ಹೊಸ ಪರಿಚಯ

ಆಕಸ್ಮಿಕ ಚಿತ್ರದಿಂದ ನಿರ್ದೇಶಕನಾಗಬೇಕೆಂಬ ಚಿಗುರಿದ ಕನಸು…

ಉತ್ತರ ಕರ್ನಾಟಕದ ಗಂಡುಮೆಟ್ಟಿದ ನಾಡಿನ ಹುಡುಗ. ಶಾಲಾದಿನಗಳಲ್ಲಿ ಡಾ.ರಾಜ್‌ಕುಮಾರ್ ಚಿತ್ರಗಳನ್ನು ನೋಡಿ ಸಿನಿಮಾ ಗೀಳು ಹತ್ತಿಸಿಕೊಂಡಿದ್ದ. ಆತನಿಗೆ ಅಣ್ಣಾವ್ರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು….ಅದಕ್ಕಾಗಿಯೇ ತಾನು ಬೆಂಗಳೂರಿಗೆ ಹೋಗಬೇಕು…ಇಷ್ಟೇ ತಲೆಯಲ್ಲಿ. ಮನೆಯಲ್ಲಿ ಕೋರ್ಸ್ ಮುಗಿಸು ಎನ್ನುವ ¥s಼ೆÇÃರ್ಸ್. ಅಂತೂ ಇಲೆಕ್ಟಾçನಿಕ್ ಡಿಪ್ಲಮೋ ಮುಗಿಸಿ ಬಿ.ಇ ಓದುತ್ತೇನೆಂದು ಮನೆಯಲ್ಲಿ ಸುಳ್ಳು ಹೇಳಿ ರಾಜಧಾನಿ ಬೆಂಗಳೂರಿಗೆ ರೈಟ್‌ಹೇಳಿದ.

ಬೆಂಗಳೂರೆAದರೆ ಆತನಿಗೆ ಭಯ,ಹೊಸ ಕನಸ ಲೋಕ. ಅದರಲ್ಲೂ ಚಿತ್ರರಂಗವೆAದರೆ ಮಾಯಾಲೋಕ. ಹೇಗೆ ಒಳನುಗ್ಗಬೇಕೆಂದು ಗೊತ್ತಾಗದೆ ಕುತೂಹಲದ ಕಂಗಳಿAದ ಚಿತ್ರರಂಗದ ಹತ್ತಿರ ಹತ್ತಿರ ಹೋಗಿ ವಾಪಾಸು ಬಂದುಬಿಡುತ್ತಿದ್ದ. ಇದು ತನಗಲ್ಲವೆಂದು ಬೇರೆ ಕೆಲಸಕ್ಕೆ ಓಡಾಡಿದ. ಕೆಲಸ ಮಾತ್ರ ಸಿಕ್ಕಲಿಲ್ಲ. ಪುಟ್‌ಪಾತ್‌ನಲ್ಲಿ ಓಡಾಡುವಾಗ ಸಿನಿಮಾ ಕಲರ್ ಕಲರ್ ಪೋಸ್ಟರ್‌ಗಳು ಕಣ್ಣಿಗೆ ಬಿದ್ದು ಚಿತ್ರರಂಗದ ಕನಸುಗಳು ಮತ್ತೆ ಮತ್ತೆ ಕಂಗಳಲ್ಲಿ ತುಂಬಿಕೊಳ್ಳುತ್ತಿದ್ದವು.

