ದೇಶ-ವಿದೇಶ

ಕಸಾಪ ಚುನಾವಣೆ : ಸಿ.ಕೆ ರಾಮೇಗೌಡ ಅವರಿಗೆ ಉತ್ತರ ಕರ್ನಾಟಕದಲ್ಲಿ ಭಾರಿ ಬೆಂಬಲ

ಮೇ ೯ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಖಾಡಕ್ಕೀಳಿಯುತ್ತಿರುವ ಘಟಾನುಘಟಿಗಳ ಸಂಖ್ಯೆ ಸದ್ಯ ೯ಕ್ಕೆ ಏರಿಕೆಯಾಗಿದೆ. ಇನ್ನೂ ನಾಮಪತ್ರ ಸಲ್ಲಿಸುವವರೂ ಹಲವರಿದ್ದಾರೆ ಎಂಬ ಸುದ್ದಿಯೂ ಇದೆ. ಸುಮಾರು ತಿಂಗಳುಗಳ ಹಿಂದೆಯೇ ಚುನಾವಣೆ ಪ್ರಚಾರಾರ್ಥವಾಗಿ ಈಡೀ ಕರ್ನಾಟಕವನ್ನು ಸುತ್ತುವರೆದ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ.ಕೆ. ರಾಮೇಗೌಡ ಅವರು ಈವರೆಗೂ ತಾವು ಕನ್ನಡ ನಾಡು-ನುಡಿಗೆ ಶ್ರಮಿಸಿದ ಮತ್ತು ಮುಂದೆ ಪರಿಷತ್ತಿನಲ್ಲಿ ಮಾಡುವ ಕಾರ್ಯಗಳ ಕುರಿತಾದ ವಿವರವನ್ನು ಪರಿಷತ್ತಿನ ಸದಸ್ಯ ಬಂಧುಗಳ ಮುಂದಿಡುತ್ತಾ ಮತಕ್ಕಾಗಿ ಭಿನ್ನವಾಗಿ ವಿನಂತಿಸಿಕೊಂಡಿದ್ದಾರೆ.

ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಗುಲ್ಬರ್ಗಾ, ವಿಜಯಪುರ, ಬಾಗಲಕೋಟೆ ಮತ್ತು ಇತ್ಯಾದಿ ಜಿಲ್ಲೆಗಳಲ್ಲಿ ಸಾಹಿತಿಗಳು, ಸಂಘಟಕರು ಸಿ.ಕೆ.ರಾಮೇಗೌಡರಿಗೆ ಹಲವು ಬೇಡಿಕೆಗಳನ್ನಿಟ್ಟು ಅವುಗಳನ್ನು ಈಡೇರಿಸುವ ವಿಶ್ವಾಸ ಹೊಂದಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಸ್ವಯಂಪ್ರೇರಿತರಾಗಿ ಭಾರಿ ಪ್ರಚಾರದಲ್ಲಿ ತೊಡಗಿಕೊಂಡಿರುತ್ತಾರೆ. ಅದರಂತೆ ಧಾರವಾಡದ ಯುವ ಸಾಹಿತಿ ಮತ್ತು ಸಂಘಟಕ ಸೋಮು ರೆಡ್ಡಿಯವರು ಕೂಡ ಧಾರವಾಡ ಜಿಲ್ಲಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ.

’ಕನ್ನಡ ಜನಶಕ್ತಿ ಕೇಂದ್ರ ಎನ್ನುವ ಸಂಸ್ಥೆಯನ್ನು ತೆರೆಯುವ ಮೂಲಕ ಸುಮಾರು ನಾಲ್ಕು ದಶಕಗಳ ಕಾಲ ಒಬ್ಬ ಪ್ರಾಮಾಣಿಕ, ನಿಷ್ಠಾವಂತ ಸಂಘಟಕನಾಗಿ ಸಿ.ಕೆ.ರಾಮೇಗೌಡ ಅವರು ಕನ್ನಡಕ್ಕಾಗಿ ದುಡಿಯುತ್ತಾ ಬಂದಿರುತ್ತಾರೆ. ಕನ್ನಡ ಪರವಾಗಿ ಹಲವು ಚಳುವಳಿ, ಹೋರಾಟಗಳಲ್ಲಿ ಅನೇಕ ಹಿರಿಯ ಸಾಹಿತಿ, ಸಂಘಟಕರುಗಳೊಂದಿಗೆ ಅವರು ಭಾಗಿಯಾಗಿರುವ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಕನ್ನಡದ ಮೇಲಿರುವ ಅವರ ಕಾಳಜಿ ಮತ್ತು ಜವಾಬ್ದಾರಿ ನನ್ನಂಥ ಅನೇಕ ಸಾಹಿತ್ಯ ಸಂಘಟಿಕರ ಮನಸ್ಸು ಜಾಗೃತವಾಗುವಂತೆ ಮಾಡುತ್ತದೆ. ಸಮಗ್ರ ಕರ್ನಾಟಕವನ್ನು ದೃಷ್ಠಿಯಲ್ಲಿಟ್ಟುಕೊಂಡು ಕನ್ನಡವನ್ನು ಮತ್ತು ಕನ್ನಡ ಸಾಹಿತ್ಯವನ್ನು ಉಚ್ಛ ಸ್ಥಿತಿಗೆ ಒಯ್ಯಲು ರಾಮೇಗೌಡರು ಸಮರ್ಥ ಅಭ್ಯರ್ಥಿಯಾಗಿರುವದರಿಂದ ನಮ್ಮ ಜಿಲ್ಲೆಯ ಸಂಪೂರ್ಣ ಬೆಂಬಲ ಅವರಿಗೆ ಇರುತ್ತದೆಂದು ಈ ಸಂದರ್ಭದಲ್ಲಿ ಹೇಳಲಿಚ್ಚಿಸುತ್ತೇನೆ’ ಎಂದು ರಾಮೇಗೌಡರ ಬೆಂಬಲಿತ ಸಾಹಿತಿ ಸೋಮು ರೆಡ್ಡಿ ಈ ರೀತಿ ತಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಂಡಿರುತ್ತಾರೆ.

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker