ಕನ್ನಡವ್ಯಕ್ತಿ ಪರಿಚಯ

ಚಿತ್ರದುರ್ಗದ ವಿಶಿಷ್ಟ “ಕಂಪ್ಯೂಟರ್ ಜ್ಯೋತಿರ್ ವಿಜ್ಞಾನಿ ಡಾ.ಶ್ರೀಯುತ ಎಸ್. ಶ್ರೀಧರ ಸಮರ್ಥ : ವ್ಯಕ್ತಿ ಚಿತ್ರ/ಪರಿಚಯ

-ಡಾ.ಹರಿಹರ ಶ್ರೀನಿವಾಸರಾವ್, ಬಿ.ಎಸ್ಸಿ., ಡಿ.ಸಿ.ಇ.ಎಂ.ಎ. ಡಿ.ಲಿಟ್,ಹಂಪಿ ಕನ್ನಡ ವಿಶ್ವ ವಿದ್ಯಾಲಯ. ಬೆಂಗಳೂರು

ಹೆಸರು: ಡಾ. ಎಸ್.ಶ್ರೀಧರಮೂರ್ತಿ, ಸಮರ್ಥ

ತಂದೆ: ಎಸ್.ಶ್ರೀಕಂಠಯ್ಯ (ಸೊಸೈಟಿ ಶ್ರೀಕಂಠಯ್ಯ ನವರು)

ತಾಯಿ: ಶ್ರೀಮತಿ ವೆಂಕಟ ಲಕ್ಷ್ಮಮ್ಮ.

ವಿದ್ಯಾರ್ಹತೆ: ಡಾಕ್ಟರ್ ಆಫ್ ಆಲ್ಟರ್ ನೇಟಿವ್ ಮೆಡಿಸಿನ್, ಶ್ರೀಲಂಕಾ.

ಜನನ:                    ದೈವಾಧೀನ:

ಅನುಭವ ಮತ್ತು ಸಮಾಜ ಸೇವೆ: ಭಾರತೀಯ ಜ್ಯೋತಿರ್ವಿಜ್ಞಾನವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಂತ್ರಾಂಶಗಳನ್ನು ಬರೆದು ಅನೇಕ ರೋಗಗಳಿಗೆ ಉಪಚಾರವನ್ನು ನೀಡಿರುತ್ತಾರೆ. ಪ್ರಮುಖವಾಗಿ ಆಯುರ್ವೇದ, ಯೋಗ, ಪ್ರಾಸಂಗಿಕವಾಗಿ, ಹೋಮಿಯೋಪತಿ ಅವಶ್ಯವೆನಿಸಿದರೆ ಮಾತ್ರ ಅಲೋಪತಿ ವಿಧಾನಗಳನ್ನು ಬಳಸಿ ಇಂದಿನ ಯುವ ಜನಾಂಗವನ್ನು ಕಾಡುತ್ತಿರುವ, ಮನೋ ಮತ್ತು ದೈಹಿಕ ಬೇನೆಗಳಾದ ಡಿಪ್ರೆಷನ್, ಸಂತಾನ ಹೀನತೆ(Infertility Disorder),, ಚಿಕನ್ ಗೂನ್ಯ ಮುಂತಾದ ರೋಗ ನಿದಾನ ಮಾರ್ಗಗಳ ಮೂಲಕ ಗುಣ ಪಡಿಸುವುದರಲ್ಲಿ ಸಿದ್ಧ ಹಸ್ತರಾಗಿದ್ದವರು. ಮನಸ್ಸಿನ ನೆಮ್ಮದಿ ಕದಡಿ ಅನೇಕ ಅನೌಚಿತ್ಯ ರೋಗ ರುಜಿನಗಳಿಗೆ ಗುರಿಯಾಗÀುತ್ತಿದ್ದವರಿಗೆ ಯೋಗ, ಪ್ರಾಣಾಯಾಮ, ಮಂತ್ರ ಬೀಜಾಕ್ಷರಗಳ ಅರ್ಥವನ್ನು ಅವರವರ ಮನಸ್ಸು, ಹೃದಯಗಳಿಗೆ ಮುಟ್ಟುವಂತೆ ವೈಜ್ಞಾನಿಕ ಉದಾರಹಣೆಗಳ ಮೂಲಕ ಕೂಲಂಕಷವಾಗಿ ವಿಸ್ತರಿಸಿ ಹೇಳಿ ತಕ್ಷಣವೇ ಅವುಗಳ ಸುಲಭ ಸಾಧ್ಯ ರೀತಿಯನ್ನು ಕುಳಿತಲ್ಲಿಯೇ ಕಲಿಸುವುದು ಅವರ ವಿಶೇಷವಾಗಿತ್ತು. ಹೀಗಾಗಿ ಅವರ ಸಂಪರ್ಕಕ್ಕೆ ಬಂದ ಒಂದೆರಡು ಸಂದರ್ಶನಗಳಲ್ಲೇ ಮಾನಸಿಕ ಸಮಸ್ಯೆಗಳು ಮತ್ತು ದೈಹಿಕ ರೋಗಗಳು ಪರಿಹಾರವಾಗಿರುವುದನ್ನು ಕಂಡಿದ್ದೇನೆ.

