ಸ್ಯಾಂಡಲ್ ವುಡ್

ವಿನಯ್ ನಟಿಸಿ ನಿರ್ದೇಶಿಸಿರುವ ‘ದಿ’ ಸಿನಿಮಾ ಟ್ರೇಲರ್ ರಿಲೀಸ್- ಮಾರ್ಚ್ ನಲ್ಲಿ ಸಿನಿಮಾ ತೆರೆಗೆ

‘ಕಡೆಮನೆ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ವಿನಯ್ ‘ದಿ’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ‘ದಿ’ ಮೂಲಕ ನಾಯಕ ಹಾಗೂ ನಿರ್ದೇಶಕನಾಗಿ ವಿನಯ್ ತೆರೆ ಮೇಲೆ ಬರ್ತಿದ್ದು ಇಂದು ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿದೆ. ‘ದಿ’ ಚಿತ್ರಕ್ಕೆ ವಿನಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ದಿಲದೇ ಸೆಟ್ಟೇರಿ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಟ್ರೇಲರ್ ರನ್ನು ಪ್ರೊಡಕ್ಷನ್ ಹುಡುಗರಿಂದ ಲಾಂಚ್ ಮಾಡಿಸಿ ಚಿತ್ರತಂಡ ಎಲ್ಲರ ಗಮನ ಸೆಳೆದಿದೆ.

ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಮುಕ್ಕಾಲು ಭಾಗ ಸಿನಿಮಾ ಕಾಡಿನಲ್ಲಿ ಚಿತ್ರೀಕರಣಗೊಂಡಿದೆ. ‘ದಿ’ ಕೋವಿಡ್ ನಲ್ಲಿ ರೆಡಿಯಾದ ಕಥೆ. ಸ್ನೇಹಿತರೆಲ್ಲರೂ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ‘ದಿ’ ಅಂದ್ರೆ ದಿವ್ಯ ಮತ್ತು ದೀಪಕ್. ಜೀವನದಲ್ಲಿ ಆಕಸ್ಮಿಕ ಘಟನೆಗಳು ಯಾವಾಗ ನಡೆಯುತ್ತೆ ಅನ್ನೋದು ಗೊತ್ತಾಗೋದಿಲ್ಲ. ವೀಕೆಂಡ್ ನಲ್ಲಿ ಔಟಿಂಗ್ ಗೆಂದು ಕಾಡಿಗೆ ಹೋದ ಕ್ಯೂಟ್ ಲವರ್ಸ್ ಜೀವನದಲ್ಲಿ ಏನೇನು ಆಗುತ್ತೆ, ಅವರಿಗೆ ಗೊತ್ತಿಲ್ಲದೇ ಅವರ ಜೀವನದಲ್ಲಿ ಇನ್ಯಾರ ಪ್ರವೇಶ ಆಗುತ್ತೆ, ಮುಂದೆ ಆ ಲವರ್ಸ್ ಏನ್ ಆಗ್ತಾರೆ ಅನ್ನೋದು ಈ ಚಿತ್ರದ ಜೀವಾಳ. ಚಿತ್ರದಲ್ಲಿ ಆರು ಮುಖ್ಯ ಪಾತ್ರಗಳಿವೆ. ಎಲ್ಲಾ ಪಾತ್ರಗಳಿಗೂ ಸಮನಾದ ಪ್ರಾಮುಖ್ಯತೆ ಇದೆ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ ಎಂದು ಚಿತ್ರದ ನಿರ್ದೇಶಕ ವಿನಯ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಾಯಕಿ ದಿಶಾ ಮಾತನಾಡಿ ಬಿ.ಸುರೇಶ್ ನಿರ್ದೇಶನದಲ್ಲಿ ಬಂದ ‘ದೇವರ ನಾಡಲ್ಲಿ’ ಸಿನಿಮಾ ಮಾಡಿದ್ದೆ ಅದಾದ ನಂತರ ಒಂದಿಷ್ಟು ಗ್ಯಾಪ್ ತೆಗೆದುಕೊಂಡೆ. ಮಾಸ್ಟರ್ಸ್ ಕೂಡ ಮುಗಿಸಿಕೊಂಡೆ. ಬಿಡುಗಡೆಗೆ ರೆಡಿಯಿರುವ ‘ಎಸ್. ಎಲ್. ವಿ’ ಸಿನಿಮಾದಲ್ಲಿ ನಟಿಸಿದ್ದೇನೆ. ವಿನಯ್ ಈ ಸಿನಿಮಾ ಬಗ್ಗೆ ಹೇಳಿದಾಗ ತುಂಬಾ ಇಂಟ್ರಸ್ಟಿಂಗ್ ಎನಿಸಿತು. ಇದು ಲವ್ ಸ್ಟೋರಿ ಸಿನಿಮಾ. ತುಂಬಾ ಸರಳವಾಗಿ ಸಾಗುತ್ತೆ, ಆದ್ರೆ ಹಲವು ತಿರುವುಗಳಿವೆ. ಇಡೀ ಸಿನಿಮಾ ಆಲ್ ಮೋಸ್ಟ್ ಕಾಡಲ್ಲಿ ಶೂಟ್ ಆಗುತ್ತೆ ಅಂದಾಗ ಈ ಸಿನಿಮಾ ಮಾಡಲೇ ಬೇಕು ಎಂದು ಒಪ್ಪಿಕೊಂಡೆ. ಎಲ್ಲರ ಜೊತೆ ನಟಿಸಿದ್ದು ತುಂಬಾ ಖುಷಿಕೊಟ್ಟಿದೆ. ಒಂದೊಳ್ಳೆ ಅನುಭವವನ್ನು ಸಿನಿಮಾ ನೀಡಿದೆ. ನಿಮ್ಮ ಸಹಕಾರ ಸಿನಿಮಾ ಮೇಲೆ ಇರಲಿ ಎಂದ್ರು.