ಇದು ಆಕಸ್ಮಿಕವಲ್ಲ…

ರಾಜಣ್ಣನ “ಆಕಸ್ಮಿಕ” ಚಿತ್ರ ನೋಡಿ ಆ ಚಿತ್ರದ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಮುಂದಿನ ಚಿತ್ರಗಳಲ್ಲಿ ತನ್ನ ಹೆಸರೂ ಬರಬೇಕೆಂದು ಅವರನ್ನು ಅರಸಿ ಹೋದ. ಅವರ ಮೂಲಕವಾದರೂ ರಾಜಣ್ಣನನ್ನು ಕಾಣಬಹುದೇನೊ ಎಂಬ ಒಳ್ಳೆಯ ಒಳಸಂಚೂ ಇದರಲ್ಲಿತ್ತು. ಅಂತೂ ಈತನ ಛಲವನ್ನು ನೋಡಿ ಟಿ.ಎಸ್.ಎನ್ ಸಹನಿರ್ದೇಕನಾಗಿ ಸೇರಿಸಿಕೊಂಡರು. ಅವರ ಜೊತೆ ಸಂಕ್ರಾAತಿ,ಗೆಳತಿ,ಜೀವನ್ಮುಖಿ,ದೂರ ತೀರ ಯಾನ,ಮಹಾಮಾಯೆ ಧಾರಾವಾಹಿಗಳಲ್ಲಿ…ಹಾಲಿನ ಹನುಮಕ್ಕ, ಕ್ಷೀರಸಾಗರ ಕಿರುಚಿತ್ರಗಳಲ್ಲಿ… ಹಾಗು ನೀಲಾ,ಸಿಂಗಾರವ್ವ, ಶಿವರಾಜ್‌ಕುಮಾರ್ ಅಭಿನಯದ “ಚಿಗುರಿದ ಕನಸು”

ಚಲನಚಿತ್ರಗಳಿಗೆ ಸಹಾಯಕನಾಗಿ ಕೆಲಸ ಮಾಡಿದ. ಎಂಟು ವರ್ಷ ಅವರೊಡಗೂಡಿ ಅನುಭವ ಪಡೆದು ತನ್ನ ಜೀವನದ ಏಳನ್ನು ನಿರ್ಧರಿಸಿಕೊಳ್ಳಲು ಅಣಿಯಾದ….ಪಕ್ಕ ಬಯಲು ಸೀಮೆಯ ಈ ಹುಡುಗ ರಾಜು ಮೊಕಾಶಿ.

ಸಂಚಿಕೆ ನಿರ್ದೇಶನಕ್ಕೆ ಇನ್ನೇಕೆ ಅಂಜಿಕೆ?

ಬೇರೆ ಬೇರೆ ನಿರ್ದೇಶಕರಿಂದ ಹೊಸಹೊಸ ಅನುಭವ ಪಡೆಯೋಣವೆಂದು ಈ-ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಸಿಹಿಕಹಿ ಚಂದ್ರು ಅವರ “ಸಿಲ್ಲಿಲಲ್ಲಿ”, ನಟರಾಜ್ ಅವರ “ಇದು ಎಂಥಾ ಲೋಕವಯ್ಯ” , ಜೀ-ಕನ್ನಡದ “ಪ್ರೀತಿಯೆಂಬ ಮಾಯೆ” ಧಾರಾವಾಹಿಗಳಿಗೆ ರಾಜು ಕೆಲಸ ಮಾಡಿದರು. ಉದಯ ವಾಹಿನಿಯಲ್ಲಿ ಪ್ರಸಾರವಾದ “ಗಾಯತ್ರಿ”, ಈ-ಟೀವಿಯ “ನಾನು ಅದಿತಿ ರಾವ್” ಹಾಗು ಸುವರ್ಣವಾಹಿನಿಯ “ಪ್ರೀತಿಯಿಂದ” ಧಾರಾವಾಹಿಗಳಿಗೆ ನಿರಂತರವಾಗಿ ಸಂಚಿಕೆ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದರು.

ಗಂಧರ್ವಲೋಕದ ದೀಪ…

ಪ್ರಸ್ತುತ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕಾರ್ತಿಕ ದೀಪ” ಧಾರಾವಾಹಿಗೆ ಹೊಸ ಕಥೆ-ಚಿತ್ರಕಥೆ ಬರೆದು ಹೊಸರೂಪ ನೀಡಿ ನಿರ್ದೇಶನದಲ್ಲಿ ತಲ್ಲೀನರಾಗಿದ್ದಾರೆ.