ಆರ್ಥಿಕವಾಗಿ ಯಾವ ಫಲಾಪೇಕ್ಷೆಯನ್ನೂ ನಿರೀಕ್ಷಿಸದೇ, ಜಾತಿ, ಭೇದ, ಅಂತಸ್ತುಗಳ, ತಮ್ಮ ಸಮಯದ, ಆಹಾರದ ಪರಿವೆಯಿಲ್ಲದೇ, ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ರೋಗನಿದಾನವನ್ನು ನೀಡುತ್ತಿದ್ದುದರಿಂದ ಬೇಗ ಮನಸ್ಸಿನ ನೆಮ್ಮದಿಯನ್ನು ಮರಳಿ ಪಡೆಯುತ್ತಿದ್ದ ಫಲಾನುಭವಿಗಳಲ್ಲಿ ಹುಬ್ಬಳ್ಳಿ, ಕಲ್ಬುರ್ಗಿ, ಕಾರವಾರ, ಪಾವಗಡ, ಚಳ್ಳಕೆರೆ, ಕರ್ನಾಟಕ ಅಷ್ಟೇ ಅಲ್ಲ ಭಾರತದ ಅನೇಕ ಕಡೆಗಳಿಂದ ಚಿತ್ರದುರ್ಗಕ್ಕೆ ಬಂದು ಹೋಗುತ್ತಿದ್ದವರಲ್ಲಿ ಅನೇಕ ಖ್ಯಾತಿವೆತ್ತ ಡಾಕ್ಟರ್‍ಗಳು, ಇಂಜಿನೀಯರ್ ಗಳು, ವಕೀಲರು, ಪತ್ರಕರ್ತರು, ಟಿ.ವಿ.ಛಾನಲ್ ನವರೂ, ಎಲ್ಲಕ್ಕಿಂತ ಹೆಚ್ಚಾಗಿ ಅಸಂಖ್ಯ ಜನ ಸಾಮಾನ್ಯರೂ ಇದ್ದಾರೆ.

