ಸ್ಯಾಂಡಲ್ ವುಡ್

‘ಧರಣಿ ಮಂಡಲ ಮಧ್ಯದೊಳಗೆ’ ಟ್ರೇಲರ್ ರಿಲೀಸ್ – ಚಿತ್ರ್ಕಕೆ ಹ್ಯಾಟ್ರಿಕ್ ಹೀರೋ, ವಸಿಷ್ಠ ಸಿಂಹ ಸಾಥ್

ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಭರವಸೆಯ ಮುದ್ರೆ ಒತ್ತಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ರನ್ನು ಡಿಜಿಟಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವೇದಿಕೆಯಲ್ಲಿ ನಾಯಕ ನಟ ವಸಿಷ್ಠ ಸಿಂಹ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಡಿಸೆಂಬರ್ 2ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಟ್ರೇಲರ್ ಹೊತ್ತು ಬಂದ ಸಿನಿಮಾ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಸಿನಿಮಾದ ಕ್ಯೂರಿಯಾಸಿಟಿ ಹೊತ್ತ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು ಭರವಸೆ ಮೂಡಿಸಿದೆ. ಗುಲ್ಟು ಖ್ಯಾತಿಯ ನಟ ನವೀನ್ ಶಂಕರ್, ಐಶಾನಿ ಶೆಟ್ಟಿ ನಟಿಸಿರುವ ಈ ಚಿತ್ರವನ್ನು ಶ್ರೀಧರ್ ಶಿಕಾರಿಪುರ ನಿರ್ದೇಶನ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ವಸಿಷ್ಠ ಸಿಂಹ ಚಿತ್ರದಲ್ಲಿ ಪ್ರತಿಯೊಂದು ಅಂಶಗಳು ಕೂಡ ಗಮನ ಸೆಳೆಯುತ್ತಿದೆ. ಯಂಗ್ ಟೀಂ ಸೇರಿಕೊಂಡು ಇಷ್ಟು ಒಳ್ಳೆಯ ಸಿನಿಮಾವನ್ನು ಕಟ್ಟಿಕೊಟ್ಟಿದೆ ಅಂದ್ರೆ ತುಂಬಾ ಖುಷಿಯ ವಿಚಾರ. ಟ್ರೇಲರ್ ಬಹಳಾನೇ ಖುಷಿ ಕೊಡ್ತು. ಮ್ಯೂಸಿಕ್, ಡೈಲಾಗ್, ಕ್ಯಾಮೆರಾ ವರ್ಕ್ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

ಚಿತ್ರದ ನಿರ್ದೇಶಕ ಶ್ರೀಧರ್ ಶಿಕಾರಿಪುರ ಮಾತನಾಡಿ ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ನಮ್ಮ ಸುತ್ತಮುತ್ತ ಇರುವವರ ಕಥೆಯೇ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ. ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರದ ಸಿನಿಮಾವಿದು. ಬಾಕ್ಸಿಂಗ್ ನಲ್ಲಿ ಅಪಾರ ಆಸಕ್ತಿ ಇರುವ ಹುಡುಗನ ಬದುಕಿನಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆಯಲಾದ ಕಥೆ ಚಿತ್ರದಲ್ಲಿದೆ. ಪ್ರೀತಿ, ಸೆಂಟಿಮೆಂಟ್ ಎಳೆಯನ್ನೂ ಹೊತ್ತ ಈ ಚಿತ್ರ ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ ಎಂದು ತಿಳಿಸಿದ್ರು.

ಗುಳ್ಟು ನಂತರ ಕೇಳಿದ ಇಂಟ್ರಸ್ಟಿಂಗ್ ಸಬ್ಜೆಕ್ಟ್ ಇರುವ ಕಥೆ ಇದಾಗಿದೆ. ಚಿತ್ರದಲ್ಲಿ ಆದಿ ಪಾತ್ರವನ್ನು ನಿರ್ವಹಿಸಿದ್ದೇನೆ. ಬಾಕ್ಸಿಂಗ್ ನಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಹುಡುಗನ ಪಾತ್ರ. ಗುಳ್ಟು ಸಿನಿಮಾಗಿಂತ ಡಿಫ್ರೆಂಟ್ ಆದ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಡಿಸೆಂಬರ್ 2ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ನಾಯಕ ನಟ ನವೀನ್ ಶಂಕರ್ ತಿಳಿಸಿದ್ರು.

ನಿರ್ದೇಶಕರು ಕ್ರೈಂ ಡ್ರಾಮಾ ಸಿನಿಮಾ ಎಂದಾಗ ನಾನು ಸ್ವಲ್ಪ ಯೋಚನೆ ಮಾಡ್ದೆ, ಆದ್ರೆ ಕಥೆ ಕೇಳಿ ತುಂಬಾ ಖುಷಿ ಆಯ್ತು. ಇಲ್ಲಿವರೆಗೂ ನಾನು ಮಾಡಿರುವ ಪಾತ್ರಕ್ಕಿಂತ ಕಂಪ್ಲೀಟ್ ಡಿಫ್ರೆಂಟ್ ಆಗಿರುವ ಪಾತ್ರ ನಿರ್ವಹಿಸಿದ್ದೇನೆ. ಶ್ರೇಯ ಎನ್ನುವ ಪಾತ್ರವನ್ನು ನಿರ್ವಹಿಸಿದ್ದೇನೆ. ಡೋಂಟ್ ಕೇರ್ ಆಟಿಟ್ಯೂಡ್ ಇರುವ ಬೋಲ್ಡ್ ಹುಡುಗಿ ಪಾತ್ರ. ಈ ಚಿತ್ರದ ಭಾಗವಾಗಿರೋದಕ್ಕೆ ತುಂಬಾ ಖುಷಿ ಇದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಈ ಚಿತ್ರಕ್ಕೆ ಸಪೋರ್ಟ್ ಮಾಡಿ ಎಂದು ನಾಯಕ ನಟಿ ಐಶಾನಿ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಿರ್ಮಾಪಕ ಓಂಕಾರ್ ಮಾತನಾಡಿ ಸಿನಿಮಾ ನಿರ್ಮಾಣದ ಜೊತೆಗೆ ಡಿಸ್ಕೊ ಎಂಬ ನಟೋರಿಯಸ್ ಗ್ಯಾಂಗ್ ಸ್ಟಾರ್ ಪಾತ್ರ ಮಾಡಿದ್ದೇನೆ. ಸಿನಿಮಾದ ಸ್ಕ್ರೀನ್ ಪ್ಲೇ ತುಂಬಾ ಡಿಫ್ರೆಂಟ್ ಆಗಿದೆ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ ಆದ್ರಿಂದ ಸಿನಿಮಾ ನಿರ್ಮಾಣ ಮಾಡಲು ಒಪ್ಪಿಕೊಂಡೆ. ಚಿತ್ರದ ಪ್ರತಿ ವಿಭಾಗದಲ್ಲೂ ಎಲ್ಲರೂ ಪರಿಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ನೋಡಿ ಸಪೋರ್ಟ್ ಮಾಡಿ ಎಂದು ಕೇಳಿಕೊಂಡ್ರು.

ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ಡಿಸೆಂಬರ್ 2ರಂದು ಪ್ರೇಕ್ಷಕರ ಮನಗೆಲ್ಲಲು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.