ನಾಗೇಂದ್ರ ಅರಸ್ ಮಾತನಾಡಿ ಪೊಲೀಸ್ ಪಾತ್ರ ತುಂಬಾ ಮಾಡಿದ್ದೇನೆ ಆದ್ರೆ ಈ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರ ಮಾಡಿದ್ದೇನೆ. ಸ್ಟ್ರಿಕ್ಟ್ ಆಫೀಸರ್ ಪಾತ್ರ. ಒಂದೊಳ್ಳೆ ಅನುಭವವನ್ನು ಈ ಚಿತ್ರದ ಚಿತ್ರೀಕರಣ ನೀಡಿದೆ. ತುಂಬಾ ಖುಷಿ ಆಯ್ತು. ಈ ಕಥೆ ಡಿಫ್ರೆಂಟ್ ಆಗಿ ಹೋಗುತ್ತೆ. ಕ್ಯಾಮೆರಾ ಮ್ಯಾನ್ ಭರತ್ ತುಂಬಾ ಅದ್ಭುತವಾಗಿ ಸಿನಿಮಾ ಸೆರೆ ಹಿಡಿದಿದ್ದಾರೆ. ನಿರ್ದೇಶಕರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.

ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ‘ವಿಡಿಕೆ’ ಸಿನಿಮಾಸ್ ಬ್ಯಾನರ್ ನಡಿ ‘ವಿಡಿಕೆ’ ಗ್ರೂಪ್ ‘ದಿ’ ಚಿತ್ರವನ್ನು ನಿರ್ಮಾಣ ಮಾಡಿದೆ. ತುಮಕೂರು, ಮೈಸೂರು, ಮೂಡುಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಕೇರಳದಲ್ಲಿ ‘ದಿ’ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಲನ್ ಭರತ್ ಕ್ಯಾಮೆರಾ ವರ್ಕ್, ಯುಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ, ಕವಿರಾಜ್ ಹಾಗೂ ವಿನಯ್ ಸಾಹಿತ್ಯ, ಸಿದ್ದಾರ್ಥ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಚಿತ್ರಕ್ಕಿದೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.