‘ಗಜರಾಮ’ ನಾದ ರಾಜವರ್ಧನ್ ಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

‘ಮ್ಯಾಸಿವ್ ಸ್ಟಾರ್’ ರಾಜವರ್ಧನ್ ‘ಗಜರಾಮ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್ ವುಡ್ ಸಿನಿರಸಿಕರ ಮನಗೆದ್ದಿರುವ ಹ್ಯಾಂಡ್ಸಮ್ ನಟ ಇವರು. ಯುವ ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್ ಗಜರಾಮನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಡ್ತಿರೋ ‘ಗಜರಾಮ’ನಿಗೆ ಈಗ ನಾಯಕಿಯೂ ಸಿಕ್ಕಿದ್ದಾರೆ.

ರಾಜವರ್ಧನ್ ಜೊತೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ತಪಸ್ವಿನಿ ಪೂಣಚ್ಚ ಈಗ ‘ಗಜರಾಮ’ನ ಜೋಡಿಯಾಗಿದ್ದಾರೆ. ನಾಯಕಿಯಾಗಿ ತಪಸ್ವಿನಿಗಿದು ಎರಡನೇ ಸಿನಿಮಾ.

ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅನ್ನೋದು ನನ್ನ ಉದ್ದೇಶ ಆಗಿರಲಿಲ್ಲ. ಆದ್ರೆ ಇನ್ ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ನೋಡಿ ಚಿತ್ರತಂಡ ನನ್ನ ಸಂಪರ್ಕ ಮಾಡಿದ್ರು. ಕಥೆ ಕೇಳಿ ಇಷ್ಟ ಆಯ್ತು ಒಪ್ಪಿಕೊಂಡೆ ಇದೀಗ ‘ಗಜರಾಮ’ ಸಿನಿಮಾ ಅವಕಾಶ ಸಿಕ್ಕಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಂತರ ಸಾಕಷ್ಟು ಸಿನಿಮಾ ಆಫರ್ ಬರ್ತಿದೆ ಆದರೆ ಗಜರಾಮ ಸಿನಿಮಾ ಪಾತ್ರ ಇಷ್ಟ ಆಯ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ನಟಿ ತಪಸ್ವಿನಿ ಪೂಣಚ್ಚ.

ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಇರುವ ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಆಕ್ಷನ್ ಮಾಸ್ ಎಂಟಟೈನರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ್ಕಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.

 

Exit mobile version