ಯೋ$ಸೌ ತಪನ್ನುದೇತಿ | ಸ ಸರ್ವೇಷಾಂ ಭೂತಾನಾಂ ಪ್ರಾಣಾನಾದಾಯೋದೇತಿ|
ಮಾಮೇ ಪ್ರಜಾಯ ಮಾ ಪಶೂನಾಮ್| ಮಾ ಮಮ ಪ್ರಾಣಾನಾದಾಯೋದಗಾಃ ||
ಪ್ರತಿ ದಿನ ಸೂರ್ಯೋದಯವಾಗುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆವಾಗ ಆ ಸೂರ್ಯನು ಎಲ್ಲ ಪ್ರಾಣಿಗಳ ಪ್ರಾಣಗಳನ್ನು ತೆಗೆದುಕೊಂಡು ಉದಯಿಸುತ್ತಾನೆ. ಅಂದರೆ ಎಲ್ಲ ಪ್ರಾಣಿಗಳ ಆಯುಸ್ಸು ಕಡಿಮೆಯಾಗುತ್ತದೆ. ಹಾಗಾಗಿ ಈ ಕುರಿತು ಯಜಮಾನನು ಹೀಗೆ ಪ್ರಾರ್ಥಿಸುತ್ತಾನೆ-“ ಎಲೈ ಸೂರ್ಯದೇವನೇ, ನನ್ನ ಮಕ್ಕಳ ಮತ್ತು ನನ್ನ ಸಾಕುಪ್ರಾಣಿಗಳ ಆಯುಸ್ಸನ್ನು ಕಡಿಮೆ ಮಾಡಬೇಡ. ಹಾಗೆಯೇ ನನ್ನ ಮಡದಿ ಮೊದಲಾದವರ ಆಯುಸ್ಸನ್ನೂ ತೆಗೆದುಕೊಂಡು ಹೋಗಬೇಡ. ನಮ್ಮ ಆಯುಷ್ಯದ ಸಂವತ್ಸರ, ತಿಂಗಳು, ಪಕ್ಷ, ದಿವಸಗಳನ್ನು ಕೂಡ ಕಡಿಮೆಯಾಗುವಂತೆ ಮಾಡಬೇಡ. ನಮ್ಮೆಲ್ಲರಿಗೂ ದೀರ್ಘಾಯುಸ್ಸನ್ನು ಕೊಡು.
ಇಲ್ಲಿ ಮನೆಯ ಯಜಮಾನ ತನ್ನ ಮಡದಿ ಮಕ್ಕಳಿಗಾಗಿ ಮಾತ್ರವಲ್ಲ ತನ್ನ ಸಾಕುಪ್ರಾಣಿಗಳ ಪರವಾಗಿಯೂ ಭಗವಾನ್ ಸೂರ್ಯನಲ್ಲಿ ಪ್ರಾರ್ಥಿಸುತ್ತಾನೆ. ಆಯುಸ್ಸನ್ನು ಕಡಿಮೆ ಮಾಡಬಾರದೆನ್ನುವ ಕಳಕಳಿಯ ಪ್ರಾರ್ಥನೆಯೊಂದಿಗೆ ಎಲ್ಲರಿಗೂ ದೀರ್ಘಾಯುಸ್ಸನ್ನು ಕೊಡಲು ಪ್ರಾರ್ಥಿಸುವುದು, ಸಮಷ್ಟಿ ಹಿತದ ಪ್ರಾರ್ಥನೆಯಾಗಿದೆ ಎಂಬುದು ಈ ಪ್ರಾರ್ಥನೆಯ ವಿಶೇಷ.
(ಸೂರ್ಯೋದಯದಿಂದ ಸೂರ್ಯ ನೆತ್ತಿಗೆ ಬರುವ ಮೊದಲು ಹೇಳುವ ಮಂತ್ರ. –“ ಅರುಣಪ್ರಶ್ನಃ “.)
ಸಂಗ್ರಹ ಜಿ. ಟಿ. ಶ್ರೀಧರ ಶರ್ಮಾ,
ವಿಜಯನಗರ ಸಾಗರ-577401
ದೂರವಾಣಿ:- 9480473568.
