ಸ್ನೇಹಲೋಕ ಕರೋಕೆ ಕ್ಲಬ್ ವತಿಯಿಂದ ವಿಶ್ವದಾಖಲೆ ವಿಜೇತ ಡಾ.ಚಿನ್ಮಯ ಎಂ.ರಾವ್ ಅವರಿಗೆ ಅಭಿನಂದನೆ

ಬೆಂಗಳೂರು : ಕಳೆದ ಭಾನುವಾರ, ಫೆಬ್ರವರಿ 16ರಂದು ನಗರದ ಬೆಂಗಳೂರು ಇಂಟರ್ ನ್ಯಾಷನಲ್ ಹೋಟೆಲಿನ ಸಭಾಂಗಣದಲ್ಲಿ ಸ್ನೇಹಲೋಕ ಕರೋಕೆ ಕ್ಲಬ್ ವತಿಂಯಿಂದ ನಡೆದ 118ನೆಯ ತಿಂಗಳ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ವಿಶ್ವದಾಖಲೆ ವಿಜೇತ ಡಾ.ಚಿನ್ಮಯ ಎಂ.ರಾವ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಟ ಅನಿರುಧ್, ಕೀರ್ತಿ ಕುಮಾರ್, ಜನಕ್ ಆರ್ ಮದನ್,ಹಿರಿಯ ಅಧಿಕಾರಿ ಖ್ಯಾತ, ಹಿನ್ನೆಲೆ ಗಾಯಕ ಡಾ.ಅನುಪ್ ದಯಾನಂದ್ ಸಾಧು ಹಾಗೂ ಸಂಗೀತ ಪ್ರೇಮಿಗಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಈಗಷ್ಟೇ ಚಿತ್ರೀಕರಣ ಪೂರೈಸಿರುವ “ನಾವವರಲ್ಲ” ಚಿತ್ರದ ಮೇಕಿಂಗ್ ಚಿತ್ರಣವನ್ನು ಪ್ರದರ್ಶಿಸಿ ಚಿತ್ರದ ನಿರ್ದೇಶಕ ಪರಶುರಾಮ್ ರಾಹುಲ್ ಹಾಗೂ ಯುವ ಗೀತಸಾಹಿತಿ ಮಂಜು ಅವರನ್ನೂ ವೇದಿಕೆಗೆ ಆಮಂತ್ರಿಸಿ ಅಭಿನಂದಿಸಲಾಯಿತು. ಆ ನಂತರದಲ್ಲಿ ಇದೇ ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿ ಒಂದು ಗೀತೆಯನ್ನು ಹಾಡಿರುವ ಯುವ ಹಿನ್ನೆಲೆ ಗಾಯಕ ಡಾ.ಅನುಪ್ ದಯಾನಂದ್ ಸಾಧು ಅದೇ ಗೀತೆಯನ್ನು ಸಮಾರಂಭದಲ್ಲಿ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ಜನಕ್ ಆರ್ ಮದನ್ ಅವರು ಹತ್ತು ವರ್ಷಗಳ ಹಿಂದೆಯೇ ಸಂಸ್ಥಾಪಿಸಿರುವ ಸ್ನೇಹಲೋಕ ಕರೋಕೆ ಕ್ಲಬ್ ಭಾರತದಲ್ಲಿ ಬಹಳ ಹಿಂದಿನಿಂದಲೇ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಏಕೈಕೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವಾರು ಹವ್ಯಾಸಿ ಗಾಯಕರನ್ನು ವೃತ್ತಿಪರ ಹಿನ್ನೆಗೆ ಗಾಯಕರನ್ನಾಗಿಸಿರುವ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಇಂತಹ ವಿಶಿಷ್ಠ ಸಂಸ್ಥೆಗೆ ಶುಭವಾಗಲಿ ಎಂದು ಈ ಸಂದರ್ಭದಲ್ಲಿ “ನಾವವರಲ್ಲ” ಚಿತ್ರದ ಸಂಗೀತ ನಿರ್ದೇಶಕ ಡಾ.ಚಿನ್ಮಯ ಎಂ.ರಾವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

Exit mobile version