‘ರೈಸಿಂಗ್’ ಸ್ಟಾರ್ ರಂಜಿತ್ !

ಬಣ್ಣದ ಜಗತ್ತಿನಲ್ಲಿ ಈಗಷ್ಟೇ ಉದಯಿಸುತ್ತಿರುವ ನಟರುಗಳ ಪೈಕಿ ರೈಸಿಂಗ್ ಸ್ಟಾರ್ ರಂಜಿತ್ ಕುಮಾರ್ ಕೂಡ ಒಬ್ಬರು. ಮಾಂಜ್ರಾ ಸಿನಿಮಾದ ಮೂಲಕ ನಾಯಕನಟನಾಗಿ ಕಣಕ್ಕಿಳಿದ ಈ‌ ಹೀರೋ ಈಗಷ್ಟೇ ಅರಳಿದ ಹೂಗಳು ಸಿನಿಮಾ ಮುಗಿಸಿದ್ದಾರೆ. ಸೈಲೆಂಟ್ ಶಿವನಾಗಿ ಸುಂಟರಗಾಳಿ ಎಬ್ಬಿಸಬೇಕು‌ ಅಂದ್ಕೊಡಿದ್ದೇನೆ. ಅದಕ್ಕಾಗಿ ತಯ್ಯಾರಿ‌ನೂ ಮಾಡ್ತಿದ್ದೇನೆ ಎನ್ನುವ ರಂಜಿತ್, ಪ್ರೇಕ್ಷಕ ಮಹಾಷಯರು ನನ್ನ ಗುರ್ತಿಸಬೇಕು. ಅವರ ಸಹಾಯ ಸಹಕಾರ ಇಲ್ಲದೇ ನನ್ನಿಂದೇನು‌ ಮಾಡೋಕೆ‌ ಆಗಲ್ಲ‌ ಅಂತಿದ್ದಾರೆ.‌

ರಂಜಿತ್ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ. ಬಾಲ್ಯದಲ್ಲೇ ಮಾಯಾಲೋಕದ ಸೆಳೆತಕ್ಕೆ ಸಿಲುಕಿದವರು. ಕಲಾವಿದನಾಗಬೇಕು ಅನ್ನೋ ಕನಸಿನ ಬೆನ್ನೇರಿ ಬೆಂಗಳೂರಿಗೆ ಬಂದಿಳಿದ ಇವರು, ಹೆಚ್ಚು ಕಮ್ಮಿ ಒಂದು ದಶಕಗಳಿಂದ ಗಾಂಧಿ ನಗರದಲ್ಲಿ ಸೈಕಲ್ ಹೊಡೆದಿದ್ದಾರೆ.ಜೂನಿಯರ್ ಆರ್ಟಿಸ್ಟ್ ಆಗಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೆಲಸ ಮಾಡಿರೋ ರಂಜಿತ್,ವಿಷ್ಣುದಾದ ಅಭಿನಯದ ಬಳ್ಳಾರಿ ನಾಗ ಸಿನಿಮಾದಲ್ಲಿ ಒಂದೇ ಒಂದು ಸೀನ್ ನಲ್ಲಿ ಮಿಂಚಿ ಮರೆಯಾಗಿದ್ದಾರೆ

ಈ ಬಣ್ಣದ ಲೋಕವೇ ಹಾಗೇ ಒಮ್ಮೆ ಮೋಹದ ಸೆಳತಕ್ಕೆ ಒಳಗಾದರೇ ಮುಗೀತು.‌ಅಷ್ಟು ಸುಲಭವಾಗಿ ಯಾರೂ ಬಿಟ್ಟು ಹೋಗಲ್ಲ. ಹಾಗೆಯೇ ರಂಜಿತ್ ಕುಮಾರ್ ಕೂಡ ಕನ್ನಡ ಚಿತ್ರರಂಗದಲ್ಲಿ 10 ವರ್ಷ ಕಳೆದರೂ, ಅವರು ಕಂಡ ಕನಸುಗಳು ಈಡೇರದಿದ್ದರೂ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಗಾಂಧಿನಗರದಲ್ಲಿ ದೊಡ್ಡ ಕಟೌಟ್ ಹಾಕಿಸಿಕೊಳ್ಳೋಕೆ, ಅಭಿಮಾನಿ ದೇವರುಗಳಿಂದ ಜೈಕಾರ ಹಾಕಿಸಿಕೊಳ್ಳೋಕೆ ಹಪಹಪಿಸುತ್ತಿದ್ದಾರೆ. ಅದೇ ಹಪಹಪಿತನದಿಂದ ಸಿನಿಮಾ ಕೃಷಿಯನ್ನ ಮುಂದುವರೆಸಿದ್ದಾರೆ.

ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ದಶಕಗಳಿಂದ ಬೆವರು ಸುರಿಸ್ತಿರೋ ರೈಸಿಂಗ್ ಸ್ಟಾರ್ ನ ಕಲಾಸರಸ್ವತಿ ಕೈ ಹಿಡಿಯಲಿ. ಮುತ್ತಿನ ಥೇರಲ್ಲಿ‌ ಮೆರವಣಿಗೆ ಮಾಡಲಿ ಅನ್ನೋದೇ ನಮ್ಮ ಆಶಯ.

Rising Star Ranjeet Photos Set-1

Exit mobile version