ಕನ್ನಡ,ಸಂಸ್ಕøತ, ಹಿಂದಿ, ತೆಲುಗು, ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆ ಇದ್ದುದರಿಂದ ಆಯಾ ಭಾಷೆಯಲ್ಲಿಯ “ಜನಪದ ಸೊಗಡನ್ನೂ “ ಬಿಡದೇ ತಮ್ಮ ಉತ್ತಮ ವಾಕ್ಪುಟತೆ, ತೀಕ್ಷ್ಣ ಜ್ಞಾಪಕ ಶಕ್ತಿ, ನೇರ ನುಡಿಗಳ ಮೂಲಕ ಅನೇಕ ಅಪರೂಪದ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದುದರಿಂದ ಸಹಜವಾಗಿಯೇ ಜೀವನದ ಎಲ್ಲ ಸ್ತರಗಳ, ವರ್ಗಗಳ ವಿಶ್ವಾಸಕ್ಕೆ, ಪರಸ್ಪರ ಸಹಾಯ ಸಹಕಾರಕ್ಕೆ ಕಾರಣವಾಗುತ್ತಿದ್ದರು.
ಜ್ಯೋತಿಷ್ಯ ವಿಜ್ಞಾನ, ವಾಸ್ತು, ಮುಂತಾದವುಗಳ ಸತ್ಯ ಹಾಗೂ ಒಳಗುಟ್ಟನ್ನು ನಿಸ್ವಾರ್ಥವಾಗಿ, ಕೆಲವೊಮ್ಮೆ ನಿಷ್ಠೂರ ಪ್ರಚಾರ ಮಾಡಲು ತಮ್ಮದೇ ಆದ ಪಠ್ಯ ಕ್ರಮಗಳನ್ನು ತಯಾರಿಸಿ, ದಾವಣಗೆರೆ, ಚಿತ್ರದುರ್ಗ ಪಟ್ಟಣಗಳಲ್ಲಿ ತರಗತಿಗಳನ್ನು ನಡೆಸಿ ಉಚಿತ ಶಿಕ್ಷಣ ತರಬೇತಿಯನ್ನು ನೀಡಿ ಅನೇಕ ಶಿಷ್ಯ ವೃಂದಗಳನ್ನು ಬೆಳೆಸಿರುತ್ತಾರೆ. ಪ್ರಕೃತಿ-ಪರಿಸರವನ್ನು ಉಳಿಸುವ ಉದ್ದೇಶದಿಂದ ಮುತ್ತುಗ, ದೇವದಾರು, ಔದುಂಬರ ಇತ್ಯಾದಿ ಔಷಧ ಸಸ್ಯಗಳ ಬೀಜಗಳನ್ನು ಅರಣ್ಯ ಇಲಾಖೆ, ಕೃಷಿ ಇಲಾಖೆಗಳಿಂದ ತರಿಸಿ ತಮ್ಮ ಮನೆಯಲ್ಲೇ ಅವುಗಳನ್ನು ಬೆಳೆಸಿ ಉಚಿತವಾಗಿ ಹಂಚುವ ಮರ ಬೆಳೆಸುವ ಹವ್ಯಾಸಿಗಳ ಗುಂಪನ್ನು ಸೃಷ್ಟಿಸಿದ್ದಾರೆ.

