ಕವಿಸಮಯ

ಸಾವು ನಿಂತಲ್ಲೇ ಸ್ಥಬ್ದವಾಯಿತು.. !

ಭಾರತ ರತ್ನ ಮಾನ್ಯಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಮೌತ್ ಮೆ ಠನ್ ಗಯಿ ಎಂಬ ಕವನದ ಭಾವಾನುವಾದ

ಭಾವಾನುವಾದ – ನೃತ್ಯಗುರು ಸಹನಾ ಚೇತನ್

ಸಾವು ಅಲ್ಲೇ ಸ್ಥಬ್ದವಾಯಿತು!
ನಿನ್ನೊಡನೆ ಸರಸವಾಡುವ ಬಗೆ ನನ್ನದಾಗಿರಲಿಲ್ಲ
ತಿರುವಿನಲ್ಲಿ ಸಿಕ್ಕೇ ಸಿಗುವೆನೆಂಬ ಭಾಷೆಯನ್ನೆಂದೂ ನೀಡಿರಲಿಲ್ಲ!

ನಡೆವ ಹಾದಿಯ ಎದುರೇ ಅಚಾನಕ್ಕಾಗಿ ಬಂತು ನಿಂದಳು ಆಕೆ
ಜೀವನದೊಂದಿಗೆ ಎಲ್ಲೋ ವೈರವಾಯಿತೇನೋ ಎಂದೆನಿಸಿತೆನಗೆ!

ಸಾಯಲು ವಯಸ್ಸೆಷ್ಟು ? ಹು ಅರೆ, ಘಳಿಗೆಯೂ ಸಲ್ಲ,
ಜೀವನದ ಅನುಕ್ರಮ ಇಂದು ನಿನ್ನೆಯದಲ್ಲ!

ನಾ ಜೀವಿಸಿಹೆÉ ಮನಸಾರೆ, ಮನಸಾರೆ ಸಾಯಲು
ಹಿಂದಿರುಗಿ ಬರುವೆನು ಈ ನಿರ್ಗಮನಕ್ಕೇಕೆ ಅಳಲು!

ನೀ ಬರಬೇಡ ಎನ್ನ ಬಳಿ ಭಾರವಾದ ಕಳ್ಳ ಹೆಜ್ಜೆಗಳಿಂದ,
ಎದುರೆದುರಿಗೇ ನನ್ನ ಬಗ್ಗುಬಡಿ ಆ ನಿನ್ನ ಸಾಹಸೀ ಶಕ್ತಿಗಳಿಂದ !

ಜೀವನದ ಪಯಣಕ್ಕೆ ಸಾವಿನ ಆಲೋಚನೆ ಎಲ್ಲಿ ?
ಸಂಜೆಗೆಂಪಿನ ರೋಚಕತೆ ನಿಶೆಯ ಕೊಳಲಿನ ನಾದದಲ್ಲಿ !

ಜೀವನದಲಿ ಬೇಸರವೇ ಇಲ್ಲೆಂಬ ಭಾವನೆಯಲ್ಲವಿದು
ದುಃಖ ಬೆಟ್ಟದಷ್ಟಿದ್ದರೂ, ಪರರ ದುಃಖಕ್ಕೆ ಮಿಡಿವ ಹೃದಯವಿದು !

ಪರರಿಂದ ಪಡೆದೆ ನಾ ಬಣ್ಣಿಸಲಸದಳ ಅಗಾಧ ಪ್ರೀತಿ,
ಇನ್ನಿಲ್ಲ ತನ್ನವರು ಮುಂದೆ ಎನ್ನುವ ಹವಣಿಕೆಯ ಭೀತಿ !

ಪ್ರತೀ ಅಗಡಿಗೂ ಉತ್ತರವಿತ್ತಿದ್ದೇನೆ ಈ ಭುಜಬಲಗಳಿಂದ,
ಆರಿಹೋಗುವ ಜ್ವಲಿತ ದೀಪವನ್ನೂ ತಡೆದಿದ್ದೇನೆ ಅಬ್ಬರಿಸುವ ಚಂಡಮಾರುತಗಳಿಂದ!

ಆದರಿಂದು ನನ್ನ ಆತ್ಮ ಬಲವನ್ನೇ ಸೆದೆಬಡಿಯುವ ಬಿರುಗಾಳಿ ಎಬ್ಬಿದೆ,
ಜೀವನದ ದೋಣಿ ಬೊಬ್ಬಿರಿವ ತರಂಗಗಳ ಅತಿಥಿಯಾಗಿದೆ !

ಆತ್ಮಬಲವೇ ಇಹುದೊಂದೆನ್ನ ಬಳಿ ಈ ಸಾಗರವ ದಾಟಲು
ಆದರೆ ನೋಡು ಮನವೇ ನೋಡು ಈ ಬಿರುಗಾಳಿಯ ಬೊಬ್ಬರು !

ರಕ್ಷಕ ಉದಾರಿ…
ಆಹಾ…. ಅಂತೂ ನೋಡಲ್ಲಿ ಬಿರುಗಾಳಿಯ ಅಹಮಿಕೆಯು ಛಿದ್ರವಾಯ್ತು
ಸಾವು ನಿಂತಲ್ಲೇ ಸ್ಥಬ್ದವಾಯಿತು!

– ಭಾರತ ರತ್ನ ಮಾನ್ಯಶ್ರೀ ಅಟಲ್ ಬಿಹಾರಿ ವಾಜಪೇಯಿ

Maut se than gyi!

Jujhne ka mera irada na tha, mod par milenge iska vaada na tha,

Raasta rok kar khadi ho gyi, yun lga zindagi se badi ho gyi.

Maut ki umar kya hai? Do pal bhi nhi, Zindagi silsila, aaj kal ki nhi.

Mai ji bhar jiya, Mai man se maru, lautkar aunga, kooch se kyu daru?

Tu dabe paun, chori chipe se na aa, Saamne se waar kar phir mujhe aazma,

Maut se bekhabar, Zindagi ka safar, sham har surmai, raat bansi ka swar.

Baat aise nhi ki koi gam hi nhi, dard apne-paraye kuch kam bhi nhi.

Pyaar itna paraiyon se mujhko mila, Na apon se se baki hai koi gila.

Har chunauti se do haath maine kiye, Aandhiyon mai jalye hain bujhte diye.

Aaj jhakjhorta tez toofan hai, Naav bhanwaron ki bahoon mai mehmaan hai.

Paar pane ka kaayam magar hausla, dekh tewar toofan ka, tauriyaan tan gayi. Maut se than gyi!

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.