನಮ್ಮ ಸಂಸ್ಥೆಯನ್ನು ಬೆಂಬಲಿಸುತ್ತಿರುವ ಎಲ್ಲಾ ಯುವಕರು ಮತ್ತು ಮಹಿಳೆಯರಿಗೆ ಹೃದಯಪೂರ್ವಕ ಧನ್ಯವಾದಗಳು.

ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು: ಡಾ|| ಎಂ.ಬಿ. ಅನಂತಮೂರ್ತಿ – 9035016361

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು: ಡಾ|| ಬಿ.ಎನ್. ಮಹೇಶ್ ಕುಮಾರ್

ರಾಷ್ಟ್ರೀಯ ಕಾರ್ಯದರ್ಶಿಗಳು

ಶ್ರೀ ಮಂಜುನಾಥ ಭಟ್

ರಾಷ್ಟ್ರೀಯ ಯುವ ಅಧ್ಯಕ್ಷರು: ಶಶಾಂಕ್ ಶರ್ಮಾ ಬಿ.

ರಾಷ್ಟ್ರೀಯ ಮಹಿಳಾ ಅಧ್ಯಕ್ಷರು: ಶ್ರೀಮತಿ ಜಯಶ್ರೀ ಕನ್ನೂರ್

ರಾಷ್ಟ್ರೀಯ ಯುವ ಪ್ರಧಾನ ಕಾರ್ಯದರ್ಶಿಗಳು: ಶ್ರೀ ಗೋವಿಂದರಾಜ ದೇಶಪಾಂಡೆ

The National Committee of the Akila Bharatha asanghatita Purohita karmikara federation has taken a significant decision

Exit mobile version