ಜಟಾಯು ಮಾದರಿಯಲ್ಲಿ ಕೇರಳ ನಿಸರ್ಗ ಉದ್ಯಾನವನ

ರಾಮಾಯಣದ ಪುರಾಣ ಪಕ್ಷಿ ಜಟಾಯು ಮಾದರಿಯಲ್ಲಿ ಕೇರಳದ ನೈಸರ್ಗಿಕ ಉದ್ಯಾನವನ್ನು ನಿರ್ಮಿಸಲಾಗುತ್ತಿದ್ದು, ಭಾರತದ ಪುರಾಣ ಹಾಗೂ ಸಾಹಸವನ್ನು ಉತ್ತೇಜಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಕೊಲ್ಲಂ ಜಿಲ್ಲೆಯ ಚಡಯಮಂಗಲಂ ನಿಸರ್ಗಧಾಮ 2016ರಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ. 200 ಅಡಿ ಉದ್ದ ಹಾಗೂ 150 ಅಡಿ ಅಗಲ ಮತ್ತು 70 ಅಡಿ ಎತ್ತರದ ಈ ಶಿಲ್ಪದಲ್ಲಿ 15 ಸಾವಿರ ಚದರ ಅಡಿ ಸ್ಥಳಾವಕಾಶ ಇರುತ್ತದೆ.

* ಈ ಶಿಲ್ಪವನ್ನು ಬೆಟ್ಟದ ತುತ್ತತುದಿಯಲ್ಲಿ ಬಿರ್ಮಿಸಲಾಗಿದೆ.

* ಈ ಪೌರಾಣಿಕ ಹಕ್ಕಿ ತನ್ನ ಅಂತಿಮ ಉಸಿರೆಳೆದ ಜಾಗ ಇದು ಎನ್ನಲಾಗಿದ್ದು, ಅದರ ಜ್ಞಾಪಕಾರ್ಥವಾಗಿ ಈ ಶಿಲ್ಪ ನಿರ್ಮಿಸಲಾಗುತ್ತಿದೆ.

* ಈ ನೈಸರ್ಗಿಕ ಉದ್ಯಾನವದಲ್ಲಿ ವಸ್ತುಸಂಗ್ರಹಾಲಯ ಕೂಡಾ ಇದ್ದು, ಇದು ರಾಮಾಯಣದ ಪ್ರಮುಖ ತುಣುಕುಗಳನ್ನು ಪರಿಚಯಿಸಲಿದೆ.

*. ಈ ಶಿಲ್ಪದ ತುದಿಯಲ್ಲಿ ಒಂದು ದೂರದರ್ಶಕವನ್ನೂ ಅಳವಡಿಸಲಾಗುತ್ತಿದೆ.

* ಇದರಲ್ಲಿ ಸಾಹಸಕ್ರೀಡೆಗಳಿಗೂ ಅವಕಾಶವಿದ್ದು, ಸುಮಾರು 20 ಸಾಹಸಕ್ರಿಡೆಗಳನ್ನು ಇಲ್ಲಿ ಆಡಬಹುದಾಗಿದೆ.

* ಕೇರಳ ಪ್ರವಾಸೋದ್ಯಮ ಇಲಾಖೆ ಮತ್ತು ಮಲೆಯಾಳಂ ಚಿತ್ರನಿರ್ಮಾಪಕ ರಾಜೀವ್ ಅಂಚಲ್ ಅವರ ಸಂಸ್ಥೆ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸುತ್ತಿದೆ.

Exit mobile version