ಆಗಾಗ ಇಂಟರ್‍ನೆಟ್ ಸಂವಾದ, ಸಂಪರ್ಕಗಳ ಮೂಲಕ ಅಮೇರಿಕಾ, ಲಂಡನ್, ಶ್ರೀಲಂಕಾ, ಜರ್ಮನಿ ಮುಂತಾದ ವಿದೇಶಗಳ ಅನೇಕ ವಿದ್ವಾಂಸರೊಂದಿಗೆ ಸ್ನೇಹಸಂಪಾದಿಸಿದ್ದ ಇವರು ಆಗಾಗ ಕರ್ನಾಟಕದ ಪ್ರಮುಖ ಜ್ಯೋತಿಷ್ಯ ಶಾಸ್ತ್ರ ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ. ಶ್ರೀಯುತ ಪಾವಗಡ ಪ್ರಕಾಶ್, ಶತಾವಧಾನಿ ಡಾ.ಆರ್.ಗಣೇಶ್, ರಾಮನ್ ಜ್ಯೋತಿಷ್ಯ ಶಾಸ್ತ್ರ ಸಂಸ್ಥೆ ಬೆಂಗಳೂರು ಇದರ ಮುಖ್ಯಸ್ಥರಾದ ಡಾ.ವಾಸನ, ಖ್ಯಾತ ಜ್ಯೋತಿಷಿ ಶ್ರಿ ಶಂಕರ್, ರಾಜಾಜಿ ನಗರ, ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಜ್ಯೋತಿಷಿಗಳಾಗಿದ್ದ ದಿ.ಹಿತ್ಲಹಳ್ಳಿ ನಾಗೇಂದ್ರ ಭಟ್ಟರು, ಹರಿಹರದ ಜನಮಾನ್ಯ ಜ್ಯೋತಿಷಿ ಶ್ರೀ ದತ್ತಂಭಟ್ಟರು, ಹುಬ್ಬಳ್ಳಿಯ ಡಾ.ಶ್ರೀ. ಮಾರಿಹಾಳರು, ಖ್ಯಾತ ಲೇಖಕರು ಮತ್ತು ಆಯುರ್ವೇದ ತಜ್ಞರು ಡಾ.ಗುಂಡೂರಾವ್, ಮಾರೇನ ಹಳ್ಳಿ ಬೆಂಗಳೂರು, ಮುಂತಾದವರ ಆತ್ಮೀಯರಾಗಿದ್ದ ಇವರು ಬೆಂಗಳೂರಿನ ಖ್ಯಾತಿವೆತ್ತ ಸಂಸ್ಥೆಗಳಾದ ಭಾರತೀಯ ವಿದ್ಯಾಭವನ, ಮಿಥಿಕ್ ಸೊಸೈಟಿ ಮುಂತಾದರು ಏರ್ಪಡಿಸಿದ್ದ ವಿದ್ವತ್ ಸಭೆಗಳಲ್ಲಿ ಆಹ್ವಾನಿತರಾಗಿಯೂ ಸನ್ಮಾನವನ್ನು ಸ್ವೀಕರಿಸಿರುತ್ತಾರೆ.

ಶ್ರಿ ಶ್ರೀಧರ ಸಮರ್ಥ ಇವರ ನಿರ್ಮಾಣ, ಸ್ಪೂರ್ತಿ, ಮತ್ತು ಮಾರ್ಗ ದರ್ಶನದಲ್ಲಿ ಸಾಗರದ ಸಮೀಪದ ಹೊನಗೋಡಿನ ಯುವ ಸಂಗೀತ ವಿದ್ವಾನ್ ಹಾಗೂ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್, ಅವರ ಧ್ವನಿಯಲ್ಲಿ “ಶ್ರೀಗುರು ಸಂಹಿತಾ” ಎನ್ನುವ ಹೆಸರಿನ ವಿಶ್ವ ದಾಖಲೆಯ ಡಿವಿಡಿ ಒಂದನ್ನು ಮೇ, 24ನೇ ತಾರೀಖು ಬುಧವಾರದÀಂದು ಹರಿಹರದ ಶ್ರೀ ಸಮರ್ಥ ನಾರಾಯಣ ಮಹಾರಾಜರ ಆಶ್ರಮದಲ್ಲಿ ಅನಾವರಣಗೊಳ್ಳಲಿದೆ. 28 ಗಂಟೆ 8 ನಿಮಿಷ 38 ಸೆಮೆಂಡ್ ಗಳಷ್ಟು ವಿಸ್ತಾರವಾದ ಈ ಧ್ವನಿ ತಟ್ಟೆಯನ್ನು (ಡಿ.ವಿ.ಡಿ) ಸ್ವರ ಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕಕ್ ಅಕಾಡೆಮಿಯು ಹೊರತರುತ್ತಿದೆ.

ಸಹೃದಯರು ಈ ವಿಶಿಷ್ಟ ಧ್ವನಿ ಮುದ್ರಣವನ್ನು ಕೊಂಡು ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡು ಶ್ರಿ ನರಸಿಂಹ ಸರಸ್ವತಿ, ಶ್ರಿ ದತ್ತನ ಕೃಪೆಗೆ ಪಾತ್ರ ರಾಗ ಬೇಕೆಂದು ಈ ಮೂಲಕ ವಿನಂತಿಸುತ್ತೇನೆ. ಸಂಪರ್ಕ ದೂ.ವಾ. 9900682197

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.