ಏರಲಿ ರಾಜು ಇಮೇಜು…

ಕನಸು ಕಾಣಲೂ ಒಂದು ಯೋಗ್ಯತೆ ಬೇಕು…ನನಸಾಗಿಸಲು ತಾಕತ್ತು ಬೇಕು. ಅವೆರಡೂ ರಾಜು ಅವರಿಗಿದೆ. ನಿರ್ಮಾಪಕರು ಸುರಿಯುವ ಹಣಕ್ಕೆ ಪ್ರತಿಯಾಗಿ ಬೆವರನ್ನು ಸುರಿಸಿ ಕೆಲಸ ಮಾಡುವ ರಾಜು ಚಿತ್ರೀಕರಿಸುವಾಗ ಎಂದೂ ರಾಜಿಯಾಗುವುದಿಲ್ಲ. ಒಮ್ಮೆ ಸ್ಕಿçಪ್ಟ್ ಚರ್ಚೆಗೊಂಡು ಅಂತಿಮ ರೂಪು ಪಡೆದುಕೊಂಡ ನಂತರ ಬಾಜಿ ಕಟ್ಟಿ ಗೆಲ್ಲುವ ಉತ್ಸಾಹ ರಾಜು ಅವರದು.

“ಸಿನಿಮಾ ಹಬ್ಬದೂಟ-ಸೀರಿಯಲ್ ನಿತ್ಯದೂಟ, ಜೀವನಕ್ಕಾಗಿ ಸೀರಿಯಲ್-ಜೀವನದ ಸಾಧನೆಗಾಗಿ ಸಿನಿಮಾ, ಸಿನಿಮಾದಲ್ಲಿ ಎರಡು ಗಂಟೆಗಳಲ್ಲಿ ಕಥೆ ಹೇಳಿದರೆ ಮೆಗಾಧಾರಾವಾಹಿಯಲ್ಲಿ ಎರಡು ವರ್ಷ ಕಥೆ ಹೇಳಬೇಕು ” ಎನ್ನುವ ರಾಜು ಮೊಕಾಶಿ, ಕನ್ನಡ ಚಿತ್ರರಂಗ ಗುರುತಿಸಿವಂತಹ ಸೃಜನಶೀಲ ನಿರ್ದೇಶಕ ತಾನಾಗಬೇಕೆಂದು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಿನಿಮಾಕ್ಕೆ ಸೀರಿಯಲ್‌ಗೆ ಪ್ರತ್ಯೇಕವಾಗಿ ಆಗುವಂತಹ ದೊಡ್ಡ ಕಥಾಕಣಜವೇ ಅವರ ಬಳಿ ಇದೆ. ಜೊತೆಗೆ ಇಷ್ಟು ವರುಷದ ಅನುಭವ ಅವರ ಜೊತೆಗಿದೆ. ಅವರ ಯೋಜನೆಗಳು ಸಾಕಾರಗೊಂಡು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಲಿ.

ಚಿಗುರಿತು ಕನಸು…ರಾಜ”ಯೋಗ”

ಶಿವಣ್ಣ ಅಭಿನಯದ “ಚಿಗುರಿದ ಕನಸು” ಚಿತ್ರಕ್ಕೆ ಕೆಲಸ ಮಾಡುವಾಗ ರಾಜು, ರಾಜಣ್ಣ ಅವರ ಜೊತೆ ಮಾತಾಡಿದ್ದು ಜೀವನದಲ್ಲಿ ಮರೆಯದ ಮಧುರ ಕ್ಷಣ.

-ಚಿನ್ಮಯ.ಎಂ.ರಾವ್ ಹೊನಗೋಡು

Tuesday, ‎October ‎11, ‎2011

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.